ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಆಳಂದ ತಾಲೂಕಿನ ಹೋಬಳಿ ಕೇಂದ್ರವಾದ ನಿಂಬರ್ಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಭೇಟಿ ನೀಡಿ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು.

ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಜೊತೆಗೆ ಕಡ್ಡಾಯವಾಗಿ ಸೋಂಕಿನ ಲಕ್ಷಣ ಇರುವವರು ತಪಾಸಣೆ ಮಾಡಿಕೊಳ್ಳಲು ಮುಂದೆ ಬರಬೇಕು ಅಲ್ಲದೇ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಳು ಇದೊಂದು ಸೇವೆ ಮಾಡಲು ತಮಗೆ ದೊರೆತ ಅವಕಾಶವೆಂದು ಭಾವಿಸಿ ಸೇವೆ ನೀಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗಕ್ಕೆ ಸೋಂಕು ವ್ಯಾಪಿಸಿರುವುದರಿಂದ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಸ್ಥಳೀಯ ವೈದ್ಯರನ್ನು ಕಂಡು ಉಪಚಾರ ಪಡೆಯಬೇಕು ಅಲ್ಲದೇ ಮನೆಯಲ್ಲಿ ಆರೈಕೆ ಪಡೆಯುತ್ತಿರುವವರು ಸ್ವಯಂ ಪ್ರೇರಿತರಾಗಿ ಕೋವಿಡ್ ಕೇಂದ್ರದಲ್ಲಿ ದಾಖಲಾಗಬೇಕು ಇದರಿಂದ ಮನೆಯವರನ್ನು ಮತ್ತು ಸುತ್ತಮುತ್ತಲಿನವರನ್ನು ಸೋಂಕಿನಿಂದ ರಕ್ಷಿಸಬಹುದು ಎಂದರು.
ಆಸ್ಪತ್ರೆಯಲ್ಲಿ ಶೀಘ್ರವಾಗಿ ಆಕ್ಸಿಜನ್ ಅಳವಡಿಸುವ ಕಾರ್ಯ ಮಾಡಬೇಕು ಇದರಿಂದ ತಾಲೂಕಾ ಆಸ್ಪತ್ರೆಯ ಹೊರೆ ಕಡಿಮೆಯಾಗುವುದಲ್ಲದೇ ಸ್ಥಳೀಯವಾಗಿ ಚಿಕಿತ್ಸೆ ದೊರೆತಂತಾಗುತ್ತದೆ. ಕೋರೋನಾ ಸೋಂಕೀತರಿಗೆ ನೀಡುವ ಕೋರೋನಾ ಕಿಟ್‍ನ್ನು ತ್ವರಿತವಾಗಿ ನೀಡಬೇಕು ಮತ್ತು ಸೋಂಕಿತರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಯನ್ನು ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಮೃತ ಬಿಬ್ರಾಣಿ, ಶ್ರೀಶೈಲ ಪಾಟೀಲ, ಪರಮೇಶ್ವರ ದುಗೊಂಡ, ಮೋಹನ ರಾಠೋಡ, ಶಿವಪುತ್ರಪ್ಪ ಮಾಳಗಿ ಕಲ್ಮೇಶ ಮಠಪತಿ, ಶರಣು ಹತ್ತರಕಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅಭಯಕುಮಾರ ಜೈನ ಸೇರಿದಂತೆ ಇತರರು ಇದ್ದರು.
ಡಾಕ್ಟರ್ ಆದವರು ಅಲ್ಲೇ ಇದ್ದು ಗ್ರಾಮದಲ್ಲಿ ಯಾವಾಗ ಚಿಕಿತ್ಸೆಗಾಗಿ ಬರುತ್ತಾರೋ ಎಂಬುವುದು ಗೊತ್ತಾಗುವುದಿಲ್ಲ ಕಾರಣಗಳಿಂದಗಿ ಆದ್ದರಿಂದ ಅಲ್ಲೇ ವಾಸ್ತವ್ಯವನ್ನು ಹೂಡಿ ಚಿಕಿತ್ಸೆಯನ್ನು ಮಾಡಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿರುತ್ತದೆ👍