ಆಳಂದ ಬೈಪಾಸ್ ಈಡೇರದ ಕನಸು ಇದ್ದ ರಸ್ತೆಗೂ ಅವೈಜ್ಞಾನಿಕ ಕೆಲಸ
೧.೨೦ ಕೋಟಿ ವೆಚ್ಚದ ರಸ್ತೆಯೂ ದ್ವಿಮುಖ ಸಂಚಾರಕ್ಕೆ ಅಪೂರ್ಣ
ಆಳಂದ: ಪಟ್ಟಣದ ಬಳಿರಾಮ ಬಂಗಲಾದಿAದ ಅಗಸಿ ಹಳ್ಳದವರೆಗಿನ ಆರಂಭಿಸಲಾದ ರಸ್ತೆ ಕಾಮಗಾರಿ ಇಕ್ಕಟ್ಟಿನ ನೋಟ್.
ಆಳಂದ: ಪಟ್ಟಣದ ಹೊಸ ಚೆಕ್‌ಪೋಸ್ಟ್ನಿಂದ ಆಳಂದ ಬಸ್ ನಿಲ್ದಾಣದತ್ತ ಸಂಚರಿಸುವ ವಾಹನ ಸವಾರರು ದಿನನಿತ್ಯ ಟ್ರಾಫಿಕ್ ದಟ್ಟಣೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಆಗಬೇಕಾಗಿದ್ದ ಸಮರ್ಪಕ ಬೈಪಾಸ್ ರಸ್ತೆಯ ಕಾಮಗಾರಿ ಇದೀಗ ಯತ್ತಾವತ್ತಾಗಿ ಇಕ್ಕಟ್ಟಿನಿಂದಲೇ ಕೂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ವಾಹನ ದಟ್ಟಣೆಯನ್ನು ತಪ್ಪಿಸಿ ಕಡಿಮೆ ಅವಧಿಯಲ್ಲಿ ತಲುಪಲು ಇರುವ ಏಕೈಕ ಮಾರ್ಗವೆಂದು ಪರಿಗಣಿಸಲ್ಪಡುವ ಹೊಸ ಚೆಕ್‌ಪೋಸ್ಟ್ನಿಂದ ಹನುಮಾನ ಹಳ್ಳದ ಎಚ್‌ಕೆಇ ಡಿಗ್ರಿ ಕಾಲೇಜು ಕಿ,ಮೀ ಸಮೀಪದವರೆಗಿನ ರಸ್ತೆಯನ್ನು ಹೆಚ್ಚಿನ ಅನುದಾನವಿಟ್ಟು ಶಾಶ್ವತ ಗುಣಮಟ್ಟದಲ್ಲಿ ನಿರ್ಮಿಸಬೇಕಿದ್ದರೆ, ಕಾಮಗಾರಿಯ ಹಿಂಬಾಗದ ರಸ್ತೆಯಲ್ಲಿ ಒಂದು ಬ್ರೀಜ್ ಕಿತ್ತು ಹೋಗಿದೆ ಮಾಡಿಲ್ಲ. ಅವೈಜ್ಞಾನಿಕ ಹಾಗೂ ತಾತ್ಕಾಲಿಕ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು ಸರ್ವೆ ಮಾಡಿಸಲಾಗುತ್ತಿದೆ ಎಂದು ಶಾಸಕ ಬಿ.ಆರ್. ಪಾಟೀಲ ಅವರು ಅಧಿಕಾರದ ಆರಂಭದ ದಿನಗಳಲ್ಲೇ ಸ್ಪಷ್ಟಪಡಿಸಿದ್ದರಾದರು ಈಗ ಇದರ ಚೆಕಾರವೇ ಇಲ್ಲ. ಈಗ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಸುಮಾರು ೧.೨೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಳಿರಾಮ ಬಂಗಲಾದಿAದ ಹನುಮಾನ ಅಗಸಿಯ ಹಳ್ಳದವರೆಗೆ ರಸ್ತೆ ವಿಸ್ತರಣೆ ಹಾಗೂ ಸುಧಾರಣೆ ನಡೆಯುತ್ತಿದೆ. ಆದರೆ ಕಾಮಗಾರಿಯಲ್ಲಿ ಮೂಲಭೂತ ತಾಂತ್ರಿಕ ಅಂಶಗಳನ್ನೇ ಕಡೆಗಣಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆ ಕಾಮಗಾರಿ ಅವೈಜ್ಞಾನಿಕ:
ರಸ್ತೆ ವಿಸ್ತರಣೆ ಮಾಡಬೇಕಾದ ಪ್ರದೇಶಗಳಲ್ಲಿ ಇನ್ನೂ ಒಂದರೆಡು ವಿದ್ಯುತ್ ಕಂಬಗಳನ್ನು ತೆರವುಗೊಳಿಸದಿರುವುದರಿಂದ ರಸ್ತೆ ಸಂಪೂರ್ಣ ಅಗಲವಾಗಿಲ್ಲ. ಪರಿಣಾಮವಾಗಿ ದ್ವಿಮುಖ ವಾಹನ ಸಂಚಾರಕ್ಕೆ ಮತ್ತೆ ತೊಂದರೆ ಮುಂದುವರಿಯುವ ಸಾಧ್ಯತೆ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ರಸ್ತೆಯ ಮಧ್ಯಭಾಗದಲ್ಲೇ ಅಡಚಣೆಗಳು ಉಳಿದಿರುವುದರಿಂದ ಅಪಘಾತ ಸಂಭವಿಸುವ ಆತಂಕ ಕೂಡ ಹೆಚ್ಚಾಗಿದೆ.
