Shubhashaya News

ಬರಗಾಲ ಘೋಷಿಸಿ ಮಧ್ಯಂತರ 50 ಸಾವಿರ ಪರಿಹಾರ ನೀಡಲು ಆಗ್ರಹ

ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ಜವಳಿ ತಾಲೂಕು ಬರಗಾಲವೆಂದು ಘೋಷಣೆ ಮಾಡಬೇಕು ಮತ್ತು ಮಧ್ಯಂತರ ಪರಿಹಾರವಾಗಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಆಗ್ರಹಿಸಿದರು.

ಜೇವರ್ಗಿ ಬಿಜೆಪಿ ಮಂಡಲ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಈ ವರ್ಷ ಮಳೆ ಬಾರದೆ ರೈತರು ಕಂಗಾಲಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೆ ಮಂತ್ರಿಗಳಾಗಿ ರೈತರ ಪರವಾಗಿ ಬರಗಾಲ ಘೋಷಣೆ ಮಾಡಿಸುವುದು ಬೀಟ್ಟು ಅದ್ದೂರಿ ಮೆರವಣಿಗೆ ಮಾಡಿಕೊಂಡಿದ್ದು ನೋಡಿದರೆ ಮಂತ್ರಿಗಳಿಗೆ ಅಧಿಕಾರವೆ ಮುಖ್ಯ ರೈತರ ಹಿತ ಮುಖ್ಯವಲ್ಲ ಎಂದು ಸಚಿವ ಡಾ.ಅಜಯಸಿಂಗ್ ತೋರಿಸಿಕೊಟ್ಟಿದ್ದಾರೆ. ರೈತರ ನೋವಿಗೆ ಸ್ಪಂದನೆ ಮಾಡದೆ ಇರುವಂಥ ಮಂತ್ರಿಗಳಿಗೆ ರೈತರ ಶಾಪ ೨೦೨೮ರ ಚುನಾವಣೆಯಲ್ಲಿ ತಟ್ಟುತ್ತದೆ. ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಸಚಿವರ ವಿರುದ್ಧ ಆಕ್ರೋಶವ್ಯಕ್ತ ಪಡಿಸಿದರು.

ಜೇವರ್ಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಒಂದು ಸರಿಯಾದ ಶಿಕ್ಷಣ ಸಂಸ್ಥೆ ಇಲ್ಲ, ಸರಿಯಾದ ವಸತಿ ನಿಲಯಗಳಿಲ್ಲದೆ ಸಾಕಷ್ಟು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಇದರ ಬಗ್ಗೆ ಕಾಳಜಿ ಇಲ್ಲದ ಸಚಿವರು, ಮತ್ತು ಕ್ಷೇತ್ರದಲ್ಲಿ ಯಾವುದೆ ಅಭಿವೃದ್ದಿ ಮಾಡದೆ ಕೆಲವರ ಜೋತೆ ಕೂಡಿಕೊಂಡು ಅಭಿವೃದ್ದಿ ಹೆಸರಿನಲ್ಲಿ ಲ್ಯಾಂಡ್ ಆರ್ಮಿ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವುದೆ ಇವರ ದೊಡ್ಡ ಅಭಿವೃದ್ದಿ ಕೆಲಸವಾಗಿದೆ. ತಾಲೂಕಿನಲ್ಲಿ ಅಭಿವೃದ್ದಿ ಕಾಮಗಾರಿಗಳಿಗಾಗಿ ಪಿಡಬ್ಲೂö್ಯಡಿ ಇಲಾಖೆಯಲ್ಲಿ ಮತ್ತು ವಿವಿಧ ಇಲಾಖೆಯಲ್ಲಿ ಟೆಂಡರ್ ಪ್ರಕ್ರೀಯೆಯಲ್ಲಿಯೂ ಸಹ ಗೋಲಮಾಲ್ ಮಾಡಿ ಅಲ್ಲಿಯೂ ಹಣ ಲೂಟಿ ಹೊಡೆಯುವ ಕೆಲಸವಾಗಿದೆ ಎಂದು ಸಚಿವರ ವಿರುದ್ಧ ಗಂಭೀರವಾದ ಆರೋಪ ಮಾಡಿದರು.

ಸೆ.೧೫ರ ಒಳಗಾಗಿ ಜೇವರ್ಗಿ ಯಡ್ರಾಮಿ ತಾಲೂಕು ಬರಗಾಲ ಘೋಷಣೆ ಮಾಡಿ ಮಧ್ಯಂತರ ಪರಿಹಾರ ಎಕರೆಗೆ ೫೦ ಸಾವಿರ ರೂ ನೀಡಬೇಕು, ಬೆಳೆವಿಮೆಯಿಂದ ವಂಚಿತರಾದ ರೈತರಿಗೆ ತಕ್ಷಣ ವಿಮೆ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಧನ ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಎಲ್ಲಾ ಬೇಡಿಕೆಗಳು ಈಡೆರಿಸದೆ ಹೊದರೆ ಮುಂದಿನಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ತಹಸೀಲ್ದಾರ ಅಂಜುಮ ತಬಸುಮ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ದೇವಿಂದ್ರ ಮುತ್ತಕೋಡ, ಮಲ್ಲಿನಾಥಗೌಡ ಯಲಗೋಡ, ಶೋಭಾ ಭಾಣಿ, ಮರೆಪ್ಪ ಬಡಿಗೇರ, ರೇವಣಸಿದ್ದಪ್ಪ ಸಂಕಾಲಿ, ಮಲ್ಲಣ್ಣಗೌಡ ಪಾಟೀಲ ರದ್ದೇವಾಡಗಿ, ನಿಂಗಣ್ಣ ದೊಡಮನಿ, ಹಣಮಂತ್ರಾಯ ಹೂಗಾರ, ಬಾಪುಗೌಡ ಪಾಟೀಲ ಬಿರಾಳ, ಗುರುರಾಜ ನರಿಬೋಳ, ಭೀಮಾಶಂಕರ ಕುರಡೆಕರ್, ಭಾಗಪ್ಪ ಯಲಗೋಡ, ಶಿವಪುತ್ರ ಕೊಣಿನ್, ಮಲ್ಲಣ್ಣ ಕುಲಕರ್ಣಿ, ಸಿದ್ದು ದ್ಯಾಮ, ಗುಂಡು ಸಾಹು ಗೋಗಿ, ರಾಜಶೇಖರ ಗೌನಳ್ಳಿ, ವಿಶ್ವರಾಧ್ಯ ಬಡಿಗೇರ, ತಿಪ್ಪಣ್ಣ ರಾಠೋಡ, ಸಂತೋಷ ಮಲ್ಲಾಬಾದ, ರಾಜು ರದ್ದೆವಾಡಗಿ, ಹಣಮಂತ ಶಾಬಾದಿ, ಖಯುಮ್ ಜಮದಾರ್, ಬಾಬಾ ಪಟೇಲ್, ಈಶ್ವರ ಹಿಪ್ಪರಗಿ, ನಿಂಗಣ್ಣ ರದ್ದೇವಾಡಗಿ, ಅನಿಲಕುಮಾರ ದೊಡಮನಿ, ವಿಶ್ವ ಆಲೂರ, ಬಸವರಾಜ ಮದ್ರಕಿ, ಶ್ರೀಕಾಂತ ಬಡಿಗೇರ ಆಂದೊಲ, ಸಂತೋಷ ಕಟ್ಟಿಮನಿ, ಎಂ ಡಿ ಸಮೀರ್ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.