ಕಲಬುರಗಿ: ಕಾವೇರಿ ನೀರು ಬಿಡುಗಡೆ ಆದೇಶ ವಿಚಾರವಾಗಿ ಆಗಸ್ಟ್ 13 ರಂದು ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ತಮಿಳುನಾಡು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗುವ ಉದ್ದೇಶದಿಂದ ಪದೇಪದೇ ಖ್ಯಾತೆ ತೆಗೆಯುತ್ತಿದ್ದು ಈ ಬಗ್ಗೆ ತಕ್ಕಪಾಠ ಕಲಿಸಲು ಕನ್ನಡಪರ ಸಂಘಟನೆಗಳೊಡಗೂಡಿ ನಮ್ಮ ಸಂಘಟನೆಯಿಂದಲೂ ಹೋರಾಟಕ್ಕೆ ಬೆಂಬಲ ಸೂಚಿಸಿ ತಮಿಳುನಾಡು ನೀತಿಯನ್ನು ಖಂಡಿಸಲಾಗುತ್ತದೆ ಎಂದು ಹೇಳಿದರು. ಕಾವೇರಿ ನೀರು ನಮ್ಮದು, ನಮ್ಮ ನೀರು ನಮ್ಮ ಹಕ್ಕು ಮೊದಲು ಕರ್ನಾಟಕದ ರೈತರಿಗೆ ನೀರು ದೊರೆಯಬೇಕು. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಗೂ ರೈತರಿಗೆ ನೀರಿನ ಸಮಸ್ಯೆ ಎದುರಾಗಿದೆ.ಇಂತಹ ಕಠಿಣ ಸಂಧರ್ಭದಲ್ಲಿ ತಮಿಳುನಾಡಿ ಗೆ ನೀರು ಬಿಡದಂತೆ ಮಾಡುವುದು ಸೂಕ್ತವಾದ ಅಂಶವಾಗಿದೆ. ಕಾವೇರಿ ಜಲ ವಿವಾದದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಲವು ಸಮಾಜಪರ ಕೆಲಸಗಳನ್ನು ಮಾಡುತ್ತ ಬರುತ್ತಿದ್ದು ಕನ್ನಡದ ನೆಲ, ಜಲ ವಿಚಾರದಲ್ಲಿಯೂ ನಾವು ಕನ್ನಡದ ಪರ ಜೊತೆಯಾಗುತ್ತೇವೆ.ಕನ್ನಡದ ವಿಚಾರದಲ್ಲಿ ಕನ್ನಡಿಗರಿಗೆ, ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
Prev Post