Shubhashaya News

ಚಿಂಚೋಳಿ: ಅಪರ ಸರ್ಕಾರಿ ವಕೀಲರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಪರ ಸರ್ಕಾರಿ ವಕೀಲರ ಹುದ್ದೆ ನೇಮಕಾತಿಗಾಗಿ ಏಳು ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಅನುಭವ ಹೊಂದಿರುವ ಹಾಗೂ ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ವಕೀಲ ವೃತ್ತಿಯಲ್ಲಿ ಕನಿಷ್ಠ ಏಳು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ಹೆಸರು, ಜನ್ಮದಿನಾಂಕ, ವಿದ್ಯಾರ್ಹತೆ, ಸಧ್ಯದ ಅಂಚೆ ವಿಳಾಸ, ಜಿಲ್ಲಾ ಬಾರ್ ಅಸೋಸಿಯೇಷನ್ ನೋಂದಣಿ ವಿವರ, ಕರ್ನಾಟಕ ಬಾರ್ ಅಸೋಸಿಯೇಶನ್ ನೋಂದಣಿ ವಿವರ, ದಿವಾಣಿ ನ್ಯಾಯಾಲಯದಲ್ಲಿ ನಡೆಸಿದ ಪ್ರಕರಣಗಳ ಸಂಖ್ಯೆ, ಕ್ರಿಮಿನಲ್ ನ್ಯಾಯಾಲಯದಲ್ಲಿ ನಡೆಸಿದ ಪ್ರಕರಣಗಳ ಸಂಖ್ಯೆ, ಜಾತಿ ಮತ್ತು ಮತ್ತಿತರ ಪ್ರಮಾಣಪತಗಳನ್ನು (ಸಂಬಂಧಪಟ್ಟ ತಹಶೀಲ್ದಾರರ ಕಾರ್ಯಾಲಯದಿಂದ ಪಡೆದ) ದಾಖಲೆಗಳು ಹಾಗೂ ವೈಯಕ್ತಿಕ ವಿವರನ್ನೊಳಗೊಂಡ ಅರ್ಜಿಯನ್ನು 2021ರ ಏಪ್ರಿಲ್ 5 ರ ಸಂಜೆ 4 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Comments are closed.

Don`t copy text!