Shubhashaya News

ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು, ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ : ‘SIT’ ಮುಂದೆ ಸುಜಾತಾ ಭಟ್ ಸ್ಪೋಟಕ ಹೇಳಿಕೆ

ಅನನ್ಯ ಭಟ್ ನಾಪತ್ತೆ ದೂರು ವಿಚಾರವಾಗಿ ಎರಡು ದಿನಗಳ ಕಾಲ ನಡೆದ ವಿಚಾರದಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೆ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡ ಅನಾವರಣ ಮಾಡಿದ ಸುಜಾತ ಭಟ್ ಹೇಳಿಕೆಯಿಂದ ಬುರುಡೆ ಗ್ಯಾಂಗ್‌ಗೆ ಸಂಕಷ್ಟಕ್ಕೆ ಸಿಲುಕಿದೆ.

ಹೌದು ಮಂಗಳವಾರ ಕರೆಯದಿದ್ದರೂ ಬೆಳ್ಳಂಬೆಳಗ್ಗೆ ಎಸ್‌ಐಟಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್‌ಗೆ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಗ್ರಿಲ್ ಮಾಡಿದರು. ಶಿವಮೊಗ್ಗದ ರಿಪ್ಪನ್ ಪೇಟೆ, ಉಡುಪಿಯ ಪರಿಕದ ಪರಿಸರ, ಕೊಡಗಿನ ವಿರಾಜಪೇಟೆ ಲಿಂಕ್ ಸಂಬಂಧ ವಿಚಾರಣೆ ನಡೆಸಿದ್ದ ಎಸ್‌ಐಟಿ ಬುಧವಾರ ಮತ್ತೆ ಪ್ರಶ್ನೆ ಕೇಳಿತು.ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ನನಗೆ ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನನ್ನ ಹಿರಿಯರ ಆಸ್ತಿ ನನಗೆ ಬೇಕಿತ್ತು. ಈ ಕಾರಣಕ್ಕೆ ಅನನ್ಯಾ ಭಟ್‌ ಪಾತ್ರ ಸೃಷ್ಟಿಯಾಗಿತ್ತು. ಬೇರೆ ನನಗೆ ಏನು ಗೊತ್ತಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ. ಕೊಟ್ಟ ದೂರನ್ನು ವಾಪಸ್‌ ಪಡೆಯುವುದಾಗಿಯೂ ಸುಜಾತ ಗೋಗರೆದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಎಸ್‌ಐಟಿ ವಿಚಾರಣೆಯಲ್ಲಿ ಸುಜಾತಾ ಭಟ್ ತಬ್ಬಿಬ್ಬಾಗಿದ್ದಾರೆ. ಅನನ್ಯಾ ಭಟ್ ಸೃಷ್ಟಿ ಬಗ್ಗೆ ಪ್ರಶ್ನಿಸಿ ಎಲ್ಲ ಸತ್ಯವನ್ನೂ ಆಕೆಯ ಬಾಯಿಂದಲೇ ಕಕ್ಕಿಸಿದ್ದಾರೆ.

Leave A Reply

Your email address will not be published.