Shubhashaya News

ಸತತ ಮಳೆಯಿಂದ ಬೆಳೆ ಹಾನಿ: ನೇಣಿಗೆ ರೈತ ಬಲಿ

ಆಳಂದ: ಲೀಜಿಗೆ ಮಾಡಿದ ಹೊಲದ ಬೆಳೆ ಸತತ ಮಳೆಗೆ ಬೆಳೆ ಹಾನಿ ಸಹಿಸಲಾಗದೇ ಕಂಗಾಲಾದ ಸೀಡ್ಸ್‍ಫಾರಂ ರೈತ ಸುರೇಶ ಚವ್ಹಾಣ ನೇಣಿಗೆ ಶರಣಾಗಿದ್ದಾನೆ.

ಆಳಂದ: ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಸುಮಾರು 22 ಎಕರೆ ಜಮೀನು ಪಡೆದು ಬಿತ್ತನೆಮಾಡಿದ ರೈತನೋರ್ವನಿಗೆ ಸತತ ಮಳೆಯಿಂದ ಬೆಳೆ ಹಾನಿಯಾದ ಪ್ರಯುಕ್ತ ಮನನೊಂದು ನೇಣಿಗೆ ಬಲಿಯಾದ ಘಟನೆ ಸ್ಥಳೀಯ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಶನಿವಾರ ವರದಿಯಾಗಿದೆ.
ಪಟ್ಟಣದ ಹೊರವಲಯದ ತಾಲೂಕು ಆಡಳಿತಸಭಧದ ಸಮೀಪದ ಸೀಡ್ಸ್‍ಫಾರಂ ತಾಂಡಾ ಸುರೇಶ ರಾಮು ಚವ್ಹಾಣ (35), ಎಂಬುವ ರೈತನೇ ನೇಣಿಗೆ ಕೊರಳೊಡ್ಡಿದ ನತ ದೃಷ್ಟನಾಗಿದ್ದಾನೆ.
ಬಿತ್ತನೆ ಬೀಜ ಗೊಬ್ಬರಕ್ಕಾಗಿ 2.65 ಲಕ್ಷ ರೂಪಾಯಿ ಖಾಸಗಿ ಸಾಲ ಮಾಡಿದ್ದು, ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ಹೇಗೆ ತೀರಿಸಬೇಕು ಎಂದು ಮನನೋಂದು ನೇಣುಹಾಕಿಕೊಂಡ ಆತ್ಮಹತ್ಯಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮೃತನ ಕುಟುಂಬದಲ್ಲಿ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ತಾಯಿ ಇದ್ದು, ಸುರೇಶನ ಅಗಲಿಕೆಯಿಂದ ಕುಟುಂಬವು ಕಂಗಾಲಾಗಿ ದುಃಖದಲ್ಲಿ ಮುಳಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave A Reply

Your email address will not be published.