ಕಿಣ್ಣಿಸುಲ್ತಾನ ಗ್ರಾಪಂನಲ್ಲಿ ಶಾಸಕರ ಪುತ್ರನ ತೀವ್ರ ಹಸ್ತಕ್ಷೇಪ
ಅಭಿವೃದ್ಧಿ ಅಧಿಕಾರಿಗೆ ಬೇದರಿಕೆ ಮೂಲಕ ಆಡಳಿತ ನಿರ್ವಹಣೆಗೆ ಅಡ್ಡಿ: ಶೇಖ ಆರೋಪ
ಆಳಂದ: ಕಿಣ್ಣಿಸುಲ್ತಾನ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಮಹಿಬೂಬಭಾಷಾ ಶೇಖ ಮಾತನಾಡಿದರು.

ಆಳಂದ: ಬಿಜೆಪಿ ಬೆಂಬಲಿತ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರ ಸಹೋದರನ ಪುತ್ರ ಆರ್.ಕೆ. ಪಾಟೀಲ ಅವರಿಂದ ನಡೆಯುತ್ತಿರುವ ತೀವ್ರ ರಾಜಕೀಯ ಹಸ್ತಕ್ಷೇಪದಿಂದ ಪಂಚಾಯತ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮಹಿಬೂಬ ಭಾμÁ ಶೇಖ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಈ ಹಸ್ತಕ್ಷೇಪವು ತಮ್ಮ ಮುಸ್ಲಿಂ ಗುರುತು ಮತ್ತು ಬಿಜೆಪಿ ಸಂಬಂಧಿತ ಅಧ್ಯಕ್ಷ ಸ್ಥಾನದಿಂದಾಗಿ ಮಾಡುತ್ತಿದ್ದಾರೆ. ಈ ಸ್ಥಿತಿ ಮುಂದುವರಿದರೆ ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಯೊಂದು ಕೆಲಸಕ್ಕೂ ಬಿಜೆಪಿ ಅಧ್ಯಕ್ಷರಿದ್ದಾರೆ ಮಾಡಬೇಡಿ ಎನ್ನುತ್ತಿದ್ದಾರೆ. ಗ್ರಾಮಗಳಲ್ಲಿ ಬೀದಿ ದೀಪ, ಕಸ ಸ್ವಚ್ಛತೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಮತ್ತೊಂದಡೆ ಜನ ಬೀದಿ ದೀಪ, ನೀರಿನ ಪಂಪಸೆಟ್ ದುರಸ್ಥಿ ಹಾಗೂ ಕಳೆ ನಾಶಕ ಔಷಧಿ ಸಿಂಪರಣೆಗೆ ಹಣ ಬೇಕು. ಹಣ ಕೊಡದಿದ್ದರೆ ಕೆಲಸ ಹೇಗೆ ಮಾಡಬೇಕು. ಪಿಡಿಒಗೆ ಹೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಈಗಾಲೇ ಆರ್.ಕೆ.ಪಾಟೀಲ ಅವರು ಇಲ್ಲಿನ ಗ್ರಾಪಂ ಕಾರ್ಯನಿರ್ವಹಿಸಿದ್ದ ಮೂವರು ಅಭಿವೃದ್ಧಿ ಅಧಿಕಾರಿಗಳ ಮೇಲೆ ಲೋಕಾಯಕ್ತರಿಗೆ ದೂರಿದ್ದಾರೆ. ಈಗ ಬಂದಿರುವ 4ನೇ ಅಧಿಕಾರಿಯ ಮೇಲೂ ದೂರಿನ ಬೇದರಿಕೆ ಒಡ್ಡಿದ್ದಾರೆ. ಇದರಿಂದ ಯಾವುದೇ ಹಣಕಾಸಿನ ಕೆಲಸ ನಡೆಯದೆ ಇರುವುದರಿಂದ ಬೀದಿ ದೀಪ, ಪಂಪಸೆಟ್ ದುರಸ್ಥಿಯಂತ ಕೆಲಸಗಳು ಸಹ ನಡೆಯದಂತೆ ಮಾಡಿದ್ದಾರೆ.ಬಡವರಿಗೆ ಬಂದ ಮನೆಗಳು ನೆನಗುದ್ದಿಗೆ ಬಿದ್ದಿವೆ. ಎಂದು ಶೇಖ ಅವರು ದೂರಿದರು.
