Shubhashaya News

ಮಾರ್ಚ್ 1 ರಂದು ತಡಕಲನಲ್ಲಿ ಗುರುವಂದನಾ

ಆಳಂದ ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಶಿವಲಿಂಗೇಶ್ವರ ಪ್ರೌಢ ಶಾಲೆಯ 1999-2000ನೇ ಸಾಲಿನ ಇಸ್ವಿಯ ವಿದ್ಯಾರ್ಥಿಗಳಿಂದ ಮಾರ್ಚ್ 1ರ ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸಂತೋಷ ಸಿರಸೆ, ಮಲ್ಲಿನಾಥ ವಾಲಿ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಸಂಸ್ಥಾನ ಹಿರೇಮಠದ ಸಿದ್ಧಮಲ್ಲ ಶಿವಾಚಾರ್ಯರು ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ನೇರವೇರಿಸಲಿದ್ದಾರೆ. ಅತಿಥಿಗಳಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ, ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಹುಂಡೇಕಾರ, ಕಾರ್ಯದರ್ಶಿ ಶ್ರೀಮಂತ ನಾಮಣೆ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಎಸ್ ಎಂ ಧುಲಂಗೆ, ಎಂ ಎಸ್ ಬೆಳ್ಳೆ, ಎಸ್ ಬಿ ಪಾಟೀಲ, ಪಿ ಪಿ ಶಿವಶೆಟ್ಟಿ, ಎ ಎಸ್ ಗುಂಡೆ, ಜಿ ಬಿ ಪಾಟೀಲ, ಸಿ ಜಿ ಕಲಶೆಟ್ಟಿ, ಬಿ ಪಿ ಜಾಧವ, ರತನಚಂದ ಪಾಟೀಲ ಮತ್ತು ಚಂದ್ರಕಾಂತ ಅಟ್ಟೂರ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರು ಚಂದ್ರಕಾಂತ ಕಲಶೆಟ್ಟಿ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.