Shubhashaya News

ಹಮಾಲರಿಗೆ, ಬೀದಿ ಬದಿ ವ್ಯಾಪರಸ್ಥರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ

ಚಿತ್ತಾಪುರ: ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಎಪಿಎಂಸಿ ವರ್ತಕರಿಗೆ, ಹಮಾಲರಿಗೆ, ಬೀದಿ ಬದಿ ವ್ಯಾಪರಸ್ಥರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‍ಪುರಕರ್ ಚಾಲನೆ ನೀಡಿದರು.

ಚಿತ್ತಾಪುರ: ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಎಪಿಎಂಸಿ ವರ್ತಕರಿಗೆ, ಹಮಾಲರಿಗೆ, ಬೀದಿ ಬದಿ ವ್ಯಾಪರಸ್ಥರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‍ಪುರಕರ್ ಚಾಲನೆ ನೀಡಿದರು.
ನಂತರ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, 18 ವರ್ಷದ ಮೇಲ್ಪಟ್ಟವರಿಗೆ ಎಪಿಎಂಸಿ ವರ್ತಕರಿಗೆ, ಸಿಬ್ಬಂದಿ, ಹಮಾಲರಿಗೆ, ಬೀದಿ ಬದಿ ವ್ಯಾಪರಸ್ಥರಿಗೆ
ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ಸೇರಿದಂತೆ 120 ಜನರಿಗೆ ಮೊದಲ ಕೊರೊನಾ ಲಸಿಕೆ ನೀಡಲಾಯಿತು ಎಂದು ಹೇಳಿದರು.
ಕೊರೊನಾ ಹಾವಳಿ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಬರೀ ಅಧಿಕಾರಿಗಳೇ ಕೊರೊನಾ ತಡಗಟ್ಟಬೇಕು ಎಂದು ತಿಳಿದುಕೊಳ್ಳುವುದು ಸರೀಯಲ್ಲ. ಪ್ರತಿಯೊಬ್ಬರು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಬಳಸಬೇಕು. ಮನೆಯಿಂದ ಅನವಶ್ಯಕವಾಗಿ ಮನೆಯಿಂದ ಯಾರೋ ಹೊರಗಡೆ ಬರಬಾರದು ಎಂದು ಮನವಿ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಮುಡಬೂಳ, ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ಪಾಟೀಲ್ ಮುಖಂಡರಾದ ಚಂದ್ರಶೇಖರ ಸಾತನೂರ, ನಾಗರಾಜ ರೇಶ್ಮಿ, ವೀರಣ್ಣ ಸುಲ್ತಾನಪುರ, ಶರಣು ಸಾತನೂರ ಇದ್ದರು.

Leave A Reply

Your email address will not be published.