ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಾಧಕ ಉಪನ್ಯಾಸಕರನ್ನು ಕುಲಪತಿ ಪ್ರೊ. ಬಟ್ಟ ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಗೌರವಿಸಿದರು.
ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) 2023-24 ನೇ ಶೈಕ್ಷಣಿಕ ವರ್ಷಕ್ಕಾಗಿ ಎನ್‍ಐಆರ್‍ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು)ಯಲ್ಲಿ 150 ರಿಂದ 200 ಶ್ರೇಣಿಯಲ್ಲಿ ಸ್ಥಾನ ಪಡೆದಿದೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಯುಕೆ ಶಿಕ್ಷಕರ ಸಾಧನೆಯ ಹಿನ್ನೆಲೆ, ಶಿಕ್ಷಕರ ಕಠಿಣ ಪರಿಶ್ರಮವನ್ನು ಶ್ಲಾಘಿಸಿ, ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ದಿಕ್ಕುಗಳನ್ನು ನೀಡುವುದಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ” ಎಂದು ಅವರು ಹೇಳಿದರು.
“ಶಿಕ್ಷಕರೇ ವಿಶ್ವವಿದ್ಯಾನಿಲಯದ ಬೆನ್ನೆಲುಬು. ಆದರೆ ಈ ಸಾಧನೆಗೆ ತೃಪ್ತಿಪಡದೆ, ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಹೊರಹೊಮ್ಮುವುದು ನಮ್ಮ ಗುರಿ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳು, ಮೂಲಸೌಕರ್ಯ, ಹಳೆಯ ವಿದ್ಯಾರ್ಥಿ ಜಾಲ, ನಿಯೋಜನೆ ಕೋಶ, ಇಂಟನ್ರ್ಶಿಪ್ ಮತ್ತು ಉದ್ಯಮ-ಶೈಕ್ಷಣಿಕ ಸಹಕಾರದ ಮೂಲಕ ನಾವು ಮುಂದುವರಿಯಬೇಕು” ಎಂದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಮಾತನಾಡಿ, “ಶಿಕ್ಷಕರು ಯುವಕರನ್ನು ಪರಿವರ್ತಿಸುವ ಶಕ್ತಿಯುಳ್ಳವರು. ಜ್ಞಾನವನ್ನು ಸೃಷ್ಟಿಸುವ ಬ್ರಹ್ಮ, ಸಂರಕ್ಷಿಸುವ ವಿಷ್ಣು, ದುಷ್ಟಶಕ್ತಿಗಳನ್ನು ನಾಶಮಾಡುವ ಮಹೇಶ್ವರರಂತೆ ಗುರು ಸಮಾಜಕ್ಕೆ ಬೆಳಕನ್ನು ನೀಡುತ್ತಾರೆ. ಆದ್ದರಿಂದ ಶಿಕ್ಷಕರಲ್ಲಿ ಜ್ಞಾನ, ಪ್ರಾಮಾಣಿಕತೆ, ಬದ್ಧತೆ ಮತ್ತು ಸಮರ್ಪಣೆ ಎಂಬ ಗುಣಗಳು ಅವಶ್ಯ” ಎಂದು ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಪೆÇ್ರ. ಎನ್. ಸತ್ಯನಾರಾಯಣ ಅವರು, “ಶಿಕ್ಷಕರಾಗಿ ನಮ್ಮ ಪಾತ್ರವನ್ನು ಆತ್ಮಾವಲೋಕನ ಮಾಡಿಕೊಳ್ಳಲು ಇದು ಒಂದು ಸಂದರ್ಭ. ವಿದ್ಯಾರ್ಥಿಗಳಿಗೆ ನಾವು ಮಾದರಿಯಾಗಿರಬೇಕು” ಎಂದು ಕುಲಸಚಿವ ಬಿರಾದಾರ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಶೋಧನೆ, ಪ್ರಕಟಣೆ ಹಾಗೂ ಪುರಸ್ಕಾರಗಳಲ್ಲಿ ಮೆರೆದ ಪೆÇ್ರ. ಶೇಷನಾಥ ಭೋಸ್ಲೆ, ಡಾ. ಸಂಜೀತ್ ಸರ್ಕಾರ್, ಡಾ. ನುರಸಿಂಗ ಚರಣ್ ಪ್ರಧಾನ್, ಡಾ. ರೋಹಿಣಾಕ್ಷ ಶ್ರೀರ್ಲಾರು, ಪೆÇ್ರ. ಎಂ.ಎ. ಅಸ್ಲಂ, ಡಾ. ಬಾಬು ಎನ್, ಡಾ. ಜಯದೇವಿ ಜಂಗಮಶೆಟ್ಟಿ, ಡಾ. ರಾಘವೇಂದ್ರ ಬೋನಾಳ್, ಡಾ. ಪಿ.ಎಸ್. ಕಟ್ಟಿಮಣಿ ಅವರನ್ನು ಸನ್ಮಾನಿಸಲಾಯಿತು.
ಪೆÇ್ರ. ಆರ್.ಎಸ್. ಹೆಗಡಿ ಸ್ವಾಗತಿಸಿ, ಡಾ. ರಾಜೀವ್ ಜೋಶಿ ನಿರೂಪಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ, ಡಾ. ರವಿ ಕಿರಣ್ ನಾಖೋಡ್ ಮತ್ತು ಡಾ. ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.
ಪೆÇ್ರ. ಚನ್ನವೀರ್ ಆರ್.ಎಂ, ಪೆÇ್ರ. ಜಿ.ಆರ್. ಅಂಗಡಿ, ಪೆÇ್ರ. ಪರಮೇಶ್, ವಿವಿಧ ನಿಕಾಯಗಳ ಡೀನ್‍ರು, ವಿಭಾಗಾಧ್ಯಕ್ಷರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
Comments are closed.