Shubhashaya News

ಕಲಬುರಗಿ: 18 ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಆರಂಭ

ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಕಲಬುರಗಿ ಜಿಲ್ಲೆಯ ಕೆಳಕಂಡ 18 ಪ್ರಮುಖ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ಬಿ. ಎಲ್. ಅವರು ತಿಳಿಸಿದ್ದಾರೆ.

ಈ ಅಂಚೆ ಕಚೇರಿಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ಹಾಗೂ ಅತ್ಯಾಧುನಿಕ ಬಯೋಮೆಟ್ರಿಕ್ ಸಾಧನಗಳ ಮೂಲಕ ಗುಣಮಟ್ಟದ ಆಧಾರ್ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರು ಅಗತ್ಯ ಮೂಲ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು.

ಸೇವೆ ಲಭ್ಯವಿರುವ ಅಂಚೆ ಕಚೇರಿಯ ವಿವರ ಇಂತಿದೆ: ಮುಖ್ಯ ಅಂಚೆ ಕಚೇರಿ (02), ರೈಲ್ವೆ ಸ್ಟೇಷನ್, ಜಗತ್, ಕಲಬುರಗಿ ಯುನಿವರ್ಸಿಟಿ, ಬಹಮನಿಪುರ, ಜಿ.ಜಿ.ಎಚ್., ನೆಹರು ಗಂಜ, ಆಳಂದ, ಅಫಜಲಪುರ, ಶಹಾಬಾದ್ (02), ವಾಡಿ, ಜೇವರ್ಗಿ, ದೇವಲಗಾಣಗಾಪುರ, ಮಹಾಗಾಂವ, ಸುಲೇಪೇಟ್ ಮತ್ತು ಕಾಳಗಿ.

Leave A Reply

Your email address will not be published.