Shubhashaya News

ಸಮುದಾಯ ಆರೋಗ್ಯ ಕೇಂದ್ರಕ್ಕೆ ಹರ್ಷಾನಂದ ಗುತ್ತೇದಾರ ಭೇಟಿ, ಪರಿಶೀಲನೆ

ಮಾದನ ಹಿಪ್ಪರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಆಳಂದ ತಾಲೂಕಿನ ಹೋಬಳಿ ಕೇಂದ್ರವಾದ ಮಾದನ ಹಿಪ್ಪರ್ಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಭೇಟಿ ನೀಡಿ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು.


ಗ್ರಾಮೀಣ ಭಾಗಕ್ಕೆ ಸೋಂಕು ವ್ಯಾಪಿಸಿರುವುದರಿಂದ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಸ್ಥಳೀಯ ವೈದ್ಯರನ್ನು ಕಂಡು ಉಪಚಾರ ಪಡೆಯಬೇಕು ಅಲ್ಲದೇ ಮನೆಯಲ್ಲಿ ಆರೈಕೆ ಪಡೆಯುತ್ತಿರುವವರು ಸ್ವಯಂ ಪ್ರೇರಿತರಾಗಿ ಕೋವಿಡ್ ಕೇಂದ್ರದಲ್ಲಿ ದಾಖಲಾಗಬೇಕು ಇದರಿಂದ ಮನೆಯವರನ್ನು ಮತ್ತು ಸುತ್ತಮುತ್ತಲಿನವರನ್ನು ಸೋಂಕಿನಿಂದ ರಕ್ಷಿಸಬಹುದು ಎಂದರು.
ಆಸ್ಪತ್ರೆಯಲ್ಲಿ ಶೀಘ್ರವಾಗಿ ಆಕ್ಸಿಜನ್ ಅಳವಡಿಸುವ ಕಾರ್ಯ ಮಾಡಬೇಕು ಇದರಿಂದ ತಾಲೂಕಾ ಆಸ್ಪತ್ರೆಯ ಹೊರೆ ಕಡಿಮೆಯಾಗುವುದಲ್ಲದೇ ಸ್ಥಳೀಯವಾಗಿ ಚಿಕಿತ್ಸೆ ದೊರೆತಂತಾಗುತ್ತದೆ. ಕೋರೋನಾ ಸೋಂಕೀತರಿಗೆ ನೀಡುವ ಕೋರೋನಾ ಕಿಟ್‍ನ್ನು ತ್ವರಿತವಾಗಿ ನೀಡಬೇಕು ಮತ್ತು ಸೋಂಕಿತರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಯನ್ನು ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಶಿವಪ್ಪ ಕೋಳಶೆಟ್ಟಿ, ಗಣೇಶ ಓಣಮಶೆಟ್ಟಿ, ಸಿದ್ದಾರಾಮ ತೋಳನೂರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅಭಯಕುಮಾರ ಜೈನ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.