-ಡಾ. ನಾಗರಾಜ ದಂಡೋತಿ
ಲೇಖಕ, ಸಹಾಯಕ ಪ್ರಾಧ್ಯಾಪಕ
ಮೋ: 9740479127
ಮಠಗಳೆಂದರೆ ಕೇವಲ ಆಧ್ಯಾತ್ಮಿಕ ಕೇಂದ್ರಗಳಲ್ಲ ಅಗತ್ಯಬಿದ್ದರೆ ಆರೋಗ್ಯ ಸುಧಾರಿಸುವ, ಆಶ್ರಯ ನೀಡಿ, ಆತ್ಮಸ್ಥೈರ್ಯ ತುಂಬುವ ಆಸ್ಪತ್ರೆಗಳಗುತ್ತವೆ ಎನ್ನವುದಕ್ಕೆ ಈ ಸಂಧರ್ಭವೆ ನಿದರ್ಶನ. ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ತಮ್ಮ ಮಠದ ಸ್ಥಳವಕಾಶ ಅಲ್ಲದೆ ಸಾಧ್ಯವಾದ ಸೌಲಭ್ಯ ಕಲ್ಪಸಿದ್ದಾರೆ. ಸಂಪ್ರದಾಯ ನಿಂತರೂ, ಸಮಾಜ ಸೇವೆ ನಿರಂತರವಾಗಿರಬೇಕು. ಸಾಮಾಜಿಕ ಸತ್ಕಾರ್ಯಗಳೇ ಸಂಪ್ರದಾಯವಾಗಬೇಕೆಂಬ ಮಾತಿಗೆ ಸಂಸ್ಥಾನ ಶ್ರೀ ಗವಿಮಠವೇ ಸಾಕ್ಷೀಯಾಗಿದೆ. ಮಹಾ ಸತ್ಕಾರ್ಯದಲ್ಲಿ ತೊಡಗಿಕೊಂಡ ಸಂಸ್ಥಾನ ಶ್ರೀ ಗವಿಮಠದ ಪೂಜ್ಯರಿಗೆ ಸೇವೆಗೆ ಈ ಲೇಖನದೊಂದಿಗೆ ಧನ್ಯವಾದಗಳನ್ನು ಅರ್ಪಿಸುವೆ.

ಮಠವೆಂದರೆ ಪೂಜೆ, ಪುನಸ್ಕಾರ, ಶಾಂತ ಪರಿಸರ, ಹಿತನುಡಿಗಳು, ನಿರಂತರ ಅನ್ನ ದಾಸೋಹ ಎಲ್ಲ ಬಹುತೇಕ ಮಠಮಾನ್ಯಗಳಲ್ಲಿ ಸಾಮಾನ್ಯ. ಈ ಮಠಮಾನ್ಯಗಳು ತಲತಲಾಂತರದಿಂದ ತಮ್ಮ ಬಳುವಳಿಯಾಗಿ ಪರಂಪರೆಯನ್ನು ಮುನ್ನೆಡೆಸುತ್ತ ನಂಬಿ ಬಂದ ಭಕ್ತರಿಗೆ ಅನ್ನ, ಅರಿವು, ಆಶ್ರಯ ನೀಡಿರುವ ತಾಣಗಳು. ಸಮಾಜಮುಖಿ ಸೇವೆಯೇ ತನ್ನ ಪರಮ ಕರ್ತವ್ಯವೆಂದು ಬಾಳಿದ, ಬಾಳುತ್ತಿರುವ ಮಠಗಳು ಮತ್ತು ಮಠಾಧೀಶರಿಗಳಿಗೇನು ಕಡಿಮೆಯಿಲ್ಲ ನಮ್ಮ ನಾಡಿನಲ್ಲಿ. ಸೇವೆಯನ್ನುವುದು ನಮ್ಮ ಮಣ್ಣಿನಲ್ಲಿಯೇ ಬೆರತಿದೆ. ಮಾನವಿಯತೆ ನಮ್ಮ ಮನದಲ್ಲಿಯೇ ನೆಲಸಿದೆ ಎನ್ನುವುದಕ್ಕೆ ಈ ಸಂದರ್ಭವೇ ಸಾಕ್ಷೀ.

