Shubhashaya News

ದೇಶದ ಆರ್ಥಿಕತೆಗೆ ವಿದ್ಯಾರ್ಥಿಗಳ ಪಾಲುದಾರಿಕೆ ಅಗತ್ಯ” ಕುಲಪತಿ

“ಜ್ಞಾನದಿಂದ ಹೂಡಿಕೆ ದಾರಿತೋರಬೇಕು, 

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಯುವ ಹೂಡಿಕೆದಾರರಿಗೆ ಚತುರ ನಡೆ” ಜಾಗೃತಿಯನ್ನು ಸಿಯುಕೆ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿದರು. ಡಾ. ಕುನಾಲ್ ಗೌರವ್, ಪೆÇ್ರ. ಪಾಂಡುರಂಗ ಪತ್ತಿ ಇತರರು ಇದ್ದರು.

 

ಆಳಂದ: “ಸಂಪತ್ತು ಸೃಷ್ಟಿಗೆ ಹೂಡಿಕೆ ಮಾರ್ಗಗಳ ಅರಿವು ಅತ್ಯಂತ ಮುಖ್ಯ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನ್ರಾಯಣ ಅಭಿಪ್ರಾಯಪಟ್ಟರು.

ತಾಲೂಕಿನ ಸಿಯುಕೆಯಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಆಯೋಜಿಸಿದ್ದ “ಬುದ್ಧಿವಂತಿಕೆಯಿಂದ ಸಂಪತ್ತನ್ನು: ಯುವ ಹೂಡಿಕೆದಾರರಿಗೆ ಚತುರ ನಡೆ” ಎಂಬ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೂಡಿಕೆ ಎಂದರೆ ಕೇವಲ μÉೀರು ಮಾರುಕಟ್ಟೆ ಮಾತ್ರವಲ್ಲ, ಚಿನ್ನ, ಭೂಮಿ, ಮನೆ, ಮ್ಯೂಚುವಲ್ ಫಂಡ್‍ಗಳು ಹಾಗೂ ಇತರ ಆಸ್ತಿಗಳಲ್ಲಿಯೂ ಹೂಡಿಕೆ ಸಾಧ್ಯವೆಂದು ಅವರು ತಿಳಿಸಿದರು.

“ವಿದ್ಯಾರ್ಥಿ ಜೀವನದಲ್ಲಿ ಹಣ ಹೂಡಲು ಸರಿಯಾದ ಸಮಯವಲ್ಲ, ಆದರೆ ಹೂಡಿಕೆ ಮಾರ್ಗಗಳನ್ನು ಅರಿತುಕೊಳ್ಳಲು ಇದು ಸೂಕ್ತ ಕಾಲ. ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ಹೂಡಿಕೆ ಭವಿಷ್ಯದಲ್ಲಿ ದೊಡ್ಡ ಸಂಪತ್ತಾಗಿ ರೂಪಾಂತರಗೊಳ್ಳುತ್ತದೆ” ಎಂದು ಕುಲಪತಿ ಹೇಳಿದರು.

ಸಂಪನ್ಮೂಲ ವ್ಯಕ್ತಿ ಪುಣೆಯ ಎಂಐಟಿ ವಲ್ರ್ಡ್ ಪೀಸ್ ಯೂನಿವರ್ಸಿಟಿಯ ಡಾ. ಕುನಾಲ್ ಗೌರವ್ ಮಾತನಾಡಿ, “ಆರ್ಥಿಕ ಸ್ವಾವಲಂಬನೆಗೆ ಮೂರು ಪಾಠಗಳು ಮುಖ್ಯ – ಜ್ಞಾನ-ಕೌಶಲ್ಯ-ವೈಯಕ್ತಿಕತೆಗೆ ಹೂಡಿಕೆ, ಭವಿಷ್ಯಕ್ಕಾಗಿ ಉಳಿತಾಯ ಮತ್ತು ಬರಿ ಉಳಿವಲ್ಲ, ಬುದ್ಧಿವಂತ ಹೂಡಿಕೆ. ಆದಾಯ ಬಂದ ತಕ್ಷಣ ಹೂಡಿಕೆ ಪ್ರಾರಂಭಿಸಿ” ಎಂದು ಸಲಹೆ ನೀಡಿದರು.

ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪೆÇ್ರ. ಪಾಂಡುರಂಗ ಪತ್ತಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, “ಪಾಕೆಟ್ ಮನಿಯ ಅರ್ಧಭಾಗವನ್ನಾದರೂ ಆಸ್ತಿಗಳಲ್ಲಿ ಹೂಡಿಕೆ ಮಾಡಿ” ಎಂದರು.

ಕಾರ್ಯಕ್ರಮದಲ್ಲಿ ಡಾ. ಮೊಹಮ್ಮದ್ ಜೋಹೈರ್ ಸ್ವಾಗತಿಸಿದರು. ಡಾ. ಮಹೇಂದರ್ ವಂದಿಸಿದರು. ಸಯ್ಯದ್ ಸಾಹಿಲ್ ಎಕ್ಬಾಲ್ ಮತ್ತು ಪರೋಮಿತ್ ರಾಯ್ ನಿರೂಪಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ ಗೀತೆಯನ್ನು ಹಾಡಿದರು.

ಆಯೋಜಕ ಸಮಿತಿಯ ಡಾ. ಸೈಲಾಜ್ ಕೊನೆಕ್, ಡಾ. ಸುಮಾ ಸ್ಕಾರಿಯಾ, ಪೆÇ್ರ. ವಿಜಯಕುಮಾರ್, ಪೆÇ್ರ. ದೇವರಾಜಪ್ಪ, ಪೆÇ್ರ. ಪದ್ಮಶ್ರೀ, ಡಾ. ಗೌತಮ್, ಡಾ. ಸುμÁ್ಮ, ಡಾ. ಸಫಿಯಾ ಪರ್ವೀನ್, ಡಾ. ರಂಗನಾಥನ್, ಡಾ. ನಟರಾಜ್, ಡಾ. ನವೀನ್, ಡಾ. ಜಗದೀಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave A Reply

Your email address will not be published.