Shubhashaya News

ಕಲಬುರಗಿ| ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನ ವತಿಯಿಂದ 20 ಯುವಕರಿಗೆ ಉಚಿತ ಕೌಶಲ ತರಬೇತಿ

ಕಲಬುರಗಿ, ಆ. 7: ಯುವಕರಿಗೆ ಉಚಿತ ಕೌಶಲ ತರಬೇತಿ ನೀಡುವ ಮೂಲಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತಿರುವ ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನ 2026ನೇ ಸಾಲಿನ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಮತ್ತೊಂದು ತಂಡ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದೆ.

ಟ್ರಸ್ಟ್ ವತಿಯಿಂದ ಈ ಬಾರಿ 10 ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ರಿಪೇರಿ ತರಬೇತಿ ಹಾಗೂ 10 ವಿದ್ಯಾರ್ಥಿಗಳಿಗೆ ನಾಲ್ಕು ಚಕ್ರ ವಾಹನ ಚಾಲನಾ ತರಬೇತಿ ನೀಡಲಾಗಿದೆ. ತರಬೇತಿ ಪೂರ್ಣಗೊಳಿಸಿದ 10 ವಿದ್ಯಾರ್ಥಿಗಳು ಚಾಲನಾ ಪರವಾನಗಿ (ಲೈಸೆನ್ಸ್) ಪಡೆದಿದ್ದಾರೆ.

ಕಳೆದ ಹಲವು ವರ್ಷಗಳಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಕೌಶಲ ತರಬೇತಿ ನೀಡುತ್ತಿರುವ ಟ್ರಸ್ಟ್, ಯುವಕರಲ್ಲಿ ಉದ್ಯೋಗ ಕೌಶಲ ಬೆಳೆಸುವುದು, ಸ್ವಾವಲಂಬನೆಗೆ ಪ್ರೇರೇಪಿಸುವುದು ಹಾಗೂ ಸ್ವಂತ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಎಂ.ಡಿ. ಇಕ್ಬಾಲ್ ಅಲಿ ತಿಳಿಸಿದ್ದಾರೆ.

ತರಬೇತಿ ಪಡೆದ ಯುವಕರು ತಮ್ಮ ಕೌಶಲವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಈ ಕಾರ್ಯಕ್ಕೆ ಸಹಕರಿಸಿದ ದಾನಿಗಳು, ಬೆಂಬಲಿಗರು, ತರಬೇತುದಾರರು ಹಾಗೂ ಹಿತೈಷಿಗಳಿಗೆ ಟ್ರಸ್ಟ್ ಕೃತಜ್ಞತೆ ಸಲ್ಲಿಸಿದೆ.

Leave A Reply

Your email address will not be published.