ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸೆಮಿ ಲಾಕ್ ಡೌನ್ ನಡುವೆಯೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 40 ಕ್ಕಿಂತ ಹೆಚ್ಚು ಮಂದಿ ಸೇರದಂತೆ ಕಾಮಗಾರಿಗಳನ್ನು ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 10 ರಿಂದ ಅನ್ವಯವಾಗುವಂತೆ ಮೇ. 24 ರವರೆಗೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.
ಆದರೆ ಮೇ.12 ರಂದು ಬುಧವಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದು, ನರೇಗಾ ಯೋಜನೆಯಡಿ 40 ಕ್ಕಿಂತ ಹೆಚ್ಚು ಮಂದಿ ಸೇರದಂತೆ ಕಾಮಗಾರಿಗಳನ್ನು ಮಾಡಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.