ಕಲ್ವಟ್, ಡ್ರೇನ್ ವ್ಯವಸ್ಥೆ ನಿರ್ಲಕ್ಷ್ಯ:
ರಸ್ತೆಯ ಮಧ್ಯಭಾಗದಲ್ಲಿ ನಿರ್ಮಿಸಬೇಕಾದ ಎರಡು ಕಲ್ವಟ್ ಕಾಮಗಾರಿಯೂ ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ರಸ್ತೆ ಬದಿಯಲ್ಲಿ ಪಕ್ಕಾ ಡ್ರೇನ್ ನಿರ್ಮಿಸದೇ ಇರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆಯೇ ನಿಂತುಕೊಳ್ಳುವ ಸಾಧ್ಯತೆ ಇದೆ. ನೀರು ಸರಿಯಾಗಿ ಹರಿದು ಹೋಗದಿದ್ದರೆ ಎರೆ ಭೂಮಿಯಿರುವ ಇಲ್ಲಿನ ಹೊಸ ರಸ್ತೆಯೇ ಕೆಲವೇ ತಿಂಗಳಲ್ಲಿ ಕುಸಿಯುವ ಭೀತಿ ಸಾರ್ವಜನಿಕರಲ್ಲಿ ಮನೆಮಾಡಿದೆ. ಅಲ್ಲದೆ, ಗಿಡ ತೆಗೆಯದೇ ರಸ್ತೆ ಮಾಡುತ್ತಿದ್ದಾರೆ. ಕಳೆಭಾದದ ಮುರು ೪೦ ಎಂಎA ಕಂಕರ ಬದಲು ೨೦ ನೆರವಾಗಿ ಹಾಕುತ್ತಿದ್ದಾರೆ. ಕ್ಯೂರಿಂಗ ಆಗುತ್ತಿಲ್ಲ ಎಂದು ಹೆಸರು ಹೆಳಲು ಇಚ್ಚಿಸದ ರೈತ ಮುಖಂಡರೊಬ್ಬರು ಆರೋಪಿಸಿದ್ದಾರೆ.
ಹಿಂದಿನ ರಸ್ತೆ ವರ್ಷದಲ್ಲೇ ಹಾಳು:
ಈ ಮಾಜಿ ಶಾಸಕರ ಅವಧಿಯಲ್ಲಿ ಸುಮಾರು ೮೮ ಲಕ್ಷ ವೆಚ್ಚದಲ್ಲಿ ಇದೇ ಡಾಂಬರ ರಸ್ತೆಗೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು.ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಈ ರಸ್ತೆ ವರ್ಷವೂ ತುಂಬುವ ಮುನ್ನವೇ ಕಿತ್ತುಹೋಗಿತ್ತು. ಇದೀಗ ಇದೇ ರಸ್ತೆಗೆ ಮತ್ತೆ ೧.೨೦ ಕೋಟಿ ಅನುದಾನ ಮೀಸಲಿಟ್ಟು ಲೋಕೋಪಯೋಗಿ ಇಲಾಖೆಯ ಮೂಲಕ ಸಿಮೆಂಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿರುವುದರಿಂದ “ಹಳೆಯ ತಪ್ಪಿನಿಂದ ಪಾಠ ಕಲಿತಿಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
“ಜನರ ಹಣ ವ್ಯರ್ಥ ಮಾಡಬೇಡಿ”
“ಶಾಶ್ವತ ಗುಣಮಟ್ಟದ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾದರೆ, ಕಾಮಗಾರಿ ಆರಂಭಕ್ಕೂ ಮುನ್ನ ವಿದ್ಯುತ್ ಕಂಬ ತೆರವು ಗಿಡಕಂಟಿ ತೆರವು, ಡ್ರೇನ್ ಹಾಗೂ ನೀರು ಹರಿವಿನ ವೈಜ್ಞಾನಿಕ ವ್ಯವಸ್ಥೆ ಮಾಡಬೇಕಿತ್ತು. ಆದರೆ ಯೋಜನೆ ರೂಪಿಸುವ ಹಂತದಲ್ಲೇ ನಿರ್ಲಕ್ಷ್ಯ ತೋರಿರುವುದು ಸ್ಪಷ್ಟವಾಗಿದೆ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಗಮ ಸಂಚಾರದ ಕನಸು ದೂರ:
ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ರೂಪಿಸಬೇಕಾಗಿದ್ದ ಈ ಬೈಪಾಸ್ ರಸ್ತೆ ನಿರ್ಮಾಣದ ಕನಸು ದೂರವಾಗಿಯೇ ಉಳಿದುಕೊಂಡಿದೆ. ಈಗ ಸಮರ್ಪಕ ಯೋಜನೆ ವಿಸ್ತರಣೆ ಹಾಗೂ ಗುಣಮಟ್ಟದ ನಿರ್ವಹಣೆಯಿಲ್ಲದೆ ನಡೆದರೆ, ಭವಿಷ್ಯದಲ್ಲಿಯೂ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಕಾಮಗಾರಿಯನ್ನು ತಕ್ಷಣ ತಾಂತ್ರಿಕವಾಗಿ ಪರಿಶೀಲಿಸಿ, ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆ ಬರುವ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದೇ ರೀತಿ ಗ್ರಾಮೀಣ ರಸ್ತೆಗಳಲ್ಲೂ ಪರಿಸ್ಥಿತಿ ಇದಕ್ಕೆ ಬಿನ್ನವಾಗಿಲ್ಲ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ದೂರದೃಷ್ಟಿ ಯೋಜನೆಗಳು ರೂಪಿಸಿ ಶಾಶ್ವತ ರಸ್ತೆಗೆ ಎದುನೋಡುವಂತೆ ಮಾಡಿದೆ.