ಆಳಂದ: ಸಿಯುಕೆಯಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಸಿಸ್ಟಮ್ಸ್‍ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಏಕೀಕರಣ ಅಟಲ್ ತರಬೇತಿ ಶಿಕ್ಷಕರೊಂದಿಗೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಟಿ. ಸೀತಾರಾಮ್ ಪೆÇ್ರ. ಅಮರೇಂದ್ರ ಇತರರು ಇದ್ದರು.
“ಭಾರತದ ಭವಿಷ್ಯ ಸ್ಮಾರ್ಟ್ ಸಾರಿಗೆ ವ್ಯವಸ್ಥೆಯಲ್ಲಿ” ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ
ಆಳಂದ: “ಸ್ಮಾರ್ಟ್ ಸಾರಿಗೆ, ವಿದ್ಯುತ್ ವಾಹನಗಳು ಮತ್ತು ಬುದ್ಧಿವಂತ ಇಂಧನ ವ್ಯವಸ್ಥೆಗಳು ಭಾರತದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸಬಲ್ಲ ಸಾಮಥ್ರ್ಯ ಹೊಂದಿವೆ. ದೇಶದ ಭವಿಷ್ಯವೇ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಎಐ–ಆಧಾರಿತ ಇಂಧನ ನಿರ್ವಹಣೆಯಲ್ಲಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ “ಎಲೆಕ್ಟ್ರಿಕ್ ಮೊಬಿಲಿಟಿ ಸಿಸ್ಟಮ್ಸ್‍ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಏಕೀಕರಣ” ವಿಷಯದ ಮೇಲೆ ಎಐಸಿಟಿಇ ಪ್ರಾಯೋಜಿತ ಒಂದು ವಾರದ ಅಟಲ್ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಿಬಿಎಸ್ ಬ್ಯಾಂಕ್‍ನ ಮೆಷಿನ್ ಲನಿರ್ಂಗ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಟಿ. ಸೀತಾರಾಮ್ ಅವರು ಮಾತನಾಡಿ, ವಿದ್ಯುತ್ ವಾಹನಗಳ ಚಲನಶೀಲತೆ, ಚಾಜಿರ್ಂಗ್ ಮೂಲಸೌಕರ್ಯ ವಿಸ್ತರಣೆ, ಬ್ಯಾಟರಿ ಸಾಮಥ್ರ್ಯ ಮತ್ತು ಇಂಧನ ನಿರ್ವಹಣೆಯಲ್ಲಿ ಎಐ ಚಾಲಿತ ವಿಶ್ಲೇಷಣೆ, ಬುದ್ಧಿವಂತ ಸ್ವಯಂಚಾಲನೆ ಮತ್ತು ಡೇಟಾ ಆಧಾರಿತ ನಿರ್ಧಾರ ಪ್ರಕ್ರಿಯೆಗಳ ಪಾತ್ರ ನಿರ್ಣಾಯಕವಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದ ಸಂಯೋಜಕ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪೆÇ್ರ. ಅಮರೇಂದ್ರ ಮತ್ಸ ಅವರು ಸ್ವಾಗತ ಮಾತುಕತೆ ನೀಡಿದರು. “ದೇಶದ ವಿವಿಧ ಸಂಸ್ಥೆಗಳ 60ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಮತ್ತು ವೃತ್ತಿಪರರು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದು, ಇ-ಮೊಬಿಲಿಟಿ, ಎಐ ಅನ್ವಯಿಕೆಗಳು, ಬ್ಯಾಟರಿ ವಿಶ್ಲೇಷಣೆ, ಸುಸ್ಥಿರ ವಿನ್ಯಾಸ ಮತ್ತು ಸ್ಮಾರ್ಟ್ ಗ್ರಿಡ್ ವ್ಯವಸ್ಥೆಗಳ ಇತ್ತೀಚಿನ ಪ್ರಗತಿಗಳ ಮೇಲೆ ಕೇಂದ್ರೀಕರಿಸಲಾಗಿದೆ” ಎಂದು ಅವರು ವಿವರಿಸಿದರು.
ತಜ್ಞರ ಉಪನ್ಯಾಸಗಳು, ಕೈಗೆuಟಿಜeಜಿiಟಿeಜನಗುವ ತರಬೇತಿ, ತಾಂತ್ರಿಕ ಪ್ರದರ್ಶನಗಳು ಹಾಗೂ ಮೌಲ್ಯಮಾಪನ ಚಟುವಟಿಕೆಗಳನ್ನು ಒಳಗೊಂಡಿರುವ ಈ ಕಾರ್ಯಾಗಾರ ಅಟಲ್ ಮಾರ್ಗಸೂಚಿಗಳಡಿ ನಡೆಯುತ್ತಿದೆ.
ಕಾರ್ಯಕ್ರಮವನ್ನು ಸಹ-ಸಂಯೋಜಕ ಡಾ. ಅರುಣಕುಮಾರ್ ಪಾಟೀಲ್ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ನಿಕಾಯದ ಡೀನ್ ಪೆÇ್ರ. ಪರಮೇಶ, ಡಾ. ಮೋಧಿ ಪಾಂಡುರಂಗ ಪ್ರಸಾದ್, ಡಾ. ಉದಯ ಪಾಟೀಲ್, ಡಾ. ಸುಧೀರ, ಡಾ. ಸಂತೋಷ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
Comments are closed.