ಆಳಂದ: ಕಮಸರ ನಾಯಕ ಪಾರ್ದಿ ತಾಂಡಾ ಜನತೆಗೆ ಸೌಲಭ್ಯ ದೊರೆಯದೆ ವಲಸೆಯತ್ತ ಮುಖಮಾಡತೊಡಗಿದ್ದರಿಂದ ತಾಂಡಾ ಬಣಗುಟ್ಟುತ್ತಿದೆ.
ಕಮಸರ್ ನಾಯಕ ಪಾರ್ದಿ ತಾಂಡಾ ಇನ್ನೂ ನಾಗರಿಕ ಮೂಲಸೌಲಭ್ಯಗಳಿಂದ ವಂಚಿತ! ಜಿಲ್ಲಾಧಿಕಾರಿಗಳ ಸೂಚನೆಯ ಬಳಿಕವೂ ಕಾರ್ಯ ಆಮೆ ವೇಗದಲ್ಲಿ. ಮತದಾರ ಪಟ್ಟಿಯಲ್ಲಿದ್ದರೂ ಸಿಗುತ್ತಿಲ್ಲ ಸೌಲಭ್ಯಗಳು, ಆಡಳಿತ ಸಭೆ ನಡೆಸುವ ಹೇಳಿಕೆಗೆ ಸೀಮಿತ
ಆಳಂದ: ಐದನೂರಿಗೂ ಹೆಚ್ಚು ಜನಸಂಖ್ಯೆಯುಳ್ಳ, ಆದರೆ ನಾಗರಿಕ ಸಮಾಜದಿಂದ ಇನ್ನೂ ದೂರವಿರುವ ಕಮಸರ್ ನಾಯಕ ಪಾರ್ದಿ ತಾಂಡಾ ಇದೀಗ ಮುಖ್ಯ ವಾಹಿನಿಗೆ ಬರಲಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ.
ಹಳ್ಳಿಸಲಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ತಾಂಡಾ ಜನತೆಗೆ ಸರ್ಕಾರಿ ಸೌಲಭ್ಯಗಳಿಂದ ಹಲವು ದಶಕಗಳಿಂದಲೂ ಬದುಕು ನಡೆಸುತ್ತಿದ್ದು, ಇದರ ಕುರಿತು ಇದೇ ಮಾರ್ಚ್ 21ರಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರು ಇದರ ಪ್ರಾಮುಖ್ಯತೆ ಅರಿತು, ತಕ್ಷಣದ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದರಿಂದಾಗಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ಕಾರ್ಯರೂಪಕ್ಕೆ ಪ್ಲಾನ್ ಹಾಕಿದರೂ, ಪ್ರಗತಿ ಇನ್ನೂ ಆಮೆ ವೇಗದಲ್ಲೇ ನಡೆಯುತ್ತಿದೆ.
ಇಲ್ಲಿನ ಜನರು ಮತದಾರ ಪಟ್ಟಿಯಲ್ಲಿದ್ದರೂ, ಯಾರೂ ಕೂಡ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿಲ್ಲ. ಹೆಚ್ಚಿನವರಿಗೆ ಕನ್ನಡ ಭಾμÉಯ ತಿಳಿವಳಿಕೆ ಇಲ್ಲ. ಹಲವರು ಮೂಲ ಗುರುತಿನ ದಾಖಲೆಗಳಿಲ್ಲದೇ ಇರುವ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಇದೀಗ ನೂರರಷ್ಟು ಮನೆಗಳಿಂದ ಕೂಡಿದ ಈ ಪಾರ್ದಿ ತಾಂಡಾ ಜನಸಂಖ್ಯೆ ಸುಮಾರು 500ರಷ್ಟಿದೆ. ಆದರೆ ಮನೆಗಳಿಲ್ಲ, ಉದ್ಯೋಗ ಖಾತರಿ ಯೋಜನೆ ಲಭ್ಯವಿಲ್ಲ. ಆಸ್ತಿ ದಾಖಲೆ ಅಥವಾ ಅಂತಸ್ಥತೆಯ ಲಭ್ಯತೆ ಇನ್ನೂ ಕನಸು. “ನಮ್ಮ ಬದುಕು ತುಂಬಾ ಸಂಕಷ್ಟದಲ್ಲಿದೆ. ಸರ್ಕಾರದಿಂದ ಹೆಚ್ಚಿನ ಸಹಾಯಬೇಕಿದೆ,” ಎಂದು ತಾಂಡಾ ನಿವಾಸಿಗಳ ಅಳಲು ಮುಂದುವರೆದಿದೆ. ಕೆಲವು ದಿನದ ಹಿಂದೆ ತಾಂಡಾಕ್ಕೆ ಭೇಟಿ ನೀಡಿದ್ದ ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ತಾಲೂಕು ಮಟ್ಟದ ಸಂಬಂಧಿತ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂಬ ಹೇಳಿಕೆ ನೀಡಿದ್ದರಾದರು. ಆದರೆ ಇಂದಿಗೂ ಸಭೆ ನಡೆಸಿ ವಾಸ್ತವ್ಯದಲ್ಲಿ ಅಗತ್ಯ ಕ್ರಮದ ಕಾರ್ಯಾಚರಣೆ ನಡೆಯದಿರುವುದು ನಿವಾಸಿಗಳಲ್ಲಿ ಭರವಸೆ ಕುಗ್ಗುತ್ತಿದೆ.
