ಆಳಂದ: ರೈತ ದಿನಾಚರಣೆಯಲ್ಲಿ ಸಾಧಕ ರೈತರಿಗೆ ಸನ್ಮಾನಿಸಲಾಯಿತು. ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಸಹಾಯಕ ನಿರ್ದೇಶಕ ಬನಸಿದ್ಧ ಬಿರಾದಾರ, ಸಂಜಯ ಸವದಿ ಇತರರು ಇದ್ದರು.
ಆಳಂದ: ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ ಸಾಲದು, ದುಬಾರಿ ವೆಚ್ಚದ ಕೃಷಿ ಮುನ್ನೆಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂಗಾರು ಮತ್ತು ಹಿಂಗಾರಿನಲ್ಲಿ ಆರ್ಥಿಕ ನೆರವು ನೀಡುವುದು ಅಗತ್ಯವಾಗಿದೆ ಎಂದು ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ತಾಲೂಕ ಆಡಳಿತ ಸೌಧದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕ ಕೃಷಿಕ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡ ರೈತ ದಿನಾಚರಣೆಯಲ್ಲಿ ಸಾಧಕ ರೈತರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಭಾರತದ ಮೊದಲ ಕೃಷಿ ವಿಜ್ಞಾನಿ ಎಂದೇ ಪರಿಚಿತರಾದ ಎಂ.ಎಸ್. ಸ್ವಾಮಿನಾಥನ್ ಅವರ ಜನ್ಮದಿನವನ್ನು ಸ್ಮರಿಸುವ ಈ ರೈತ ದಿನಾಚರಣೆ ಜಾರಿಗೆ ಬಂದಿದೆ. ಕೃಷಿ ಉತ್ಪನ್ನಗಳ ಬೆಲೆಯಲ್ಲಿ ನಿರಂತರ ಅಸ್ಥಿರತೆಯಿಂದ ರೈತರು ಆರ್ಥಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವುದರ ಜೊತೆಗೆ, ಉತ್ಪನ್ನಗಳಿಗೆ ನೇರ ಆರ್ಥಿಕ ನೆರವು, ಇದ್ದಲೆ ಸಬ್ಸಿಡಿ ಮತ್ತು ರಫ್ತು ಪೆÇ್ರೀತ್ಸಾಹಗಳನ್ನು ಹೆಚ್ಚಿಸಬೇಕು. ಇದು ಮಾತ್ರವೇ ರೈತರನ್ನು ಉತ್ತೇಜಿಸಿ, ದೇಶದ ಆಹಾರ ಭದ್ರತೆಯನ್ನು ಖಾತರಿಪಡಿಸುತ್ತದೆ” ರೈತರು ಸಹ ಸಾವಯವ ಕೃಷಿ ಮತ್ತು ಹನಿ ನೀರಾವರಿಯಂತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಹಸಿಲ್ದಾರ್ ಅಣ್ಣಾರಾವ್ ಪಾಟೀಲ್ ಅವರು, “ಸರ್ಕಾರದಿಂದ ನೀಡಲಾಗುವ ಬೀಜ, ಗೊಬ್ಬರ, ಕೀಟನಾಶಕಗಳ ಸಬ್ಸಿಡಿ, ಕೃಷಿ ಸಾಧನಗಳಿಗೆ ಸಾಲ ಸೌಲಭ್ಯ, ಬೆಳೆ ವಿಮೆ ಮತ್ತು ಮಣ್ಣು ಪರೀಕ್ಷೆಯಂತಹ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು ಆರ್ಥಿಕ ನಷ್ಟಗಳನ್ನು ತಡೆಯಬಹುದು.ಅಲ್ಲದೆ, ಡಿಜಿಟಲ್ ಕೃಷಿ ಸೇವೆಗಳು, ಇಂಟರ್ನೆಟ್ ಮೂಲಕ ಬೆಳೆ, ಮಾರುಕಟ್ಟೆ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಆನ್‍ಲೈನ್ ಅರ್ಜಿ ಪ್ರಕ್ರಿಯೆಯ ಬಗ್ಗೆಯೂ ಅವರು ವಿವರಿಸಿದರು.
ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬನಸಿದ್ಧ ಬಿರಾದಾರ ಅವರು, ತಾಲೂಕಿನಲ್ಲಿ ನಡೆಸಲಾದ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ನೂರಾರು ರೈತರಿಗೆ ತರಬೇತಿ ನೀಡಲಾಗಿದ್ದು, ನವೀನ ಬೆಳೆ ವಿಧಾನಗಳು ಮತ್ತು ನೀರು ಸಂರಕ್ಷಣಾ ತಂತ್ರಗಳು ಅಳವಡಿಸಿಕೊಳ್ಳುವಲ್ಲಿ ಗಮನ ಹರಿಸಲಾಗುತ್ತಿದೆ.ಹಂಗಾಮಿನಲ್ಲಿ ರಿಯಾಯಿದರದಲ್ಲಿ ಬೀಜಗಳನ್ನು ಕೃಷಿ ಪರಿಕರಗಳನ್ನು ನೀಡಲಾಗುತ್ತಿದೆ. ಇಲಾಖೆಯ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು ಎಂದರು.
ರೈತ ಸಂಪರ್ಕ ಅಧಿಕಾರಿ ಸರೋಜನಿ ಗೋವಿನ, ರೈತ ಸುಲ್ತಾನಪ್ಪ ವಾಗ್ದರಿ, ರವಿ ಪಾಟೀಲ ಆಳಂಗಾ, ಸಿದ್ಧರಾಮ ಕೋರೆ ನಿರುಗುಡಿ, ಸಿಬ್ಬಂದಿಗಳಾದ ಖಜೂರಿ ಎಟಿಎಂ ಧನರಾಜ ಮೂಲಗೆ, ಲಿಂಗಪ್ಪ ತುಪ್ಪದೊಡ್ಡಿ, ಮೋಹನ ಚವ್ಹಾಣ, ಶರಣಬಸಪ್ಪ ಹಿರೇಗೌಡ, ಸುಶೀಲ ಹಿಪ್ಪರಗಿ, ಪ್ರಕಾಶ ಮುನ್ನೊಳಿ, ಸುನೀಲ ರಾಠೋಡ ಅನೇಕರು ಉಪತಸ್ಥಿತರಿದ್ದರು. ಬಿಟಿಎಂ ತಾಂತ್ರಿಕ ವ್ಯವಸ್ಥಾಪಕ ಸಂಜಯ ಸವದಿ ಸ್ವಾಗತಿಸಿ ನಿರೂಪಿಸಿದರು.
Comments are closed.