Shubhashaya News

ಉದ್ಯೋಗಿಣಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ; ತುಪ್ಪದ್

ಚಿತ್ತಾಪುರ; ಸರ್ಕಾರದಿಂದ ಸಿಗುವ ಸ್ತ್ರೀಶಕ್ತಿ, ಗೃಹಲಕ್ಷ್ಮಿ, ಮಾತೃ ವಂದನಾ ಹಾಗೂ ಉದ್ಯೋಗಿಣಿ ಯೋಜನೆಗಳ ಸದುಪಯೋಗವನ್ನು ಮಹಿಳೆಯರು ಪಡೆದು ಸ್ವಾವಲಂಬಿಗಳಾಗಬೇಕು ಕೊಂಡು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಆರತಿ ತುಪ್ಪದ ಕರೆ ನೀಡಿದರು.
ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಳೆ ಶಹಾಬಾದ್ ವಲಯದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ತಾಲೂಕು ಮಟ್ಟದ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಇರುವ ಸುಕನ್ಯಾ ಸಮೃದ್ಧಿ ಹಾಗೂ ಭಾಗ್ಯಲಕ್ಷ್ಮಿ ಯೋಜನೆಗಳ ಮಾನದಂಡಗಳನ್ನು ವಿವರಿಸಿದರು. ಅಂಗನವಾಡಿ
ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸಿಗುವ ಪೌಷ್ಟಿಕ ಆಹಾರದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ಅಗ್ನಿ ಶಾಮಕ ಠಾಣಾಧಿಕಾರಿ ನಾಗರಾಜ್ ಮಾತನಾಡಿ, ಅಗ್ನಿ ಅವಘಡಗಳು ಸಂಭವಿಸಿದಾಗ ಸಂಪರ್ಕಿಸಬೇಕಾದ ತುರ್ತು ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಮನೆಗಳಲ್ಲಿ ಅಡುಗೆ ಅನಿಲ ಬಳಸುವಾಗ ಎಚ್ಚರಿಕೆ ಕೈಗೊಳ್ಳಬೇಕಾದ ವಹಿಸಬೇಕು. ಸಿಲಿಂಡ‌ರ್ ಲೀಕೇಜ್ ಅಥವಾ ಅಕಸ್ಮಿಕ ಬೆಂಕಿ ಸಂಭವಿಸಿದಾಗ ನಂದಿಸಲು ಪ್ರಾಯೋಗಿಕ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.
ಸ್ವ-ಉದ್ಯೋಗ ಘಟಕಕ್ಕೆ ಭೇಟಿ ನೀಡಿದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯೆ ಪ್ರಭಾವತಿ ಅವರಿಂದ ಅಗರಬತ್ತಿ, ದೀಪದ ಬತ್ತಿ ಹಾಗೂ ಧೂಪ ತಯಾರಿಕೆಯ ತರಬೇತಿ ಮತ್ತು ಮಾಹಿತಿ ಪಡೆದುಕೊಂಡರು.

Leave A Reply

Your email address will not be published.