ಆಳಂದ: ಪಟ್ಟಣದ ಸುಲ್ತಾನಪುರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.
ಆಳಂದ: ಪಟ್ಟಣದ ಸುಲ್ತಾನಪೂರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದ ಮಧ್ಯ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಬೆಳಗಿನ ಜಾವ ಲಿಂಗಕ್ಕೆ ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದ ಭಕ್ತಾದಿಗಳು ಬಳಿಕ ದೇವಸ್ಥಾನದಿಂದ ಸುಲ್ತಾನಪೂgಗಲ್ಲಿಯಿಂದ ಸಾಲಾಗಿ ಆಟೋಗಳಿಗೆ ದೇವರ ಪೋಟೋಗಳೊಂದಿಗೆಗೆ ಸಾಗಿದ ಪಲ್ಲಕ್ಕಿ, ಹನುಮಾನ ಮಂದಿರ ಮಾರ್ಗದಿಂದ ಹಳೆಯ ಪೊಲೀಸ್ ಠಾಣೆಯ ಮುಖ್ಯ ರಸ್ತೆಯ ಮಾರ್ಗವಾಗಿ ಸಾಗಿದ ಪಲ್ಲಕ್ಕಿ ಉತ್ಸವದಲ್ಲಿ ಪುರವಂತರು, ಲಂಬಾಣಿ ಮಹಿಳೆಯರು ಸಾಂಸ್ಕøತಿಕ ನೃತ್ಯ, ಡೊಳ್ಳು, ಕೋತನಹಿಪ್ಪರಗಾ ಹನುಮಾನ ಹರಿಭಜನೆ, ವಾದ್ಯ ವೈಭವಗಳೊಂದಿಗೆ ಛತ್ರಿ ಚಾಮರದೊಂದಿಗೆ ಮಹಿಳೆಯರು ಕುಂಬ, ಕಳಸ ಜೈಘೋಷದೊಂದಿಗೆ ದೇವಸ್ಥಾನದವರೆಗೆ ಆಕರ್ಷಿಕ ಮೆರವಣಿಗೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತಾರ್ಪಣೆ ನಡೆಯಿತು.