ಹಲವು ಗ್ರಾಮ ಶಾಖೆಗಳ ಸ್ಥಾಪನೆ ನೂತನ ಪದಾಧಿಕಾರಿಗಳ ಆಯ್ಕೆ
ದಲಿತ ಸೇನೆ ತಾಲೂಕು ಘಟಕ ವಿಸ್ತರಣೆ
ಆಳಂದ: ಪಟ್ಟಣದಲ್ಲಿ ದಲಿತ ಸೇನೆ ನೂತನ ಅಧ್ಯಕ್ಷ ಪಿಂಟು ಸಾಲೇಗಾಂವ ಮಾತನಾಡಿದರು. ಅಪ್ಪು ಗೋಪಾಳೆ, ಪಿಂಕು ಭದ್ರೆ, ಸುದೀಪ ನಡಗೇರಿ ಇತರರು ಇದ್ದರು.
ಆಳಂದ: ದಲಿತ ಸೇನೆ ಆಳಂದ ತಾಲೂಕು ಘಟಕವು ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಮಾರ್ಗದರ್ಶನದಡಿ ತಾಲೂಕಿನಲ್ಲಿ ತನ್ನ ಜಾಲ ವಿಸ್ತರಿಸಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸೇನೆಯ ನೂತನ ತಾಲೂಕು ಅಧ್ಯಕ್ಷ ಪಿಂಟು ಸಾಲೇಗಾಂವ ಅವರ ಹಲವು ಶಾಖೆಗಳಿಗೆ ಪದಾಧಿಕಾರಿಗಳು ನೇಮಕ ಕೈಗೊಂಡು ಬಗ್ಗೆ ವಿವರಣೆ ನೀಡಿದರು.
ದಲಿತ ಸೇನೆಯು ಶೋಷಿತ, ಪೀಡಿತ, ದಮಿತ ಸಮುದಾಯಗಳ ಪರವಾಗಿ ಸದಾ ದ್ವನಿಯಾಗಿದೆ. ಸಾಮಾಜಿಕ ನ್ಯಾಯ, ಭ್ರμÁ್ಟಚಾರ ವಿರೋಧ, ದಲಿತ-ಬಹುಜನರ ಹಕ್ಕುಗಳ ರಕ್ಷಣೆಗಾಗಿ ನಮ್ಮ ಸಂಘಟನೆ ಬಲಿಷ್ಠವಾಗಿ ಕೆಲಸ ಮಾಡಬೇಕಿದೆ. ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಇನ್ನೂ ಹಲವು ಗ್ರಾಮಗಳಲ್ಲಿ ದಲಿತ ಸೇನೆ ಶಾಖೆಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಯುವಕರು, ಕಾರ್ಯಕರ್ತರು ತಮ್ಮ ಬೆಂಬಲ ಮತ್ತು ಶ್ರಮವನ್ನು ನೀಡಬೇಕು” ಎಂದು ಕರೆ ನೀಡಿದರು.
ಗಡಿ ಭಾಗದ, ಗದಲೆಗಾಂವ, ಕೂಲಡಹಂಗರಗಾ, ಸಕ್ಕರಗಾ ಸೇರಿದಂತೆ ಹಲವು ಗ್ರಾಮಗಳಲ್ಲಿ ದಲಿತ ಸೇನೆ ಗ್ರಾಮ ಶಾಖೆಗಳನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಇನ್ನೂ ತಾಲೂಕಿನ ಎಲ್ಲ ಗ್ರಾಮ ಶಾಖೆಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಹೋರಾಟ ರೂಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಗದಲೆಗಾಂವ ಗ್ರಾಮ ಶಾಖೆಯಲ್ಲಿ ಸುಗ್ರೀವ ಕಾಂಬಳೆ ಅಧ್ಯಕ್ಷರಾಗಿ, ವಿಶಾಲ ಸೂನಕಾಂಬಳೆ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಕೂಲಡಹಂಗರಗಾ ಶಾಖೆಯಲ್ಲಿ ಸುರೇಶ ಹತ್ತರಕಿ ಅಧ್ಯಕ್ಷರಾಗಿ, ನಾಗೇಶ ಬಾವಿಮನೆ ಕಾರ್ಯದರ್ಶಿಯಾಗಿ, ಶರಣಬಸಪ್ಪ ಮೇಲಿನಕೇರಿ ಉಪಾಧ್ಯಕ್ಷರಾಗಿ, ಅಜಯ ನಿಂಬಳಕಾರ ಸಂಘಟನಾ ಕಾರ್ಯದರ್ಶಿಯಾಗಿ, ಮಲ್ಲಿಕಾರ್ಜುನ ಹತ್ತರಕಿ ಖಜಾಂಚಿಯಾಗಿ ಆಯ್ಕೆಗೊಂಡಿದ್ದಾರೆ.
ಲಕ್ಷ್ಮೀಕಾಂತ ಕೊರಳ್ಳಿ ಉಪಾಧ್ಯಕ್ಷ, ರಾಜು ನಡಗೇರಿ ಕೊರಳ್ಳಿ ಅವರನ್ನು ಸೇನೆಗೆ ಸೇರ್ಪಡೆ ಮಾಡಲಾಯಿತು.
ಇದೇ ರೀತಿ ಸಕ್ಕರಗಾ ಗ್ರಾಮ ಶಾಖೆಯಲ್ಲಿ ಸೈಬಣ್ಣಾ ಡೂಂಗರೆ ಅಧ್ಯಕ್ಷರಾಗಿ, ಚೇತನ ಅಸ್ತಳಕರ ಕಾರ್ಯದರ್ಶಿಯಾಗಿ, ಲಕ್ಷ್ಮಿಣ್ಣ ಕೋರೆ ಉಪಾಧ್ಯಕ್ಷರಾಗಿ, ಗೌತಮ ಡೂಂಗರೆ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಅಪ್ಪು ಗೋಪಾಳ, ತಾಲೂಕು ಗೌರವ ಅಧ್ಯಕ್ಷ ಪಿಂಕು ಭದ್ರೆ, ಆಕಾಶ್ ಬಂಗರಗಾ, ಸುದೀಪ ನಡಿಗೇರಿ, ಪರ್ವೇಜ್ ಅನ್ಸಾರಿ, ಮಂಜುನಾಥ ಕಾಂಬಳೆ, ಶೇಖರ್ ಪೂಜಾರಿ, ವಿಜಯ ತಡೋಳಾÀ, ರಾಜು ನಡಗೇರಿ, ಶರಣು ಕುಲಕರ್ಣಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.