ಈ ಕೊರೋನ ಎಂಬ ಮಹಾಮಾರಿ ಪ್ರಪಂಚವೆ ತಲ್ಲಣಿಸಿದೆ. ಜಗತ್ತಿನ ಜನವೆಲ್ಲ ಹೆದರಿ ಬೆದರಿ ಗೂಡಲ್ಲಿ ಗುಬ್ಬಚ್ಚಿಯಂತೆ ಅಡಗಿ ಕುಳಿತಿರುವಂತೆ ಮಾಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು, ವ್ಯಯಕ್ತಿಕ ಸೇವಾಸಕ್ತರು ಅಹಾರ, ಇತರ ನೆರವಿಗಾಗಿ ಧಾವಿಸಿರುವುದು ಮಣ್ಣಿನಲ್ಲಿಯೇ ನೆಲೆಸಿದ ಸೇವಾ ಮನೋಭಾವ ಹಸ್ತಾಂತರಗೊಂಡು, ಸಾಕಾರಗೊಳ್ಳುತ್ತಿರುವುದು ಸಂತೋಷದ ಮತ್ತು ಹೆಮ್ಮೆಯ ಸಂಗತಿ.
ಈ ಸಂಕಷ್ಟದ ಸಂದರ್ಭದಲ್ಲಿ ಮಮಕಾರದ ಕುರುಹಾಗಿ ತಮ್ಮ ಮಠದ ವೃದ್ಧಾಶ್ರಮವನ್ನು ಮತ್ತು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ವನ್ನಾಗಿ ಪರಿವರ್ತಿಸಿವರು ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು. ಈ ಪರಿಸ್ಥಿತಿಯನ್ನು ಅರಿತು ನಾಡಿನ ಅನೇಕ ಮಠಗಳು ಜನರ ಆಸರೆಯಾಗಿ ನಿಂತಿರುವ ದೃಶ್ಯಾವಳಿಗಳನನ್ನು ಸಾಮಾಜಿಕ ಜಾಲತಾನ ಇಲ್ಲವೇ ಇತರ ಮಾಧ್ಯಮಮೂಲಕ ನಾವು ಗಮನಿಸಿದ್ದೇವೆ. ತಕ್ಕಂತೆ ಅಭಿಮಾನಪಟ್ಟಿದ್ದೇವೆ. ಈ ಸಂಕಷ್ಟದ ಸೇವೆಯನ್ನು ಮೆಚ್ಚಿ, ನಮ್ಮ ವಾಟ್ಸಾಪ್ ಡಿಪಿ, ಸ್ಟೇಟಸ್ ಇಲ್ಲವೇ ಫೇಸ್‍ಬುಕ್‍ಗಳಲ್ಲಿ ಅಭಿಮಾನದ ಗೌರವವನ್ನು ಸೂಚಿಸಿ, ಕೊಂಡಾಡಿದ್ದೆವೆ. ಈ ಸೇವೆಗೆ ನಾಡಿನ ಜನರೆಲ್ಲರು ಕೃತಜ್ಞರಾಗಿರುವುದು ಅಪ್ಟಟ ಸತ್ಯ.
