Shubhashaya News

ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ನಿರುಗುಡಿಯಲ್ಲಿ ಚಾಲನೆ

ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಲ ನೀಡಬೇಕು: ಜಿಪಂ ಸಿಇಒ ಭಂವಾರಸಿಂಗ್ ಮೀನಾ

ಆಳಂದ: ನಿರಗುಡಿ ಗ್ರಾಮ ಪಂಚಾಯತಿಯಲ್ಲಿ ಜಿಪಂ ಸಿಇಒ ಭಂವಾರಸಿಂಗ್ ಮೀನಾ ‘ಕಾಯಕ ಗ್ರಾಮ’ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಚಾಲನೆ ನೀಡಿದರು. ಇಒ ಮಾನಪ್ಪ ಕಟ್ಟಿಮನಿ, ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಬಿ. ಕಾಂಬಳೆ, ಉಪಾಧ್ಯಕ್ಷ ಲಾಯಕಲಿ ಎಂ. ದಖನೆ ಇತರರು ಇದ್ದರು.

ಆಳಂದ: ಗ್ರಾಮ ಪಂಚಾಯತಿ ಪ್ರದರ್ಶನ ಶ್ರೇಯಾಂಕದಲ್ಲಿ ಹಿಂದುಳಿದಿರುವ ನಿರ್ಗುಡಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಭಂವಾರಸಿಂಗ್ ಮೀನಾ ಅವರು ಹೇಳಿದರು.
“ಕಾಯಕ ಗ್ರಾಮ” ಕಾರ್ಯಕ್ರಮದಡಿ ಹಿಂದುಳಿದ ಗ್ರಾಮ ಪಂಚಾಯತ್‍ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಆಯ್ಕೆಯಾದ ತಾಲೂಕಿನ ನಿರುಗುಡಿ ಗ್ರಾಮ ಪಂಚಾಯತ್‍ನಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆಯ ಪ್ರಮುಖ ಅಂಶ “ಕಾಯಕ ಗ್ರಾಮ ಯೋಜನೆಯು ರಾಜ್ಯ ಸರ್ಕಾರದ 2025-26ನೇ ಆಯವ್ಯಯದಲ್ಲಿ ಘೋಷಿಸಲಾದ ಗ್ರಾಮ ಪಂಚಾಯತಿ ದತ್ತು ಕಾರ್ಯಕ್ರಮದ ಭಾಗವಾಗಿದೆ. ಇದರ ಮೂಲ ಉದ್ದೇಶವೆಂದರೆ ಹಿಂದುಳಿದ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಪರಿಣಾಮಕಾರಿ ಅನುμÁ್ಠನ, ಸಭೆಗಳ ನಿಯಮಿತ ಆಯೋಜನೆ, ತೆರಿಗೆ ವಸೂಲಾತಿ, ನರೇಗಾ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯ ಮೂಲಕ ಸಮಗ್ರ ಅಭಿವೃದ್ಧಿ ಸಾಧಿಸುವುದು,” ಎಂದು ಅವರು ಹೇಳಿದರು.
ಪಂಚತಂತ್ರ 2.0 ತಂತ್ರಾಂಶದ ಮೂಲಕ ತಯಾರಿಸುವ ಗ್ರಾಮ ಪಂಚಾಯತಿ ಪ್ರದರ್ಶನ ಶ್ರೇಯಾಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ಗ್ರಾಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ದತ್ತು ಪಡೆಯುತ್ತಾರೆ. ನಿರ್ಗುಡಿಯಂತಹ ಗ್ರಾಮಗಳಿಗೆ ತಲಾ 2 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
Àಗ್ರಾಮ ಸಭೆ, ಮಹಿಳಾ ಸಭೆ, ಮಕ್ಕಳ ಸಭೆಗಳನ್ನು ನಿಯಮಿತವಾಗಿ ನಡೆಸಿ, 5 ವರ್ಷದ ದೂರದೃಷ್ಟಿ ಯೋಜನೆ ಮತ್ತು ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವುದು. ಪಂಚತಂತ್ರ ತಂತ್ರಾಂಶದಲ್ಲಿ ನಡವಳಿಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ.
ಸ್ವಂತ ಕಟ್ಟಡ ನಿರ್ಮಾಣ, ರಸ್ತೆ-ಚರಂಡಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರು (ಜಲ ಜೀವನ್ ಮಿಷನ್), 100% ಐಇಆ ಬೀದಿ ದೀಪಗಳು, ಸೋಲಾರ್ ಅಳವಡಿಕೆ, ತೆರಿಗೆಯ 100% ವಸೂಲಾತಿ ಮತ್ತು ಸಕಾಲ ಸೇವೆಗಳು ಒಳಗೊಂಡಿವೆ ಎಂದರು.
ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಆಟದ ಮೈದಾನಗಳು; ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ, 100% ಲಸಿಕೆ, ಬಾಲಕಾರ್ಮಿಕ ನಿರ್ಮೂಲನೆ.: ಅನಿಮಿಯಾ ಮತ್ತು ಟಿಬಿ ಮುಕ್ತ ಗ್ರಾಮ, ಆರೋಗ್ಯ ಶಿಬಿರಗಳು, 100% ಶೌಚಾಲಯಗಳು, ಘನ-ದ್ರವ ತ್ಯಾಜ್ಯ ನಿರ್ವಹಣೆಗೆ ಉPಐಈ ಮಹಿಳಾ ಒಕ್ಕೂಟಗಳ ಒಳಗೊಳ್ಳುವಿಕೆ. ಬಾಲ್ಯ ವಿವಾಹ ನಿಲ್ಲಿಸುವಿಕೆ, ಕೌಶಲ್ಯ ತರಬೇತಿ, ವಿಶೇಷ ಚೇತನರಿಗೆ 5% ಅನುದಾನ ಮೀಸಲು, ನರೇಗಾ ಜಾಬ್ ಕಾರ್ಡ್‍ಗಳು. 100 ದಿನಗಳ ಉದ್ಯೋಗ ಖಾತ್ರಿ, ಮಹಿಳೆಯರ 60% ಭಾಗವಹಿಸುವಿಕೆ, ಲೆಕ್ಕಪರಿಶೋಧನೆ, ಬಯೋಮೆಟ್ರಿಕ್ ಹಾಜರಾತಿ. “ಈ ಯೋಜನೆಯಡಿ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು. ಅತ್ಯುತ್ತಮ ಕಾರ್ಯನಿರ್ವಹಣೆಗೆ ಪುರಸ್ಕಾರಗಳೂ ಇರಲಿವೆ. ನಿರ್ಗುಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ,” ಎಂದು ಎಂದು ಸಿಇಒ ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕಾಯಕ ಗ್ರಾಮವಾಗಿ ದತ್ತು ಪಡೆದ ದಿನವೇ 4 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡದ ದುರಸ್ಥಿಗೆ ಅನುದಾನವನ್ನು ಒದಗಿಸಿದರು. ವಿದ್ಯಾರ್ಥಿಗಳ ಬೌದ್ಧಿಕಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಇಒ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಲಾಖೆಯಿಂದ ಪೂರೈಸಲಾದ ಪುಸ್ತಕಗಳನ್ನು ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಹಸ್ತಾಂತರಿಸಿ, “ಈ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಯ ಮಾದರಿ ನಾಗರಿಕರಾಗಬೇಕು” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ (ಇಒ) ಮಾನಪ್ಪ ಕಟ್ಟಿಮನಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಕಾಂತಾಬಾಯಿ ಬಿ. ಕಾಂಬಳೆ, ಉಪಾಧ್ಯಕ್ಷ ಲಾಯಕಲಿ ಎಂ. ದಕನೆ, ಸದಸ್ಯರಾದ ಪರಮೇಶ್ವರ ಹತ್ತಿಕಾಳೆ, ಅಲ್ಲಾಬಕ್ಷ ಇನಾಮದಾರ, ಯಶವಂತರಾವ ಪಾಟೀಲ್, ರಾಜೇಂದ್ರ ಗಾಡೆಕರ, ಗುರುಕಿರಣ ಆ. ವಾಡಿ ಸೇರಿದಂತೆ ನಿರುಗುಡಿ, ಮಟಕಿ, ತೀರ್ಥ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಮಠಪತಿ, ಹಿರಿಯರಾದ ಸಿದ್ದಣ್ಣರಾವ್ ದೇಶಮುಖ, ರಾಹುಲ್ ಮುಲಗೆ, ಅಲಾವುದ್ದೀನ್ ಶೇಖ್, ಸಿದ್ದರಾಮ ತಳವಾರ್, ಸಂತೋμï ಸಾಳುಂಕೆ, ರೇವಪ್ಪ ಮುಲಗೆ, ವಿಜಯಕುಮಾರ್ ಇಟಗಾರ, ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಪಂಚಾಯತ ಸಿಬ್ಬಂದಿಗಳು ಸಹ ಭಾಗವಹಿಸಿದ್ದರು.

Comments are closed.

Don`t copy text!