Shubhashaya News

ರಾಜ್ಯದಲ್ಲಿ `ರೇಷನ್ ಕಾರ್ಡ್’ ತಿದ್ದುಪಡಿ, ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ: ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಬಾಕಿ ಉಳಿದಿದ್ದ ಪಡಿತರ ಚೀಟಿಗಳ ತಿದ್ದುಪಡಿ ಹಾಗೂ ಹೊಸ ಅರ್ಜಿ ಸಲ್ಲಿಕೆಗೆ ಮೇ 8, 2026ರಿಂದ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಮುಖವಾಗಿ ಇ-ಶ್ರಮ (E-Shram), ಪಿವಿಟಿಜಿ (PVTG) ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿ ಮಾಡ್ಯೂಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ.

ಪ್ರಮುಖ ಸೇವೆಗಳು ಮತ್ತು ಸಮಯ:

ಸಾರ್ವಜನಿಕರು ಈ ಕೆಳಗಿನ ಸೇವೆಗಳನ್ನು ನಿಗದಿತ ಸಮಯದಲ್ಲಿ ಪಡೆದುಕೊಳ್ಳಬಹುದು:

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ: ಮೇ 8, 2026 ರಿಂದ ಮಾರ್ಚ್ 31, 2027 ರವರೆಗೆ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಅವಕಾಶವಿರುತ್ತದೆ.

ಹೊಸ ಪಡಿತರ ಚೀಟಿ FI ಅನುಮೋದನೆ: ಬೆಳಿಗ್ಗೆ 10:00 ರಿಂದ ರಾತ್ರಿ 9:00 ರವರೆಗೆ.

GSC / ತಿದ್ದುಪಡಿ ಅರ್ಜಿ ಸಲ್ಲಿಕೆ: ಮೇ 8, 2026 ರಿಂದ ಮಾರ್ಚ್ 31, 2027 ರವರೆಗೆ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಲಭ್ಯ.

GSC / ತಿದ್ದುಪಡಿ FI ಅನುಮೋದನೆ: ಬೆಳಿಗ್ಗೆ 10:00 ರಿಂದ ರಾತ್ರಿ 9:00 ರವರೆಗೆ.

ಗಮನಿಸಿ:
ಎಲ್ಲಾ ಮೂರು ಸರ್ವರ್‌ಗಳಲ್ಲಿ ಈ ಮಾಡ್ಯೂಲ್‌ಗಳನ್ನು ಸಕ್ರಿಯಗೊಳಿಸಲಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ರೇಷನ್ ಕಾರ್ಡ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಇಲಾಖೆ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಕೆಗಾಗಿ ಸಮೀಪದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳನ್ನು ಭೇಟಿ ಮಾಡಬಹುದು.

Comments are closed.

Don`t copy text!