Shubhashaya News

ನಮೋಶಿ ಪರ ಹರ್ಷಾ ಗುತ್ತೇದಾರ ಮತಯಾಚನೆ

ಆಳಂದ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ  ನಮೋಶಿ ಅವರ ಪರವಾಗಿ ಬಿಜೆಪಿ ಮುಖಂಡ ಹರ್ಷಾ ಎಸ್. ಗುತ್ತೇದಾರ ಅವರು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರಲ್ಲಿ ಮತಯಾಚಿಸಿದರು.

ಸುಂಟನೂರ, ನಿಂಬರ್ಗಾ, ಹಿತ್ತಲ ಶಿರೂರ, ಮಾಡಿಯಾಳ ಹಾಗೂ ಯಳಸಂಗಿ ಗ್ರಾಮಗಳ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿದ ಅವರು, ಶಿಕ್ಷಕರನ್ನು ಭೇಟಿಯಾಗಿ ಅಭ್ಯರ್ಥಿ  ನಮೋಶಿ ಅವರ ಪರ ಬೆಂಬಲ ಕೋರಿ ಮತ ನೀಡುವಂತೆ ಮನವಿ ಮಾಡಿದರು.

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಶಿಕ್ಷಕರ ಸಮಸ್ಯೆಗಳು, ಶೈಕ್ಷಣಿಕ ಕ್ಷೇತ್ರದ ಅಗತ್ಯತೆಗಳು ಹಾಗೂ ಶಿಕ್ಷಕರ ಹಿತಾಸಕ್ತಿಗಳ ಕುರಿತು ಅಭ್ಯರ್ಥಿಯ ಪರವಾಗಿ ಮತದಾರರಿಗೆ ಮನವರಿಕೆ ಮಾಡಿಕೊಡಲಾಯಿತು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮೋಶಿ ಅವರಿಗೆ ಬೆಂಬಲ ನೀಡುವಂತೆ ಹರ್ಷಾ ಗುತ್ತೇದಾರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿಂಬರ್ಗಾ ಹಾಗೂ ಮಾದನಹಿಪ್ಪರ್ಗಾ ಹೋಬಳಿಯ ಬಿಜೆಪಿ ಮುಖಂಡರು, ಸ್ಥಳೀಯ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಭೇಟಿಯಾಗಿ ಚುನಾವಣೆಯ ಕುರಿತು ಚರ್ಚೆ ನಡೆಸಲಾಯಿತು.

Leave A Reply

Your email address will not be published.