ಯಲಬುರ್ಗಾ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಶ್ರೀಶರಣಬಸವೇಶ್ವರ ಜಾತ್ರೆ ನಿಮಿತ್ತ ಸಾಮೂಹಿಕ ವಿವಾಹಗಳ ಶುಕ್ರವಾರ ನಡೆದವು.
ಯಲಬುರ್ಗಾ: ತಾಲೂಕಿನ ನಾನಾ ಗ್ರಾಮಗಳಲ್ಲಿ ಕಲಬುರಗಿ ಶ್ರೀಶರಣಬಸವೇಶ್ವರ ಜಾತ್ರೆಯೂ ಶುಕ್ರವಾರ ಜರುಗಿತು. ಮುಂಜಾನೆ ಗ್ರಾಮದಲ್ಲಿನ ಶರಣಬಸವೇಶ್ವರ ಕೃರ್ತು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ತದ ನಂತರ ಕುಂಭ ಕಳಶ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಬಂದಿತು. ಮಧ್ಯಾಹ್ನ ಸಾಮೂಹಿಕ ವಿವಾಹಗಳ ನಡೆದವು. ಸಾಯಂಕಾಲ ಉಚ್ಛಾಯ ಎಳೆದರು. ತಾಲೂಕಿನ ಮರಕಟ್, ಮಾಟಲದಿನ್ನಿ, ಹಿರೇಅರಳಿಹಳ್ಳಿ, ಬಳೂಟಗಿ, ತರಲಕಟ್ಟಿ, ಕೋಳಿಹಾಳ, ಲಿಂಗನಬಂಡಿ ಇನ್ನಿತರ ಸೇರಿದಂತೆ ಗ್ರಾಮಗಳಲ್ಲಿ ಜಾತ್ರೆಯೂ ನಡೆಯಿತು. ತದ ನಂತರ ಭಕ್ತರಿಗೆ ಮಹಾ ದಾಸೋಹ ನಡೆಸಿದರು. ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಂಪ್ರದಯಿಕವಾಗಿ ನಡೆಸಿಕೊಂಡ ಬಂದ ಪುರಾಣ ಮಹಾ ಮಂಗಲ ಗೊಂಡಿತು.ಗ್ರಾಮದ ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.
Comments are closed.