ಆಳಂದ: ಪಟ್ಟಣದ ಶರಣನಗರದಲ್ಲಿ ಆರೋಗ್ಯ ಕೇಂದ್ರದಲ್ಲಿ ಆದ್ಯತಾ ಸಮೂಹಕ್ಕೆ ಕೋವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ ಚಾಲನೆ ನೀಡಿದರು. ಸಿಎಒ ಭೀಮಾಶಂಕರ ಬೆಳಮಗಿ, ವೈದ್ಯಾಧಿಕಾರಿ ಪ್ರಥ್ವಿರಾಜ್ ಚವ್ಹಾಣ ಇತರರು ಇದ್ದರು.
ಆಳಂದ: ಪಟ್ಟಣದಲ್ಲಿನ ಸುಮಾರು 441 ಮಂದಿ ಬೀದಿ ವ್ಯಾಪಾರಿಗಳಿಗೆ ಶುಕ್ರವಾರ ಸ್ಥಳೀಯ ಶರಣನಗದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾಕರಣಕ್ಕೆ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅಧ್ಯಕ್ಷರು, ಪ್ರತಿಯೊಬ್ಬ ಬೀದಿ ವ್ಯಾಪಾರಿಗಳಿಗೆ ಸರ್ಕಾರ ಆರೋಗ್ಯ ಇಲಾಖೆಯ ಮೂಲಕ ನೀಡಿರುತ್ತಿರುವ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡುವುದು, ಪ್ರತಿಯೊಬ್ಬರ ಮಾಸ್ಕ್ ಧರಿಸುವ ಮೂಲಕ ಮುಂಜಾಗೃತ ಕ್ರಮವಹಿಸಬೇಕು. ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಂಡು ಸರ್ಕಾರದ ಕೋವಿಡ್ ನಿಮಾವಳಿಯಲ್ಲಿ ವ್ಯವರಿಸಿ ಕೋವಿಡ್ ಮುಕ್ತಪಟ್ಟಣವಾಗಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸಿಎಒ ಭೀಮಾಶಂಕರ ಬೆಳಮಗಿ ಅವರು ಮಾತನಾಡಿ, ಆದ್ಯತಾ ವಲಯಕ್ಕೆ ಲಸಿಕಾ ಕರಣದ ಅಡಿಯಲ್ಲಿ ಸರ್ಕಾರ ಬೀದಿ ವ್ಯಾಪಾರಿಗಳಿಗೆ ನೀಡಲು ಮುಂದಾಗಿದೆ. ಪ್ರತಿಯೊಬ್ಬರು ಲಸಿಕೆಯನ್ನು ಪಡೆಯಲು ಹಿಂದೆ ಮುಂದೆ ನೋಡದೆ ಮುಂಜಾಗೃತ ಕ್ರಮವಾಗಿ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.
ವೈದ್ಯಾಧಿಕಾರಿ ಪ್ರಥ್ವಿರಾಜ ಚವ್ಹಾಣ, ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಗೂ ವ್ಯಾಪಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಮೊದಲು ದಿನದಲ್ಲಿ 40 ಮಂದಿ ಬೀದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾಯಿತು.