Shubhashaya News

ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕ್ಲಫ್ಟ್ ಶಸ್ತ್ರಚಿಕಿತ್ಸಾ ಮಿಷನ್ ಶಿಬಿರ

ಕಲಬುರಗಿ ನಗರದ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ವರ್ಣಲತಾ ಮದರ್ಸನ್ ಟ್ರಸ್ಟ್ ಮತ್ತು ಭಾರತದ ಅಗ್ರಣಿಯ ಕ್ಲಫ್ಟ್ ಚಿಕಿತ್ಸಾ ಸಂಸ್ಥೆ ಮಿಷನ್ ಸ್ಟೈಲ್ ಅವರ ಸಹಯೋಗದಲ್ಲಿ ಉಚಿತ ಕ್ಲಫ್ಟ್ ಶಸ್ತ್ರಚಿಕಿತ್ಸಾ ಮಿಷನ್ ಶೀಬಿರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಶರಣಬಸಪ್ಪ ಖ್ಯಾತನಾಳ, ದೀಲಿಪ ಮಿಶ್ರಾ, ಕೊನರಾಡ ಡೆನಿಸ್ , ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಹಾಗೂ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕಿ ಡಾ. ರಾಜಶ್ರೀ ಪಲಾಡಿ, ಡಾ. ಆದಿತ್ಯ ಕಾಜ, ಡಾ. ಜಯಂತ್ ಕಾಜಾಡಾ. ಪ್ರಿಯಾಂಕಾ ಕಣ್ಣಿ, ಡಾ. ಪ್ರಶಾಂತ್ , ಡಾ. ಇನಾಮೊದ್ದಿನ ಅವರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿತು.

ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಹಾಗೂ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕಿ ಡಾ. ರಾಜಶ್ರೀ ಪಲಾಡಿ ಮಾತನಾಡಿ, ಸ್ವರ್ಣಲತಾ ಮದರ್ಸನ್ ಟ್ರಸ್ಟ್ ಮತ್ತು ಭಾರತದ ಅಗ್ರಣಿಯ ಕ್ಲಫ್ಟ್ ಚಿಕಿತ್ಸಾ ಸಂಸ್ಥೆ ಮಿಷನ್ ಸ್ಟೈಲ್ ಅವರ ಸಹಯೋಗದಲ್ಲಿ ಇದು ಕರ್ನಾಟಕದಲ್ಲಿ 16 ನೇ ಮಿಷನ್ ಆಗಿದ್ದು, ಭಾರತದಲ್ಲಿ ಒಟ್ಟಾರೆಯಾಗಿ182. ಮಿಷನ್ ಸ್ಮೈಲ್ ೨೦೦೩ ರಲ್ಲಿ ಪ್ರಾರಂಭವಾದಾಗಿನಿಂದ ಕರ್ನಾಟಕದಲ್ಲಿ 1857 ಕ್ಕೂ ಹೆಚ್ಚು ಮತ್ತು ಭಾರತದಲ್ಲಿ ಒಟ್ಟಾರೆಯಾಗಿ 59000 ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಿದೆ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲದೊಂದಿಗೆ ನಾವು ಕರ್ನಾಟಕದ ಗುಲ್ಬರ್ಗದಲ್ಲಿ ಮುಂದಿನ ಮಿಷನ್ ಅನ್ನು ಆಯೋಜಿಸಲು ಸಿದ್ಧರಿದ್ದೇವೆ ಎಂದರು.
ಇದು ಕಲಬುರಗಿಯಲ್ಲಿ ನಮ್ಮ 8 ನೇ ಮಿಷನ್ ಮತ್ತು ಭಾರತದಲ್ಲಿ ಒಟ್ಟಾರೆಯಾಗಿ 182ನೇ ಮಿಷನ್ ಆಗಲಿದೆ. ಈ ಮಿಷನ್ ಅನ್ನು ಕಲಬುರಗಿಯ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ವರ್ಣ ಲತಾ ಮದರ್ಸನ್ ಟ್ರಸ್ಟ್ನ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮೀರ ಬೊಮಿಕ್, ರಫಿ ರಹೆಮಾನ, ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿವರ್ಗದವರು ಇದ್ದರು.

Leave A Reply

Your email address will not be published.