ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಶಾಕ್ : ನಂದಿನಿ ಬಳಿಕ, ಅಮುಲ್, ಮದರ್ ಡೈರಿ ಪ್ರತಿ ಲೀ.ಹಾಲಿಗೆ 2 ರಿಂದ 4 ರೂ.ಏರಿಕೆ
ನಂದಿನಿ ಹಾಲಿನ ದರ ಏರಿಕೆಯ ಬಿಸಿಯ ನಡುವೆಯೇ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪ್ರಮುಖ ಹಾಲಿನ ಬ್ರ್ಯಾಂಡ್‍ಗಳಾದ ಅಮೂಲ್ (Amul) ಮತ್ತು ಮದರ್ ಡೇರಿ (Mother Dairy) ತಮ್ಮ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಯಿಂದ 4 ರೂಪಾಯಿಯವರೆಗೆ ಹೆಚ್ಚಳ ಮಾಡಿವೆ. ಈ ಪರಿಷ್ಕೃತ ನೂತನ ದರಗಳು ಇಂದಿನಿಂದಲೇ ತಕ್ಷಣಕ್ಕೆ ಜಾರಿಗೆ ಬರಲಿವೆ ಎಂದು ಕಂಪನಿಗಳು ತಿಳಿಸಿವೆ.
ಮಾರುಕಟ್ಟೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಸಾಗಣೆ ವೆಚ್ಚ ಮತ್ತು ಹಾಲಿನ ಸಂಗ್ರಹಣಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಅಮೂಲ್ ಮತ್ತು ಮದರ್ ಡೇರಿ ಕೂಡ ಹಾಲಿನ ದರ ಹೆಚ್ಚಿಸಿರುವುದು ಬೆಳಗಿನ ಉಪಹಾರಕ್ಕೆ ಹಾಲನ್ನೇ ನೆಚ್ಚಿಕೊಂಡಿರುವ ನಗರದ ಹಾಗೂ ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.