ಮಠಗಳೆಂದರೆ ಕೇವಲ ಆಧ್ಯಾತ್ಮಿಕ ಕೇಂದ್ರಗಳಲ್ಲ ಅಗತ್ಯಬಿದ್ದರೆ ಆರೋಗ್ಯ ಸುಧಾರಿಸುವ, ಆಶ್ರಯ ನೀಡಿ, ಆತ್ಮಸ್ಥೈರ್ಯ ತುಂಬುವ ಆಸ್ಪತ್ರೆಗಳಗುತ್ತವೆ ಎನ್ನವುದಕ್ಕೆ ಈ ಸಂಧರ್ಭವೆ ನಿದರ್ಶನ. ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ತಮ್ಮ ಮಠದ ಸ್ಥಳವಕಾಶ ಅಲ್ಲದೆ ಸಾಧ್ಯವಾದ ಸೌಲಭ್ಯ ಕಲ್ಪಸಿದ್ದಾರೆ. ಸಂಪ್ರದಾಯ ನಿಂತರೂ, ಸಮಾಜ ಸೇವೆ ನಿರಂತರವಾಗಿರಬೇಕು. ಸಾಮಾಜಿಕ ಸತ್ಕಾರ್ಯಗಳೇ ಸಂಪ್ರದಾಯವಾಗಬೇಕೆಂಬ ಮಾತಿಗೆ ಸಂಸ್ಥಾನ ಶ್ರೀ ಗವಿಮಠವೇ ಸಾಕ್ಷೀಯಾಗಿದೆ.

ಅಷ್ಟೆ ಅಲ್ಲದೆ ಪೂಜ್ಯರೇ ಸ್ವತಃ ಸೇವೆಗೆ ನಿಂತು ಶ್ರೀ ಮಠದ ಕೋವಿಡ್ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರದ ಎಲ್ಲಾ ಸೋಕಿತರಿಗೆ ಮತ್ತು ವೈದ್ಯರೊಳಗೊಂಡ ಸೇವಾ ಕಾರ್ಯಪ್ರವೃತ್ತರಾದವರಿಗೆ ಪ್ರತಿನಿತ್ಯ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ, ರಾತ್ರಿ ಊಟದ ಕಲ್ಲಿಸಿದ್ದಾರೆ. ನಗರದ ನಿರ್ಗತಿಕರಿಗೂ ಪ್ರತಿನಿತ್ಯ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಪ್ರತಿನಿತ್ಯ ಸೊಂಕಿತರ ಜೊತೆ ನೇರವಾದ ಸಂಪರ್ಕದಲ್ಲಿದ್ದು ಖುದ್ದಾಗಿ ಬೇಟಿ ನೀಡಿ ಆಸ್ಪತ್ರೆಯಲ್ಲಿರುವ ಸೊಂಕಿತರಿಗೆ ಹಾಡು, ಆಟ, ಹಿತಮಿತವಾದ ಮನೋರಂಜನೆ ತೊಡಗಿಸಿಕೊಳ್ಳುವಂತೆ ಮಾಡುತ್ತಾರೆ. ತಮ್ಮ ಅನುಭಾವದ ಮೂಲಕ ಆಶಿರ್ವಚನ ನೀಡಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿ ಸಂತಸಗೂಳಿಸಿಸುತ್ತಾರೆ. ಪ್ರತಿ ನಿತ್ಯ ದಾಸೋಹ ಮಹಹಾಮನೆಗೆ ತೆರಳಿ ತಾವೇ ಸ್ವತಃ ಚಪಾತಿ ಮಾಡಿ ಪ್ರಸಾದ ಸಿದ್ಧಪಡಿಸುವವರಿಗೆ ಇತರ ಸೇವಕರಿಗೆ ಪ್ರೋತ್ಸಾಹ ತುಂಬುತ್ತಾರೆ. ಸೋಂಕಿತರು ಬೇಗ ಗುಣಮುಖರಾಗಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಲು ಹಾಲು, ಹಣ್ಣು, ಡ್ರೈಫುಡ್‍ಗಳನ್ನು ನೀಡಿ ಮನೆಯ ಮಕ್ಕಳಂತೆ ಪೋಷಿಸಿ ಆಶಿರ್ವದಿಸಿದ್ದಾರೆ. ಹಗಲು ರಾತ್ರಿ ಎನ್ನದೆ ಧಣಿವರಿಯದೆ ದುಡಿಯುವ ಈ ಕರೋನ ಸಂಕಷ್ಟದ ಸಂದರ್ಭದಲ್ಲಿ ಸಂಬಂಧಿಕರಂತೆ ಸಹಾಯಕವಾಗಿ ನಿಂತ ನಿಜ ಸಂತರಾಗಿದ್ದಾರೆ.
