Shubhashaya News

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ : ನಕಲಿ ಸಹಿ ಮಾಡಿ ಸರ್ಕಾರದಿಂದ 10 ಕೋಟಿ ಅನುದಾನ ಪಡೆದ ಆರೋಪ!

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ ನಡೆದಿದೆ. ಧರ್ಮದರ್ಶಿ ಹಾಗೂ ಪಿಡಿಒ ಸಹಿ ಫೋರ್ಜರಿ ಮಾಡಲಾಗಿದ್ದು ನಕಲಿ ಸಹಿ ಮಾಡಲಾಗಿದೆ ಎನ್ನುವಂತಹ ದಾಖಲೆಗಳು ವೈರಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಒಂದು ದಾಖಲೆಗಳು ವೈರಲ್ ಆಗಿದ್ದು, ನಕಲಿ ದಾಖಲೆ ಸೃಷ್ಟಿಸಿ 10 ಕೋಟಿ ಅನುದಾನವನ್ನು ಸರ್ಕಾರದಿಂದ ಪಡೆದಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.

ವಸತಿ ಗೃಹ, ವಿದ್ಯಾರ್ಥಿ ನಿಲಯ, ಸಮುದಾಯ ಭವನಕ್ಕೆ ಅಂತ ಹೇಳಿ ಅನುದಾನ ಪಡೆದಿದ್ದಾರೆ. ಆದರೆ ಈ ಮೂರು ಕಟ್ಟಡಗಳೇ ಇಲ್ಲ ಎನ್ನುವುದು ಕೂಡ ಬೆಳಕಿಗೆ ಬಂದಿದೆ. ಸರ್ಕಾರದಿಂದ 10 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡಿದ್ದು ಆ 10 ಕೋಟಿ ಬಗ್ಗೆ ಲೆಕ್ಕ ಕೊಡಿ ಅಂತ ಭಕ್ತರು ಆಗ್ರಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಕೊಡಿ ಅಭಿಯಾನ ಹಿನ್ನೆಲೆ ಟ್ರಸ್ಟ್ ಲೆಕ್ಕ ಕೊಡಲಿದೆ 2008 ರಿಂದ 2026ರ ವರೆಗಿನ ಲೆಕ್ಕ ನೀಡಲಿದೆ. ಮಠದ ಆವರಣದಲ್ಲಿ ಎರಡು ಗುಂಪುಗಳ ಮುಖಾಮುಖಿಯಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಹಾಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.