ಆಳಂದ: ಬೆಳಮಗಿ ಗ್ರಾಪಂ ಉದ್ಯೋಗ ಖಾತ್ರಿಯಡಿ ನಡೆದ ಕಾಮಗಾರಿಗಳ ಒಂಬುಡ್ಸ್ ಮನ್ ತಂದವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆಳಂದ: ಬೆಳಮಗಿ ಗ್ರಾಮ ಪಂಚಾಯತಿಯಲ್ಲಿ 2023-24 ಮತ್ತು 2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು 1 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪಕ್ಕೆ ಪ್ರತಿಯಾಗಿ ಜಿಪಂ ಅಧಿಕಾರಿಗಳ ಒಂಬುಡ್ಸ್ ಮನ್ ತಂಡವು ಭೇಟಿ ನೀಡಿ ಮಂಗಳವಾರ ಪರಿಶೀಲಿಲನೆ ನಡೆಸಿದೆ.
ಈ ಬಗ್ಗೆ ಜಿಲ್ಲಾ ಪಂಚಾಯತ್ ತನಿಖಾಧಿಕಾರಿಗಳು ಮತ್ತು ಒಂಬುಡ್ಸ್‍ಮನ್ ನಡೆಸಿದ ಕಾಮಗಾರಿ ಪರಿಶೀಲನೆಯಲ್ಲಿ ಭ್ರμÁ್ಟಚಾರದ ಸತ್ಯಾಂಶ ಬಯಲಾಗಿದೆ ಎಂದು ದೂರುದಾರ ಗ್ರಾಪಂ ಸದಸ್ಯೆ ಪಾರ್ವತಿ ಅಂಬಾರಾಯ ಅವರು ತಿಳಿಸಿದ್ದಾರೆ.
ತನಿಖೆಯ ವಿವರಗಳ ಪ್ರಕಾರ, ಚರಂಡಿ, ಕಂಪೌಂಡ್, ಕಚ್ಚಾ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕೆಲವು ಕಾಮಗಾರಿಗಳು ದಾಖಲೆಯಂತೆ ನಡೆದಿಲ್ಲ, ಇನ್ನೂ ಕೆಲವು ದಾಖಲೆಗಳು ಕಾಮಗಾರಿಗೆ ಸಂಬಂಧವೇ ಇಲ್ಲದಂತೆ ಕಂಡುಬಂದಿವೆ. ಇದರ ಜೊತೆಗೆ, ಕೂಲಿ ಕಾರ್ಮಿಕರ ದೈನಂದಿನ ಹಾಜರಾತಿಯನ್ನು ಸಂಗ್ರಹಿಸಿದರೂ, ಉದ್ದೇಶಪೂರ್ವಕವಾಗಿ ಅವರಿಗೆ ಕೂಲಿ ಪಾವತಿಯನ್ನು ಮಾಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿಯ ಪಿಡಿಒ, ಎಇ, ಟಿಎಇ, ಬಿಎಫ್‍ಟಿ, ವೆಂಡರ್‍ಗಳು ಹಾಗೂ ಅಧ್ಯಕ್ಷರು ಸೇರಿದಂತೆ ಕೆಲವು ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಭ್ರμÁ್ಟಚಾರದಲ್ಲಿ ಜಾತಿವಾದ, ಪಕ್ಷಭೇದ ಮತ್ತು ಅಧಿಕಾರ ದುರುಪಯೋಗದ ಆರೋಪಗಳೂ ಕೇಳಿಬಂದಿವೆ.
ಈ ಕುರಿತು ಗ್ರಾಮ ಪಂಚಾಯತ್ ಸದಸ್ಯೆ ಪಾರ್ವತಿ ಅಂಬಾರಾಯ ಬೆಳಮಗಿ ನೇತೃತ್ವದಲ್ಲಿ ಈ ಭ್ರμÁ್ಟಚಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ, ದಂಡ ವಸೂಲಾತಿ ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸಲು ಅವರು ಒತ್ತಾಯಿಸಿರುವ ಅವರು, ಈ ಸಂಬಂಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ರೂಪಿಸಲಾಗುವುದು ಎಂದು ಪಾರ್ವತಿ ತಿಳಿಸಿದ್ದಾರೆ.
ಕಾನೂನು ಕ್ರಮ ಮತ್ತು ಜನಾಂದೋಲನಕ್ಕೆ ಸಜ್ಜು:
ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಈ ಭ್ರμÁ್ಟಚಾರದ ವಿರುದ್ಧ ಧ್ವನಿ ಎತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಮುಂದಿನ ಹಂತದ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
Comments are closed.