ಪರಿಹಾರ ನೀಡಿ ಅಗಲೀಕರಣ ಮಾಡಲಿ- ಗುತ್ತೇದಾರ ಆಗ್ರಹ
ಆಳಂದ: ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಕೈಗೊಳ್ಳುತ್ತಿರುವ ರಸ್ತೆ ಅಗಲೀಕರಣ ಕಾರ್ಯವು ಉತ್ತಮವಾಗಿದೆ ಆದರೆ ಈ ಹಿಂದೆ ಶಾಸಕ ಬಿ ಆರ್ ಪಾಟೀಲ ಹೇಳಿದಂತೆ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಅಗಲೀಕರಣ ಮಾಡಲಿ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಸೌಂದರ್ಯಿಕರಣ ಕಾರ್ಯಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಚಿದ 11 ಕೋ. ಅನುದಾನ ಮಂಜೂರಿ ಮಾಡಿಸಿಟ್ಟಿದ್ದೇನೆ ಅದರ ಸಂಪೂರ್ಣ ಸದ್ಬಳಕೆಯಾಗಲಿ. ದಿನಬೆಳೆದಂತೆಲ್ಲ ಪಟ್ಟಣವೂ ಬೆಳವಣಿಗೆಯಾಗಿದೆ. ಜನಸಂಖ್ಯೆಯೂ ಹೆಚ್ಚಾಗಿದೆ ಆದರೆ ಆಸ್ತಿ ಕಳೆದುಕೊಂಡವರಲ್ಲಿ ಬಹಳ ಜನ ಬಡವರು ಮತ್ತು ಮಧ್ಯಮ ವರ್ಗದವರಾಗಿದ್ದಾರೆ ಹೀಗಾಗಿ ಮೊದಲು ಅವರಿಗೆ ಪರಿಹಾರ ಕಲ್ಪಿಸಿ ರಸ್ತೆ ಅಗಲೀಕರಣ ಕಾರ್ಯ ಮುಂದುವರೆಸಲಿ ಎಚಿದು ಒತ್ತಾಯಿಸಿದ್ದಾರೆ.
ಈ ಹಿಂದೆ ನಾನು ಶಾಸಕನಾಗಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಗಲೀಕರಣ ಕಾರ್ಯಕ್ಕೆ ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿ ಪರಿಹಾರ ನೀಡಿ ಅಗಲೀಕರಣ ಮಾಡಲು ಹೇಳಿದ್ದರು. ಈಗ ಅವರೇ ಶಾಸಕರಾಗಿದ್ದಾರೆ ರಾಜ್ಯದಲ್ಲಿ ಅವರದೇ ಸರ್ಕಾರವಿದೆ ಅಲ್ಲದೇ ತಾವೇ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ ಸರ್ಕಾರದಿಂದ ಪರಿಹಾರ ದೊರಕಿಸಿ ಅಗಲೀಕರಣ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.
ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲು ಆರ್ ಕೆ ಪಾಟೀಲ ಅವರಿಗೆ ಯಾವ ಸಂವಿಧಾನಾತ್ಮಕ ಅಧಿಕಾರವಿದೆ. ತಾಲೂಕಿನಲ್ಲಿ ಅಧಿಕಾರಿಗಳು ಶಿಷ್ಠಾಚಾರ ಉಲ್ಲಂಘಿಸುತ್ತಿದ್ದಾರೆ. ಶಾಸಕ ಬಿ ಆರ್ ಪಾಟೀಲ ಆಳಂದ ಮರೆತು ಬಿಟ್ಟಿದ್ದಾರೆ. ಕೇವಲ ಬೆಂಗಳೂರು ದೆಹಲಿಗಳಲ್ಲಿ ಕುಳಿತು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಆಳಂದ ಪಟ್ಟಣದ ಸುಲ್ತಾನಪೂರ ಗಲ್ಲಿಗೆ ಹೋಗುವ ಮುಖ್ಯ ರಸ್ತೆಯ ಪೈಪ್ ಒಡೆದು ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿದೆ ಇದರ ಕುರಿತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಇದೇ ರೀತಿ ಮುಖ್ಯಾಧಿಕಾರಿಗಳ ಧೋರಣೆ ಮುಂದುವರೆದರೆ ಸಾರ್ವಜನಿಕರೊಂದಿಗೆ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Comments are closed.