Shubhashaya News

ಮಾದನಹಿಪ್ಪರ್ಗಾ: ಪಿಎಸ್‌ಐ ಅಮಾನತ್ತಿಗೆ ಆಗ್ರಹ

ಸೋಲಾರ್ ಕಂಪನಿಯಿOದ ರೈತರ ಜಮೀನು ಕಬಳಿಕೆ: ಆರೋಪ

ಆಳಂದ: ಪಟ್ಟಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರಿಗೆ ಬೇಡಿಕೆಯ ಮನವಿ ಸಲ್ಲಿಸಿದರು.

ಆಳಂದ: ತಾಲೂಕಿನ ರೈತರ ಜಮೀನನ್ನು ಒಪ್ಪಂದ ಮೀರಿ ಆಕ್ರಮಿಸಿಕೊಂಡಿರುವ ಆರೋಪ ಹೊತ್ತಿರುವ ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ ೭ಪ್ರೆöÊವೇಟ್ ಲಿಮಿಟೆಡ್ (ಬ್ಲೂಪಿನ್ ಎನರ್ಜಿ) ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಚೆಕ್‌ಪೋಸ್ಟ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತ ರೈತರು ತಹಶೀಲ್ದಾರ ಅಣ್ಣಾರಾವ್ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ ಪ್ರತಿಭಟನಾ ನಿರತರು, ಈಗಾಗಲೇ ದಿನಾಂಕ ೧೩.೦೭.೨೦೨೬ರಂದು ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳು ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವು. ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ ೭ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯ ವಿಭಾಗೀಯ ಜವಾಬ್ದಾರಿ ಹೊತ್ತಿರುವ ಮದನ್ ಬಿದರಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ರೈತರ ಜಮೀನನ್ನು ಒಪ್ಪಂದ ಮೀರಿ ಆಕ್ರಮಿಸಿಕೊಂಡ ಹಾಗೂ ಜಮೀನು ಬಿಟ್ಟುಕೊಡುವಂತೆ ರೈತರನ್ನು ಬೆದರಿಕೆ ಒಡ್ಡಿದ ಆರೋಪ ಕಂಪನಿಯ ಮೇಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಂಪನಿಯ ಜೊತೆ ಶಾಮೀಲಾಗಿರುವ ಸಂಶಯ ವ್ಯಕ್ತಪಡಿಸಿರುವ ರೈತ ಸಂಘಟನೆಗಳು, ಸಂಬAಧಿಸಿದ ಮಾದನಹಿಪ್ಪರ್ಗಾ ಪಿಎಸ್‌ಐ ಅವರನ್ನೂ ಅಮಾನತುಗೊಳಿಸಬೇಕು ಹಾಗೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಒಪ್ಪಂದ ಮೀರಿ ಜಮೀನು ಆಕ್ರಮಿಸಿಕೊಂಡಿರುವುದಕ್ಕೆ ಈಗಿನ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಅಂದರೆ ಪ್ರತಿ ಎಕರೆಗೆ ೨೨ ಲಕ್ಷ ರೂ. ಪರಿಹಾರ ನೀಡಬೇಕು. ಜಮೀನು ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿಗೆ ಕಂಪನಿ ಉದ್ಯೋಗ ನೀಡಬೇಕು. ಲೀಸಿಂಗ್ (ಬಾಡಿಗೆ) ಆಧಾರದಲ್ಲಿ ಜಮೀನು ಪಡೆದಿರುವ ರೈತರಿಗೆ ಪ್ರತಿ ಎಕರೆಗೆ ೫೦ ಸಾವಿರ ರೂ. ಬಾಡಿಗೆ ನೀಡಬೇಕು. ಸೋಲಾರ್ ಘಟಕದ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಅಂಬೇವಾಡ ಗ್ರಾಮದ ರೈತ ಅನಿಲ್ ತಂದೆ ಮಲ್ಲಪ್ಪ ಬುರಾಡಪುರ ಅವರಿಗೆ ಕೂಡಲೇ ಸ್ಥಳದಲ್ಲಿ ಸುಮಾರು ೧೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಆಳಂದ ತಾಲೂಕು ಬಂದ್ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಹಾಂತೇಶ ಎಸ್.ಜಮಾದಾರ, ಗೌರವ ಅಧ್ಯಕ್ಷ ವಿಠ್ಠಲ ಮಾಕಗೌಡ್ರು, ಮಹಿಳಾಧ್ಯಕ್ಷ ಕಮಲಬಾಯಿ ಸಜ್ಜನ್, ತಾಲೂಕು ಅಧ್ಯಕ್ಷ ಸಂಗನಬಸವ ಕಟಕೆ, ಉಪಾಧ್ಯಕ್ಷ ಸಂಜುಕುಮಾರ ಮಂಠಾಳೆ, ಮಲ್ಲಿನಾಥ ದುಗುಂಡ, ಸುರೇಂದ್ರ ಪಾಟೀಲ, ರವಿಕಾಂತ ಸಕ್ಕರಗಿ, ಶಿವಯ್ಯಾ ಸ್ವಾಮಿ, ಮಲ್ಲು ಉದ್ದನಶೆಟ್ಟಿ, ಶ್ರೀಶೈಲ ಗೊಳೆ ಅನೇಕರು ಭಾಗವಹಿಸಿದ್ದರು.

Leave A Reply

Your email address will not be published.