ಜನರ ದಾಖಲೆಗಳೆ ಇಲ್ಲ:
ಈ ತಾಂಡಾ ನಿವಾಸಿಗಳಿಗೆ ಅರ್ಧಕ್ಕೂ ಹೆಚ್ಚು ಮಂದಿಗೆ ರೇಷನ್ ಕಾರ್ಡ್, ಆಧಾರ ಕಾರ್ಡ್ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ್ದಂತ ಮಾಸಾಶನ ಮಂಜೂರಾತಿ ನೀಡುಬೇಕಾಗಿರುವುದು. ಆದರೆ ಮೇಲ್ನೋಟಕ್ಕೆ ಇದ್ಯಾವುದೇ ಕಾರ್ಯಾಚರಣೆ ನಡೆಯದೆ ಇರುವುದು ವಿಪಯಾಸ್ಯವಾಗಿದೆ.
ಮತ್ತೊಂದಡೆ ತಾಂಡಾ ನಿವಾಸಿಗಳ ಬೇಡಿಕೆಯಂತೆ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡುವಂತೆ ಬೇಡಿಕೆಯಿದೆ ಆದರೆ ಇದನ್ನು ಹೇಗೆ ಪಡೆಯಬೇಕೆಂಬುದು ಅವರಿಗೆ ಮಾಹಿತಿ ಕೊರತೆಯಿಂದಾಗಿ ನೆನಗುದ್ದಿಗೆ ಬಿದ್ದು ಕೆಲಸ ಕೊಡುವ ಕಾರ್ಯ ಇನ್ನೂ ನಡೆದಿಲ್ಲ. ಆದರೆ ಅಧಿಕಾರಿಗಳು ಸರ್ವೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
60 ಮನೆಗಳ ನಿರ್ಮಾಣಕ್ಕೆ ಸರ್ವೆ:
ಜೂನ್ 1ಕ್ಕೆ ತಾತ್ಕಾಲಿಕವಾಗಿ 1ರಿಂದ 5ನೇ ತರಗತಿ ವರೆಗೆ ಕನ್ನಡ ಶಾಲೆ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಒಪ್ಪಿಕೊಂಡಿದ್ದು, ಪ್ರಧಾನ ಮಂತ್ರಿ ಅವಜಾ ಯೋಜನೆ ಅಡಿಯಲ್ಲಿ ಮನೆಗಳು ಸಮೀಕ್ಷೆ ನಡೆದಿದ್ದು 60 ಮನೆಗಳ ನೀಡಲು ಸರ್ವೆ ನಡೆದಿದೆ.
ಮಾನಪ್ಪ ಕಟ್ಟಿಮನಿ ಇಒ ಆಳಂದ.
