Shubhashaya News

ಡಿ. ದೇವರಾಜ ಅರಸು ಹಿಂದುಳಿದವರ ಪ್ರಗತಿಯ ದಾರಿ ದೀಪ: ಲೋಹಾರ

ಆಳಂದ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಯೋಜಿಸಿದ್ದ ಡಿ. ದೇವರಾಜ ಅರಸ್ ಜಯಂತಿಯನ್ನು ಮಾಳಿ ಸಮಜ ಅಧ್ಯಕ್ಷ ಪಂಡಿತ ಶೇರಿಕಾರ ಉದ್ಘಾಟಿಸಿದರು. ರಮೇಶ ಲೋಹಾರ ಭೀಮಾಶಂಕರ ಮಡಿವಾಳ ಗೈಬುಸಾಬ ಭೀಂಪೂರ ಇತರರು ಇದ್ದರು.

ಆಳಂದ: “ಡಿ. ದೇವರಾಜ ಅರಸು ಅವರ ಜೀವನವೇ ಹಿಂದುಳಿದ ವರ್ಗಗಳ ಹಕ್ಕು, ಗೌರವ ಮತ್ತು ಸಮಾನತೆಯ ಹೋರಾಟದ ಇತಿಹಾಸ. ಅವರು ಬಿತ್ತಿದ ಬಿತ್ತನೆಗಳಿಂದಲೇ ಇಂದಿನ ಪೀಳಿಗೆ ಶಿಕ್ಷಣ, ಆರ್ಥಿಕತೆ ಮತ್ತು ರಾಜಕೀಯದಲ್ಲಿ ಬಲಿಷ್ಠವಾಗಿ ನಿಂತಿದೆ” ಎಂದು ಹೋರಾಟಗಾರ ರಮೇಶ್ ಲೋಹಾರ ಪ್ರತಿಪಾದಿಸಿದರು.
ಪಟ್ಟಣದ ಕೈಗಾರಿಕಾ ವಿಸ್ತರಣೆ ಪ್ರದೇಶದಲ್ಲಿರುವ ಜಿಪಂ ಮಾಜಿ ಸದಸ್ಯೆ ಪೂಜಾ ಆರ್. ಲೋಹಾರ ಅವರ ನಿವಾಸದಲ್ಲಿ, ತಾಲೂಕು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅವರ ತ್ಯಾಗ, ತತ್ವನಿμÉ್ಠ ಮತ್ತು ಜನಪರ ನೀತಿಗಳಿಂದಲೇ ಇಂದು ಹಿಂದುಳಿದ ಸಮಾಜ ಸಂಘಟಿತವಾಗಿ, ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುತ್ತಿದೆ ಅವರ ಭೂ ಸುಧಾರಣೆ ಯೋಜನೆಗಳು ಸಾವಿರಾರು ರೈತರಿಗೆ ಭೂಸ್ವಾಮ್ಯ ಕೊಟ್ಟವು. ಹಾವನೂರು ಆಯೋಗದ ಮೂಲಕ ಸಾಮಾಜಿಕ ನ್ಯಾಯಕ್ಕೆ ಶಕ್ತಿಯುತ ದಾರಿತೋರಿದರು. ಶಿಕ್ಷಣವನ್ನು ಹಿಂದುಳಿದ ವರ್ಗಗಳ ಬಾಗಿಲಿಗೆ ತಂದುಕೊಟ್ಟು ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು. ಈ ಕೊಡುಗೆಗಳಿಂದ ಜನಾಂಗದವರು ಸಂಘಟಿತರಾಗಿ, ಸಮಾಜದಲ್ಲಿ ತಮಗೆ ತಕ್ಕ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ.ಆದರೆ ಇಷ್ಟಕ್ಕೆ ನಿಲ್ಲದೆ, ಅವರ ಹಾದಿಯಲ್ಲಿ ಸಾಗಿದರೆ ಮಾತ್ರ ನಿಜವಾದ ಸಮಾನತೆ ಸಾಧ್ಯ” ಹಿಂದುಳಿದ ವರ್ಗಗಳು ಸಂಘಟಿತರಾಗಿ ಶಿಕ್ಷಣ ಸಂಘಟನೆ ಮತ್ತು ಆರ್ಥಿಕ ರಾಜಕೀಯವಾಗಿ ಸಬಲರಾಗಲು ಒಗ್ಗೂಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಮಾಳಿ, ಮಾಲ್ಗಾರ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಶೇರಿಕಾರ ಉದ್ಘಾಟಿಸಿ, ಅರಸು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಸಂಘಟಿತರಾಗೋಣಾ ಎಂದರು.
ಬೆಳಮಗಿ ಬುದ್ಧ ವಿವಾಹರದ ಬಂತೇ ಅಮರಜ್ಯೋತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅರಸ್ ಅವರು ನೀಡಿದ ಕೊಡುಗೆ ಮಾಡಿದ ಸಾಧನೆಯನ್ನು ಬಣ್ಣಿಸಿ ಇಂಥ ನಾಯಕರು ಇಂದಿನ ಅಗತ್ಯವಾಗಿದೆ ಎಂದರು.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮುಖಂಡ ಗೈಬುಸಾಬ್ ಭೀಮಪುರ, ಹಿರಿಯ ಭೀಮಾಶಂಕರ ಮಡಿವಾಳ ಜಮಗಿ, ಮಡಿವಾಳ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ, ಕೋಳಿ ಸಮಾಜದ ಮುಖಂಡ ಅಶೋಕ ಜಮಾದಾರ, ಮಾಳಿ ಸಮಾಜದ ಯುವ ಮುಖಂಡ ಮಲ್ಲಿಕಾರ್ಜುನ ವಣದೆ, ರುಕ್ಕಪ್ಪ ಮಡಿವಾಳ, ರಾಜು ಡಿ. ಪರಿಟ್, ನಿವೃತ್ತ ಶಿಕ್ಷಕ ಮಲ್ಲಪ್ಪ ಮಾಸ್ಟರ್, ವಿ. ಎಸ್. ಆತನೂರ, ಅಣ್ಣಪ್ಪ ತವಡೆ, ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಸುಧಾರಣಿ ಮಹೇಶ, ಶಾಂತಪ್ಪ ಚಳಗೇರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಸರ್ವರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಕುಮಾರಿ ಗಂಗಾ ಸ್ವಾಗತಿಸಿ, ವಂದಿಸಿದರು.

Comments are closed.

Don`t copy text!