Shubhashaya News

ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ ಸುಸೂತ್ರ

ಆಳಂದ: ಪಟ್ಟಣದ ಆದರ್ಶ ವಿದ್ಯಾಲಯ 10ನೇ ತರಗತಿ ಪರೀಕ್ಷಾ ಕೇಂದ್ರಕ್ಕೆ ಕೊರತೆ ಡೆಸ್ಕ್‍ಗಳನ್ನು ಪೂರೈಸುವ ಸಂದರ್ಭದಲ್ಲಿ ಪರೀಕ್ಷೆ ವಿಶೇಷ ಡಿಡಿಪಿಐ ವೃಷಬೇಂದ್ರಯ್ಯಾ ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ, ನೋಡಲಾಧಿಕಾರಿ ಪಂಕಜ ಪಾಟೀಲ ಹಾಜರಿದ್ದು ಸೌಲಭ್ಯ ಕಲ್ಪಿಸಿದ್ದರು.

ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶ 16 ಎಸ್ಸೆಸ್ಸೆಲ್ಸಿ ಬೋರ್ಡ್ ಪರಿಕ್ಷೆ ಕೇಂದ್ರಗಳಲ್ಲಿ ಶನಿವಾರ ಸಮಾಜ ವಿಜ್ಞಾನ ವಿಷಯದ ನಡೆದ 4ನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಪಟ್ಟಣದ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರಕ್ಕೆ ಆಸನಗಳ ಕೊರತೆಯನ್ನು ಕಂಡ ಶನಿವಾರದಂದು ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇನ್ನಷ್ಟು ಆಸನಗಳ ವ್ಯವಸ್ಥೆ ಕೈಗೊಳ್ಳಲಾಯಿತು.
ಪರೀಕ್ಷಾ ವಿಶೇಷ ಡಿಡಿಪಿಐ ವೃಷಬೇಂದ್ರಯ್ಯಾ, ಕ್ಷೇತ್ರಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ, ತಾಲೂಕು ಪರೀಕ್ಷಾ ನೋಡಲ್ ಅಧಿಕಾರಿ ಪಂಕಜ್ ಪಾಟೀಲ ಮತ್ತಿತರು ಪರೀಕ್ಷೆ ಸುವ್ಯವಸ್ಥೆಗೆ ಕ್ರಮವಹಿಸಿದ್ದರು. ತಾಲೂಕಿನ 16 ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5503 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 5111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 392 ವಿದ್ಯಾರ್ಥಿಗಳು ಗೈರುಹಾಜರಿದ್ದರು. ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಮಲ್‍ಪ್ರ್ಯಾಕ್ಟೀಸ್ ಪ್ರಕರಣಗಳು ದಾಖಲಾಗಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾತಿ ಶೇ 92.88ರಷ್ಟಾಗಿದೆ ಎಂದು ಶಿಕ್ಷಣ ಇಲಾಖೆ ಕ್ರೂಢೀಕರಿಸಿದೆ.

Leave A Reply

Your email address will not be published.