ಅಂಗನವಾಡಿ ಕೇಂದ್ರ ಚಾಲ್ತಿಯಲಿದೆ:
ಈ ಹಿಂದೆಯೇ ಅಂಗನವಾಡಿ ಕೇಂದ್ರ ಆರಂಭಿಸಲಾಗಿದೆ. 3ರಿಂದ 6ವರ್ಷದ 30ಮಕ್ಕಳು ಹಾಜರಾಗುತ್ತಿದ್ದು, ಏ.15ರಿಂದ ರಜೆ ಇರುತ್ತದೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ, ಶಾಲೆಯ ಬೇಡಿಕೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೀಗಾಗಿ ಕೆಡಿಪಿಯ ಸಭೆಯಲ್ಲಿ ಶಾಸಕರು ಸಹ ಶಾಲೆ ಆರಂಭಕ್ಕೆ ಸೂಚನೆ ನೀಡಿದ್ದಾರೆ. ಖುದ್ದಾಗಿ ತಾಂಡಾಕ್ಕೆ ಭೇಟಿ ನೀಡಿ ವ್ಯಾಪ್ತಿಯ ಕಾರ್ಯವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ತಾಂಡಾದ ಜನಗಳು ಹಂಗಾಮಿನಲ್ಲಿ ಕಬ್ಬು ಕಟಾವು ವೇಳೆ ಕೂಲಿ ಕೆಲಸಕ್ಕೆ ಅಥವಾ ಇಟಂಗಿ ಬಟ್ಟಿ ಕೆಲಸಕ್ಕೆ ಜನ ಹೋದರೆ ಆರಾರು ತಿಂಗಳ ಇರುವುದಿಲ್ಲ. ಇದರಿಂದ ಜನರಿರುವುದಿಲ್ಲ ಶಾಲೆ ವ್ಯವಸ್ಥೆ ಆದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ತಾಂಡಾ ನಿವಾಸಿಗಳ ಬೇಡಿಕೆಯಿದೆ. ನಿರೀಕ್ಷಿತ ಜನಸಂಖ್ಯೆ ಇದೆ. ಮಕ್ಕಳಿಗೆ ಶಾಲೆ, ಉದ್ಯೋಗ ಖಾತ್ರಿ ಕೆಲಸ ಸಿಗುತ್ತಿಲ್ಲ. ಪಂಚಾಯತನವರು ಕೆಲಸಕ್ಕೆ ಕರೆದರೆ ಬರುತ್ತಿಲ್ಲ ಎಂದು ಹೇಳುತ್ತಾರೆ. ಇಲ್ಲಿ ಮಾಹಿತಿ ಕೊರತೆ ಇದೆ. ತಮ್ಮ ಇಲಾಖೆಯಿಂದ ದೊರೆಯುವ ಮಾಹಿತಿ ನೀಡಿ ಬರಲಾಗಿದೆ. ಜನರೊಂದಿಗೆ ಚರ್ಚಿಸಲಾಗಿದೆ.
ಶ್ರೀಕಾಂತ ಮೇಂಗಜಿ ಸಿಡಿಪಿಒ ಆಳಂದ.
ತಾಂಡಾದಲ್ಲಿ ವಿಶೇಷ ಕ್ಯಾಂಪ್:
ತಾಂಡಾ ನಿವಾಸಿಗಳಿಗೆ ಕಂದಾಯ ಇಲಾಖೆಯ ಮೂಲಕ ನೀಡುವ ಸೌಲಭ್ಯಗಳನ್ನು ವಿಶೇಷ ಕ್ಯಾಂಪ್ದಲ್ಲಿ ಸರ್ವೆ ನಡೆಸಿ ರೇಷನ್ ಕಾರ್ಡ್, ಆಧಾರ ಕಾರ್ಡ್, ಮಾಸಾಶನಗಳಂತ ಎಲ್ಲ ಸೌಲಭ್ಯ ನೀಡಲಾಗುವುದು. ಇನ್ನೂಳಿದ ಬೇಡಿಕೆಯನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನಾಳೆಯೇ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂಡಾಕ್ಕೆ ಕಳುಹಿಸ ಸರ್ವೆ ನಡೆಸಿ ಅವರ ದಾಖಲೆಗಳನ್ನು ಮಾಡಿಕೊಡಲಾಗುವುದು.
ಅಣ್ಣಾರಾವ್ ಪಾಟೀಲ ತಹಸೀಲ್ದಾರರರು ಆಳಂದ.
ಶಾಲೆ ಆರಂಭಕ್ಕೆ ಸ್ಥಳವೇ ಇಲ್ಲ:
ಕನಸರ್ ನಾಯಕ ತಾಂಡಾಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಬೇಕಾದ ಪ್ರಥಮಿಕ ಶಾಲೆ ಆರಂಭಕ್ಕೆ ಸ್ಥಳದ ಕೊರತೆ ಇದೆ. ಸ್ಥಳೀಯರು ಸ್ಥಳವನ್ನು ಒದಗಿಸಿಕೊಟ್ಟರೆ ಶಿಕ್ಷಕರನ್ನು ನಿಯೋಜಿಸಿ ಶಾಲೆ ಆರಂಭಿಸಲಾಗುವುದು. ಈಗಾಗಲೇ ನಾನು ಮತ್ತು ಇಲಾಖೆಯ ಸಿಆರ್ಪಿ ಮತ್ತು ಬಿಆರ್ಪಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಶಾಲೆ ಆರಂಭಕ್ಕೆ ಬೇಕಾದ ಸ್ಥಳ ಒದಗಿಸುವಂತೆ ತಹಸೀಲ್ದಾರರನ್ನು ಕೊರಲಾಗುವುದು.
ಹೃಷಿಕೇಶ ದಂತಕಾಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಳಂದÀ.