ಆಳಂದ: ಪಟ್ಟಣದ ಹೊಸ ಚೆಕ್‌ಪೋಸ್ಟ್ನಿಂದ ಹನುಮಾನ ಅಗಸಿ ಹಳ್ಳದವರೆಗೆ ಬೈಪಾಸ್ ರಸ್ತೆಯಾಗಿ ರೂಪುಗೊಳ್ಳಬೇಕಿದ್ದ ಬೈಪಾಸ್ ದ್ವಿಮುಖ ಸಂಚಾರಕ್ಕೆ ಅನುಕೂಲವಾಗುವ ಬದಲು ಏಕಮುಖ ರಸ್ತೆಯಾಗಿ ನಿರ್ಮಾಣವಾಗಿರುವುದು ರ‍್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಆಳಂದ: ಪಟ್ಟಣದ ಟ್ರಾಫಿಕ್ ದಟ್ಟಣೆಗೆ ಶಾಶ್ವತ ಪರಿಹಾರ ನೀಡಬೇಕಿದ್ದ ಬೈಪಾಸ್ ರಸ್ತೆ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ತನ್ನ ಉದ್ದೇಶವನ್ನೇ ಕಳೆದುಕೊಂಡಿರುವ ಆರೋಪಗಳು ಕೇಳಿಬಂದಿವೆ.
ಹೊಸ ಚೆಕ್‌ಪೋಸ್ಟ್ನಿಂದ ಹನುಮಾನ ಅಗಸಿ ಹಳ್ಳದ ಮೂಲಕ ಎಚ್‌ಕೆಇ ಡಿಗ್ರಿ ಕಾಲೇಜು ಭಾಗಕ್ಕೆ ಸಂಪರ್ಕ ಕಲ್ಪಿಸಿ, ಶ್ರೀರಾಮಮಾರುಕಟ್ಟೆ, ಮುಖ್ಯರಸ್ತೆ ನಿಲ್ದಾಣ ಹಾಗೂ ಪಟ್ಟಣದ ಒಳಭಾಗದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾಗಿ ರೂಪುಗೊಳ್ಳಬೇಕಿದ್ದ ರಸ್ತೆ, ಈಗ ಇಕ್ಕಟ್ಟಿನ ಏಕಮುಖ ಸಿಮೆಂಟ್ ರಸ್ತೆಯಾಗಿ ಮಾರ್ಪಟಿದೆೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಸುಮಾರು ೧.೨೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಳಿರಾಮ ಬಂಗಲಾದಿAದ ಹನುಮಾನ ಅಗಸಿ ಹಳ್ಳದವರೆಗೆ ರಸ್ತೆ ವಿಸ್ತರಣೆ ಮತ್ತು ಸಿಮೆಂಟೀಕರಣ ನಡೆಯುತ್ತಿದ್ದರೂ, ಕಾಮಗಾರಿಯಲ್ಲಿ ಮೂಲಭೂತ ತಾಂತ್ರಿಕ ಮಾನದಂಡಗಳನ್ನೇ ಕಡೆಗಣಿಸಲಾಗಿದೆ ಎಂಬ ಆರೋಪಗಳು ಸಾರ್ವನಿಕರಿಂದ ಕೇಳಿಬರುತ್ತಿವೆ.
ಬೈಪಾಸ್ ಬದಲು ಇಕ್ಕಟ್ಟಿನ ರಸ್ತೆ:
ಈ ರಸ್ತೆ ಮೂಲತಃ ಪಟ್ಟಣದ ಹೊರವಲಯದಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುಕೂಲವಾಗುವ ಬೈಪಾಸ್ ಆಗಬೇಕಿತ್ತು. ಆದರೆ ರಸ್ತೆ ವಿಸ್ತರಣೆಗೊಳ್ಳದೇ, ಮಧ್ಯದಲ್ಲೇ ರಸ್ತೆಯ ಅಗಲವೇ ಕಡಿಮೆಯಾಗಿದೆ. ಪರಿಣಾಮ, ಎರಡು ವಾಹನಗಳು ಎದುರುಬಂದರೆ ಒಂದಕ್ಕೆ ದಾರಿ ಬಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ದ್ವಿಚಕ್ರವಾಹನ ಸವಾರರರು ಆಯ ತಪ್ಪಿ ಬಿದ್ದರೆ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ, ಇದು ಬೈಪಾಸ್ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈ ಕಾಮಗಾರಿ ನಡೆಯುತ್ತಿರುವ ರಸ್ತೆಯ ಹಿಂಭಾಗದಲ್ಲಿರುವ ಸೇತುವೆ ಕಿತ್ತುಹೋಗಿದ್ದರೂ ಅದನ್ನು ಪುನರ್‌ನಿರ್ಮಿಸುವ ಕೆಲಸ ನಡೆದಿಲ್ಲ ಎನ್ನಲಾಗಿದೆ. ಅಲ್ಲದೆ ಮಧ್ಯಭಾಗದಲ್ಲಿ ನಿರ್ಮಿಸಬೇಕಿದ್ದ ಎರಡು ಕಲ್ವಂಟ್À ಕಾಮಗಾರಿಯೂ ಸರ್ಮಕವಾಗಿ ಪೂರ್ಣಗೊಂಡಿಲ್ಲ ಎಂಬ ಆರೋಪಗಳಿವೆ.
ಹಳೆಯ ತಪ್ಪಿನಿಂದ ಪಾಠ ಕಲಿತಿಲ್ಲವೇ?
ಈ ಹಿಂದೆಯೂ ಇದೇ ರಸ್ತೆಗೆ ಮಾಜಿ ಶಾಸಕರ ಅವಧಿಯಲ್ಲಿ ಸುಮಾರು ೮೮ ಲಕ್ಷ ವೆಚ್ಚದಲ್ಲಿ ಡಾಂಬರ ರಸ್ತೆ ನಿರ್ಮಿಸಲಾಗಿತ್ತು. ಆದರೆ ಆ ರಸ್ತೆ ಒಂದು ವರ್ಷವೂ ಪೂರೈಸುವ ಮುನ್ನವೇ ಹಾಳಾಗಿತ್ತು. ಈಗ ಅದೇ ರಸ್ತೆಗೆ ಮತ್ತೆ ೧.೨೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ, “ಜನರ ಹಣವನ್ನು ಮತ್ತೆ ಮತ್ತೆ ವ್ಯರ್ಥ ಮಾಡಲಾಗುತ್ತಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬೈಪಾಸ್ ಭರವಸೆ ಎಲ್ಲಿಗೆ?:
ಶಾಸಕ ಬಿ.ಆರ್. ಪಾಟೀಲ ಅವರು ಅಧಿಕಾರದ ಆರಂಭದಲ್ಲಿಯೇ ಪಟ್ಟಣಕ್ಕೆ ಸಮರ್ಪಕ ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಇದುವರೆಗೆ ಆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅದರ ಬದಲಾಗಿ ಈಗ ನಿರ್ಮಿಸಿರುವ ರಸ್ತೆ ಕೂಡ ಭವಿಷ್ಯದ ವಾಹನ ದಟ್ಟಣೆಗೆ ಯಾವುದೇ ಶಾಶ್ವತ ಪರಿಹಾರ ಒದಗಿಸುವ ಲಕ್ಷಣಗಳು ಕಾಣುತ್ತಿಲ್ಲ.
ಅಧಿಕಾರಿಗಳ ಮೌನಕ್ಕೂ ಟೀಕೆ:
ಈ ರಸ್ತೆಯ ಕಾಮಗಾರಿಯ ಬಗ್ಗೆ ಸಂಬAಧಿಸಿದAತೆ ಲೋಕೋಪಯೋಗಿ ಇಲಾಖೆಯ ಎಇಇ ಹೊನ್ನೇಶ ಅವರನ್ನು ಹಾಗೂ ಸಂಬAಧಿತ ಜೆಇ ಯುವರಾಜ ದೇವಣಗಾಂವ ಯತ್ನಿಸಿದಾಗ ಸದಾ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಧಿಕಾರಿಗಳು ಗುತ್ತಿಗೆದಾರರ ಮತ್ತು ಜನಪ್ರತಿನಿಧಿಗಳ ಕೈಗೊಂಬೆಯಾಗಿದ್ದಾರೆ. ಇದೇ ರಸ್ತೆ ಮೊದಲು ದ್ವಿಮುಖ ವಾಹನ ಸಂಚಾರಕ್ಕೆ ಅನುಕೂಲವಾಗಿತ್ತು. ಈಗ ಸಿಮೆಂಟ್‌ನಿAದ ಏಕಮುಖ ಸಂಚಾರ ಮಾಡಿದ್ದಾರೆ. ಇದರಿಂದ ದ್ವಿಮುಖ ವಾಹನ ಸಂಚಾರ ಎದುರಾಗಿ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ ಎಂದು ಈ ವ್ಯಾಪ್ತಿಯ ಹೆಸರು ಹೆಳಲು ಇಚ್ಚಿಸದ ರೈತರು ಹೇಳಿಕೊಂಡಿದ್ದಾರೆ.