Shubhashaya News

23 ವಾರ್ಡ್‍ಗಳಲ್ಲಿ ಲಸಿಕೆ ಅಭಿಯಾನ

ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಹಕಾರದಿಂದ ಮೇ.1 ರಿಂದ 27ರ ವರೆಗೆ ಕೊರೊನಾ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಯಾ ವಾರ್ಡ್‍ನ ಜನರು ಆಯಾ ದಿನಾಕದಂದು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.
ಮೇ. 1 ರಂದು ವಾರ್ಡ್ ಸಂಖ್ಯೆ 1ರ ಸ್ಟೇಷನ್ ಏರಿಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 2 ರಂದು ವಾರ್ಡ್ ಸಂಖ್ಯೆ 2ರ ಕಾಶಿಗಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 3 ರಂದು ವಾರ್ಡ್ ಸಂಖ್ಯೆ 3ರ ಇಂದಿರಾನಗರದ ಸರ್ಕಾರಿ ಬಾಲಕಿಯರ ಮಂದಿರ, 4 ರಂದು ವಾರ್ಡ್ ಸಂಖ್ಯೆ 4ರ ವೆಂಕಟೇಶ್ವರ ನಗರದ ಬಾಲಾಜಿ ಮಂದಿರ, 5 ರಂದು ವಾರ್ಡ್ ಸಂಖ್ಯೆ 5ರ ಆಶ್ರಯ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆ, 6 ರಂದು ವಾರ್ಡ್ ಸಂಖ್ಯೆ 6ರ ತಾಂಡದ ಸರ್ಕಾರಿ ಪ್ರಾಥಮಿಕ ಶಾಲೆ, 7 ರಂದು ವಾರ್ಡ್ ಸಂಖ್ಯೆ 7ರ ಸ್ಟೇಷನ್ ತಾಂಡ ಸರ್ಕಾರಿ ಪ್ರಾಥಮಿಕ ಶಾಲೆ, 8 ರಂದು ವಾರ್ಡ್ ಸಂಖ್ಯೆ 8ರ ನಾಸರ್‍ಗಂಜ್ ಕಲ್ಯಾಣ ಮಂಟಪದಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.9 ರಂದು ವಾರ್ಡ್ ಸಂಖ್ಯೆ 9ರ ವಡ್ಡರಗಲ್ಲಿ ಸಮುದಾಯ ಭವನ, 10ರಂದು ವಾರ್ಡ್ ಸಂಖ್ಯೆ 10ರ ಆಸರ್ ಮೋಹಲ್ಲಾದ ಉರ್ದು ಪ್ರಾಥಮಿಕ ಶಾಲೆ, 11 ರಂದು ವಾರ್ಡ್ ಸಂಖ್ಯೆ 11ರ ಏಕ್ ಕಮಾನ್ ಪ್ರಾಥಮಿಕ ಶಾಲೆ, 12 ರಂದು ವಾರ್ಡ್ ಸಂಖ್ಯೆ 12ರ ಪ್ರಕಾಶ ನಗರ ದಾವಲ್ ಮಲೀಕ್ ದರ್ಗಾ, 13 ರಂದು ವಾರ್ಡ್ ಸಂಖ್ಯೆ 13ರ ಗೊಬ್ಬುರ್ ಗಲ್ಲಿ ಕೇಳಗೇರಿ ಪ್ರಾಥಮಿಕ ಶಾಲೆ, 14 ರಂದು ವಾರ್ಡ್ ಸಂಖ್ಯೆ 14ರ ಪಾಲಪಗಲ್ಲಿ ಕೇಳಗೇರಿ ಪ್ರಾಥಮಿಕ ಶಾಲೆ, 15 ರಂದು ವಾರ್ಡ್ ಸಂಖ್ಯೆ 15ರ ಬಸವನಗರ ಪ್ರಾಥಮಿಕ ಶಾಲೆ, 16 ರಂದು ವಾರ್ಡ್ ಸಂಖ್ಯೆ 16ರ ಏರಿಯಾದಲ್ಲಿ, 17 ರಂದು ವಾರ್ಡ್ ಸಂಖ್ಯೆ ಬಶೀರಗಂಜ್ ಪ್ರಾಥಮಿಕ ಶಾಲೆ, 18 ರಂದು ವಾರ್ಡ್ ಸಂಖ್ಯೆ 16ರ ವಚ್‍ವಚ್‍ಗಲ್ಲಿ ಉರ್ದು ಶಾಲೆಯ ಹಳೆಯ ಸರ್ಕಾರಿ ಆಸ್ಪತ್ರೆ, 19 ರಂದು ವಾರ್ಡ್ ಸಂಖ್ಯೆ 17ರ ಚೌಡಮ್ಮ ಮಂದಿರ, 20 ರಂದು ಚಾಣುಕ್ಯ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
21 ರಂದು ವಾರ್ಡ್ ಸಂಖ್ಯೆ 18ರ ಹೋಳಿಕಟ್ಟಾ ಪ್ರಾಥಮಿಕ ಶಾಲೆ ಚೌಡಮ್ಮ ಮಂದಿರ, 22 ರಂದು ವಾರ್ಡ್ ಸಂಖ್ಯೆ 22ರ ಹನುಮಾನ ಮಂದಿರ, 23 ರಂದು ವಾರ್ಡ್ ಸಂಖ್ಯೆ 19ರ ಚಿತ್ತಾವಲಿ ಶಾ ದರ್ಗಾ, 24 ರಂದು ವಾರ್ಡ್ 20ರ ಹರಿಜನ ವಾಡ್ ಸರ್ಕಾರಿ ಪ್ರಾಥಮಿಕ ಶಾಲೆ, 25 ರಂದು ವಾರ್ಡ್ 21ರ ಬಾಹರಪೇಠ್, 26 ರಂದು ವಾರ್ಡ್ 22ರ ಬಾಹರಪೇಠ್ ತಾಂಡಾ ಬಸವೇಶ್ವರ ಸಮುದಾಯ ಭವನ, 27 ರಂದು ವಾರ್ಡ್ ಸಂಖ್ಯೆ 23ರ ಚೌಕಿ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ಅಭಿಯಾನ ನಡೆಯಲಿದೆ. ಆಯಾ ದಿನಾಂಕದಂದು ಆಯಾ ವಾರ್ಡ್‍ನ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

Leave A Reply

Your email address will not be published.