ಹಿನ್ನೆಲೆ ಮತ್ತು ಆರೋಪಗಳು: ಪಂಚಾಯತಿ ವ್ಯಾಪ್ತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೋಟಾರ್ ದುರಸ್ತಿ, ಚರಂಡಿ ನಿರ್ಮಾಣ, ಬೀದಿ ದೀಪ, ಕಸ ಸ್ವಚ್ಛತೆ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‍ಗಳನ್ನು ಆರ್.ಕೆ. ಪಾಟೀಲ ಅವರ ಬೆಂಬಲಿಗರು ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತಡ ಹೇರಿ ತಡೆಯುತ್ತಿದ್ದಾರೆ. ಗ್ರಾಮದಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದಂತೆ ಪಾಟೀಲ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಅಡ್ಡಿಪಡಿಸುತ್ತಿದ್ದಾರೆ ಎಂದು ಶೇಖರ ಆರೋಪಿಸಿದರು.
ತಮ್ಮ 25 ತಿಂಗಳ ಅಧಿಕಾರಾವಧಿಯಲ್ಲಿ ಮೂವರು ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಅವರ ಮಾತುಕೇಳದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರು ಲೋಹಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಸಣ್ಣ-ಪುಟ್ಟ ಹಣಕಾಸಿನ ವ್ಯವಹಾರಗಳೂ ನಡೆಯದಂತಾಗಿದ್ದು, ಅವರು ಬಿಜೆಪಿ ಜಾತಿ ಧರ್ಮದ ಮೇಲೆ ರಾಜಕೀಯ ಮಾಡುತ್ತಿದೆ ಎನ್ನುವ ಶಾಸಕರು ಮುಸ್ಲಿಂ ವ್ಯಕ್ತಿ ಅಧ್ಯಕರಾಗಿರುವುದ ಸಹಿಲಾಗುತ್ತಿಲ್ಲ ಬಾಯಿಯಲ್ಲೇ ಸಂವಿಧಾನದ ಮಾತಿದೆ, ಕೃತಿಯಲ್ಲಿ ವಿರೋಧಿಸುತ್ತಿರುವುದು ನನ್ನ ಮೇಲೆ ಅವರು ಮಾಡುತ್ತಿರುವ ಸವಾರಿಯೇ ಸಾಕ್ಷಿಯಾಗಿದೆ ಎಂದು ಅಕ್ರೋಶ ಹೊರಹಾಕಿದರು.
ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಈ ವಿಷಯವನ್ನು ಗಮನಕ್ಕೆ ತಂದರೂ, ಅವರು ಹತಾಶೆಯಿಂದ ಕೂಡಿದ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಶಾಸಕ ಬಿ.ಆರ್. ಪಾಟೀಲ ಅವರು ಮುಸ್ಲಿಂ ಮತ್ತು ದಲಿತ ಮತಗಳನ್ನು ಪಡೆದು ಗೆದ್ದಿದ್ದರೂ, ತಾವು ಬಿಜೆಪಿಯ ಮುಸ್ಲಿಂ ಅಧ್ಯಕ್ಷ ಎಂಬ ಕಾರಣಕ್ಕೆ ತಮ್ಮ ಕಾರ್ಯಕ್ಕೆ ರಾಜಕೀಯವಾಗಿ ತಡೆಯೊಡ್ಡಲಾಗುತ್ತಿದೆ. ಈ ರಾಜಕೀಯ ಹಸ್ತಕ್ಷೇಪ ಮುಂದುವರಿದರೆ, ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶೀಘ್ರವೇ ತಾಪಂ, ಜಿಪಂ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಶೇಖ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರ ಬೆಂಬಲಿ ಗ್ರಾಪಂ ಸದಸ್ಯರು ಇದ್ದರು.
Comments are closed.