ಇತ್ತೀಚಿಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜೊತೆ ಜೊತೆಗೆ 56 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಇದೀಗ ಕಲಬುರ್ಗಿಯಲ್ಲಿ ಅದೇ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿದ ಭೂಪನೊಬ್ಬ ಹತ್ತಾರು ಯುವಕ, ಯುವತಿಯರಿಂದ ಲಕ್ಷ ಲಕ್ಷ ರೂ ಹಣ ಪಡೆದು ಮೋಸ ಮಾಡಿದ್ದಾನೆ. ನರ್ಸಿಂಗ್ ಕೆಲಸ ಕೊಡಿಸುತ್ತನೆಂದು ಮೋಸ ಮಾಡಿದ್ದಲ್ಲದೆ ಹಣವು ಕೊಡದೇ ಸತಾಯಿಸುತ್ತಿದ್ದಾನೆ.
ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ ವ್ಯಕ್ತಿ ಪ್ರದೀಪ್ ಎಂಬಾತ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ರಾಜ್ಯದ ಅತೀ ದೊಡ್ಡ ಮೆಡಿಕಲ್ ಕಾಲೇಜು ಕಂ ಆಸ್ಪತ್ರೆಯಾಗಿರುವ ಇಎಸ್ಐ ಆಸ್ಪತ್ರೆಯಲ್ಲಿ ನಸ್೯ ಕೆಲಸ ಕೊಡಿಸುತ್ತೆನೆಂದು ಹತ್ತಾರು ಯುವಕರನ್ನ ನಂಬಿಸಿ ಹಣ ವಸೂಲಿ ಮಾಡಿಸಿದ್ದ. ಅಷ್ಟೇ ಅಲ್ಲದೆ ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದಾಗಿ ಹೇಳಿ ನಂಬಿಸಿದ್ದ. ಹೀಗಾಗಿ ಆತನ ನಂಬಿದ್ದ ಜನ ತಮಗೂ ಕೆಲಸ ಸಿಗುತ್ತೆ, ತಮ್ಮ ಭವಿಷ್ಯಕ್ಕೂ ಒಳ್ಳೆಯದಾಗುತ್ತೆ ಅಂತ ನಂಬಿಕೊಂಡಿದ್ದರು. ಅಲ್ಲದೇ ಆತ ಕೇಳಿದಷ್ಟು ಹಣವನ್ನ ಕೊಟ್ಟಿದ್ದರು.
ಒಂದೊಂದು ಹುದ್ದೆಗೆ ಒಬ್ಬೊರಿಂದ 2 ಲಕ್ಷದಿಂದ 4 ಲಕ್ಷ ರೂಪಾಯಿವರಿಗೂ ವಸೂಲಿ ಮಾಡಿದ್ದ. ಸುಮಾರು 10ಕ್ಕೂ ಜನರ ಬಳಿ ಹಣ ವಸೂಲಿ ಮಾಡಿ ವರ್ಷವೇ ಕಳೆದರು ಕೂಡ ಕೆಲಸವು ಇಲ್ಲ, ಹಣವು ವಾಪಸ್ ನೀಡದೇ ಸತಾಯಿಸುತ್ತಿದ್ದಾನಂತೆ. ಕೇಳಿದರೆ ಇನ್ನು ಸ್ವಲ್ಪ ದಿನ ಕಾಯುವಂತೆ ಹೇಳುತ್ತಿದ್ದಾನಂತೆ. ಇದರಿಂದ ಆಕ್ರೋಶಗೊಂಡ ಜನರು ಆತನನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಾಗ ಪರಾರಿಯಾಗಿದ್ದಾನೆ
ಸದ್ಯ ಇದೇ ವಿಚಾರಕ್ಕಾಗಿ ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಇನ್ನು ಈ ನೌಟಂಕಿ ಪ್ರದೀಪ್ ಒಟ್ಟಿಗೆ ಇಎಸ್ಐ ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಪ್ರತಿನಿತ್ಯ ಈತ ಕೆಲವರಿಗೆ ಆಮಿಷವೊಡ್ಡಿ ಇಎಸ್ಐ ಆಸ್ಪತ್ರೆಯ ಮುಂಭಾಗ ಪರೀಕ್ಷೆ ಬರೆಯಿಸಿ, ಹಣಕಾಸಿನ ವ್ಯವಹಾರ ಕೂಡ ಮಾಡಿದ್ದನಂತೆ.
Comments are closed.