ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದ ತಳಹದಿಯಾಗಿರುವ ಗ್ರಾಮ ಪಂಚಾಯತಿಗಳ ಚುನಾವಣೆಗೆ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯದ 31 ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಬಾರಿ ಒಟ್ಟು ಸದಸ್ಯರ ಸಂಖ್ಯೆ 94 ಸಾವಿರಕ್ಕೆ ಏರಿಕೆಯಾಗಲಿದೆ.
2020ರ ಚುನಾವಣೆಯಲ್ಲಿ ರಾಜ್ಯದ 5,728 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 91,339 ಸದಸ್ಯ ಸ್ಥಾನಗಳಿದ್ದವು. ಈ ಬಾರಿ 5,700ಕ್ಕೂ ಹೆಚ್ಚು ಪಂಚಾಯತಿಗಳಿಗೆ ಒಟ್ಟು 94,081 ಸದಸ್ಯ ಸ್ಥಾನಗಳನ್ನು ಪ್ರಸ್ತಾವಿಸಲಾಗಿದೆ.
ಹೆಚ್ಚು ಸ್ಥಾನ ಹೊಂದಿರುವ ಜಿಲ್ಲೆಗಳು: ಬೆಳಗಾವಿ ಜಿಲ್ಲೆಯು ಅತಿ ಹೆಚ್ಚು ಅಂದರೆ 8,413 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದೆ. ತುಮಕೂರು (5,228) ಮತ್ತು ಕಲಬುರಗಿ (4,429) ನಂತರದ ಸ್ಥಾನಗಳಲ್ಲಿವೆ.
ಕಡಿಮೆ ಸ್ಥಾನಗಳು: ಕೊಡಗು ಜಿಲ್ಲೆಯಲ್ಲಿ 102 ಪಂಚಾಯತಿಗಳಿಂದ 1,200 ಸದಸ್ಯರಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಕೇವಲ 85 ಗ್ರಾಮ ಪಂಚಾಯತಿಗಳಿದ್ದು 2,047 ಸದಸ್ಯರಿದ್ದಾರೆ.
Comments are closed.