ಆಳಂದ: ಪಟ್ಟಣದ ಸಿಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯನ್ನು ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಅವರು ಮಕ್ಕಳ ಮೂಲಕ ಸಸಿಗೆ ನೀರುಣಿಸಿ ಉದ್ಘಾಟಿಸಿದರು.
ಆಳಂದ: ಪಟ್ಟಣದ ಸಿಪಿಎಸ್‍ಸಿ ಸರ್ಕಾರಿ ಶಾಲೆಯಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಭವ್ಯವಾಗಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಶ್ರೇಣಿ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಅವರು ಮಕ್ಕಳ ಹಕ್ಕುಗಳ ಬಗ್ಗೆ ಗಂಭೀರವಾಗಿ ಮಾತನಾಡಿ, “ಮಕ್ಕಳಿಗೂ ತಮ್ಮದೇ ಹಕ್ಕುಗಳಿವೆ, ಅದನ್ನು ತಿಳಿಸುವ ಜಾಗೃತಿಯು ಸಮಾಜದಲ್ಲಿ ಇನ್ನೂ ಅಪೂರ್ಣವಾಗಿದೆ,” ಎಂದು ಅಭಿಮತಪಟ್ಟರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾನೂನು ವ್ಯವಸ್ಥೆ ಮತ್ತು ಸಂಸ್ಥೆಗಳು ಹೋರಾಟ ನಡೆಸುತ್ತಿದ್ದರೂ, ಜಾಗೃತಿ ಕೊರತೆಯಿಂದ ಘಟನೆಗಳು ಮುಂದುವರಿಯುವುದು ಬೇಸರದ ಸಂಗತಿ ಎಂದು ಸೂಚಿಸಿದ ಅವರು, ಶಿಕ್ಷಕರು-ಪೆÇೀಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಮಕ್ಕಳ ರಕ್ಷಣೆಗೆ ಜಾಗರೂಕರಾಗಿರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳೂ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ವಿ. ರಾಠೋಡ, ಪ್ರಧಾನ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ್ ಪಟೇಲ್, ಅಪರ ಸಿವಿಲ್ ನ್ಯಾಯಾಲಯ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ವಿ. ಬಂದಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಲಭೀಮ ಟಿ. ಸಿಂಧೆ, ಸದಸ್ಯ ಮಹಾದೇವ ಹತ್ತಿ, ಸಿಪಿಎಸ್ ಶಾಲೆಯ ಕನ್ನಡ ವಿಭಾಗದ ಮುಖ್ಯ ಶಿಕ್ಷಕ ರುಕ್ಮುಂ ಜಮಾದಾರ ಹಾಗೂ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಅಫ್ಸಾನಾ ಬೇಗಂ ಪಾಲ್ಗೊಂಡು ಶುಭ ಹಾರೈಸಿದರು.
ಸಂನ್ಮೂಲ ವ್ಯಕ್ತಿ ಸುಧೀರ ಬಿ. ಪಡಶೆಟ್ಟಿ ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಮತ್ತು ಕಾನೂನುಬದ್ಧ ರಕ್ಷಣೆಯ ಕುರಿತು ಉಪನ್ಯಾಸ ನೀಡಿದರು. ಕಲ್ಯಾಣಿ ಶೇರಿಕಾರ ನಿರೂಪಿಸಿದರು. ಸಂಗಣ್ಣ ಕೆರಮಗಿ ವಂದಿಸಿದರು.