ಆಳಂದ: ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲೇಗಾಂವ ಗ್ರಾಮದ ಸಮೀಪದ ವಿಂಡ್ ಕಂಪನಿಯ ಘಟಕದಲ್ಲಿ ಬುಧವಾರ ರಾತ್ರಿ ವೇಳೆ ಮಲಗಿಕೊಂಡಿದ್ದ ಇಬ್ಬರು ಕಾವಲುಗಾರರ ಮೇಲೆ ಇದೇ ಕಂಪನಿಯ ಕಾರ್ಯನಿರ್ವಹಿಸುತ್ತಿದ್ದ ಲಾರಿ ಹಾಯ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಸಂತೋಷ ಶಿವುಪಾದಪ್ಪ ಕಲಬುರಗಿ (೪೫), ಸಂಗಯ್ಯಾ ಬಸಯ್ಯಾ ಮಠ (೪೭), ಮೃತಪಟ್ಟಿದ್ದಾರೆ. ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ಹೇಳಿಕೊಂಡಿವೆ.
ಲಾರಿ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಆಳಂದ ಡಿವೈಎಸ್‌ಪಿ ತಮ್ಮರಾಯ ಪಾಟೀಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮುಂದಿನ ಕ್ರಮ ಅನುಸರಿಸಿದ್ದಾರೆ.
Prev Post