“ನಾವು ಕರೋನದಿಂದ ಬಹಳ ಹೆದರಿದ್ದೆವು, ಬುದ್ದಿಯವರ ಆಸ್ಪತ್ರೆಯಲ್ಲಿ ಸೇರಿದಾಗ ಅಲ್ಲಿನ ಫಲಕಾರಿ ಚಿಕಿತ್ಸೆ ಹಾಗೂ ಮನೆಯಂತಿರುವ ವಾತಾವರಣ ನಮ್ಮನ್ನು ಬೇಗ ಗುಣಮುಖರನ್ನಾಗಿಸಿತು. ಈ ಸಂಕಷ್ಟದದ ಪರಸ್ಥಿತಿಯಲ್ಲಿ ಶ್ರೀ ಗವಿಮಠದ ಆಸ್ಪತ್ರೆ ದೊರೆತದ್ದು ನಮಗೆ ವರವಾಗಿ ಪರಿಣಮಿಸಿತು. ಅಲ್ಲಿನ ವೈದ್ಯರು, ಎಲ್ಲಾ ಶಷ್ರೂಕ ಮತ್ತು ಇತರ ಸೇವಕರು ಹತ್ತಿರದಿಂದ ಕಂಡು, ಪ್ರೀತಿಯಿಂದ ಮಾತನಡಿಸಿ ಮನೆಯಂತೆ ಸಂಬಂಧಿಕರಂತೆ ನೋಡಿಕೊಳ್ಳುತ್ತಾರೆ” ಎಂದು ಪೂಜ್ಯರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಕೋವಿಡ್ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುವ ಆಸ್ಪತ್ರೆಯ ಫಲಾನುಭವಿಗಳು.
ಅಲ್ಲಿನ ವೈದ್ಯರು, ಎಲ್ಲಾ ಶಷ್ರೂಕ ಮತ್ತು ಇತರ ಸೇವಕರನ್ನು ಸಹ ಉಟೋಪಚಾರದ ಇತರ ಎಲ್ಲಾ ವ್ಯವಸ್ಥೆ ಕಲ್ಪಿಸಿ ಸಹೋದರರಂತೆ ಎಲ್ಲದಕ್ಕೂ ಆಸರೆಯಾಗಿ ನಿಂತು ಎಲ್ಲರಲ್ಲಿ ಉತ್ಸಾಹಕ್ಕೆ ಕಾರಣರಾದವರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು. ಆರೋಗ್ಯದ ಸುಧಾರಣೆಗೆ ಚಿಕಿತ್ಸೆ ಎಷ್ಟು ಮುಖ್ಯವೋ ಅಷ್ಟೆ ಮನಸ್ಸುಗಳು ಜೊತೆಗಿರಬೆಕು ಮಗು ಮನಸ್ಸಿನ ಅಂತಹ ಅಪರೂಪದ ಸಂತರೆಂದರೆ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳಾಗಿದ್ದಾರೆ. ಪೂಜ್ಯರ ಸಾರ್ಥಕ ಸೇವೆ ಇತರರಿಗೂ ಪ್ರೇರಣೆಯಾಗಲಿ, ಆದಷ್ಟು ಬೇಗ ಈ ಕರೋನ ಮಹಮಾರಿ ದೂರವಾಗಿ ನಾಡಿನ ಸಂಕಷ್ಟ ದೂರವಾಗಲೆಂದು ಪ್ರಾರ್ಥಿಸೋಣ.