Shubhashaya News

ಡಿಸೆಂಬರ್ 11ರಂದು ‘ಪಬ್ಬಾರ್’ ಸಿನಿಮಾ ಬಿಡುಗಡೆ

ಕಲಬುರಗಿ: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯ ನಿರೀಕ್ಷೆ ಮೂಡಿಸಿರುವ ‘ಪಬ್ಬಾರ’ ಸಿನಿಮಾ ಡಿಸೆಂಬ‌ರ್ 11ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಟ ಧೀರನ್‌ ರಾಮಕುಮಾ‌ರ್ ತಿಳಿಸಿದರು.
ನಗರದ ಲುಂಬಿನಿ ಗ್ಯಾಂಡ್‌ ಹೋಟೆಲ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಾ ಪಿಕ್ಚರ್ಸ್ ಬ್ಯಾನ‌ರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕಥೆ ಮತ್ತು ನಿರ್ಮಾಣದಲ್ಲಿ ಡಾ. ಶಿವರಾಜಕುಮಾರ್ ಅವರ ಪಾತ್ರವಿದೆ ಎಂದು ಹೇಳಿದರು.
ಚಿತ್ರದಲ್ಲಿ ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸಿದ್ದು, ಭರತ್ ಜಿ.ವಿ. ಪ್ರಮುಖ ಪಾತ್ರದಲ್ಲಿದ್ದಾರೆ. ಸಂಪೂರ್ಣ ಅನ್ವೆಂಚರಸ್ ಕ್ರೈಂ ಗ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಪ್ರಬುದ್ಧ ಪ್ರೇಮಕಥೆಯೂ ಇರಲಿದೆ. ಸುಕುಮಾ‌ರ್ ನಿರ್ದೇಶನದ ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಪ್ರತಿಯೊಂದು ಹಾಡು ಕಥೆಗೆ ಪೂರಕವಾಗಿ ಮೂಡಿಬಂದಿದೆ ಎಂದರು.
ಮೈಸೂರು, ಬೆಂಗಳೂರು, ಕಾಸರಗೋಡು,ಹಿಮಾಚಲ ಪ್ರದೇಶ, ವಾರಣಾಸಿ ಹಾಗೂ ಜೈಪುರ ಸೇರಿದಂತೆ ದೇಶದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದರು.
ಚಿತ್ರದ ಪ್ರಚಾರ ಕಾರ್ಯ ಈಗಾಗಲೇ ಆರಂಭವಾಗಿದ್ದು, ರಾಜ್ಯದ ಕಾಲೇಜುಗಳು,ಉದ್ಯಾನಗಳು, ಚಿತ್ರಮಂದಿರಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ಭೇಟಿ ನೀಡಿ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯಾದ್ಯಂತ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ರಾಜಕುಮಾರ್ ಹಾಗೂ ಡಾ. ಶಿವರಾಜಕುಮಾ‌ರ್ ಅಭಿಮಾನಿಗಳ ಮುಖಂಡ ಆನಂದ ತೆಗನೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ್ ಬಡಿಗೇರ್, ಭರತ್ ಜಿ.ವಿ. ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.