ರಾಜ್ಯದ ಭೂಮಿ ಮಾಲೀಕರಿಗೆ ಸಂಬಂಧಿಸಿದ ಪಹಣಿ (RTC) ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ಕಂದಾಯ ಆಯುಕ್ತಾಲಯವು ಮಹತ್ವದ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಯನ್ನು ಹೊರಡಿಸಿದೆ.
ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದ ವತಿಯಿಂದ ರಾಜ್ಯದ ಎಲ್ಲಾ ಉಪವಿಭಾಗಾಧಿಕಾರಿಗಳು (AC) ಮತ್ತು ತಹಶೀಲ್ದಾರರುಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಪಹಣಿಯ ವಿವಿಧ ಕಾಲಂಗಳನ್ನು ತಿದ್ದುಪಡಿ ಮಾಡಲು ಯಾವ ನಿರ್ದಿಷ್ಟ ಸಾಫ್ಟ್ವೇರ್ ಮಾಡ್ಯೂಲ್ ಬಳಸಬೇಕು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಭೌತಿಕವಾಗಿ (Physical) ಅರ್ಜಿಗಳನ್ನು ನಿರ್ವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಇನ್ಮುಂದೆ ಕೇವಲ ಆನ್ಲೈನ್ ತಂತ್ರಾಂಶದ ಮೂಲಕವೇ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ, ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಚಿಸಲಾಗಿದೆ.
ಪಹಣಿ (RTC) ಕಾಲಂಗಳು ಮತ್ತು ತಿದ್ದುಪಡಿಗೆ ನಿಗದಿಪಡಿಸಿದ ಮಾಡ್ಯೂಲ್ಗಳು:
ಯಾವ ಕಾಲಂನ ತಿದ್ದುಪಡಿಗೆ ಯಾವ ತಾಂತ್ರಿಕ ಅವಕಾಶವಿದೆ ಎಂಬ ವಿವರ ಈ ಕೆಳಗಿನಂತಿದೆ: