Shubhashaya News

ರಾಜ್ಯದಲ್ಲಿ ಗಣೇಶೋತ್ಸವದ ವೇಳೆ `ಡಿಜೆ’ ಬಳಕೆ ನಿಷೇಧ ಇಲ್ಲ : ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

ರಾಜ್ಯದಲ್ಲಿ ಗಣೇಶೋತ್ಸವದಲ್ಲಿ ಡಿಜೆ ಬಳಕೆ ನಿಷೇಧ ಮಾಡಿಲ್ಲ. ನಿಯಮಗಳ ಪ್ರಕಾರ ಬಳಕೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ವೇಳೆ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುವುದು. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ. ಆದರೆ ಡಿಜೆ ನಿಷೇಧ ಮಾಡಿಲ್ಲ ಎಂದರು.

ಡಿಜೆ ನಿಷೇಧ ಎನ್ನುವ ಬಿಜೆಪಿಯ ಮಾತು ಕೇಳಬೇಡಿ. ಡಿಜೆ ಬಳಕೆಗೆ ಕೋರ್ಟ್ ಮಾರ್ಗಸೂಚಿಯ ಪ್ರಕಾರ ಇಂತಿಷ್ಟು ಡೆಸಿಬಲ್ ಇರಬೇಕು ಎನ್ನುವ ನಿಯಮವಿದೆ. ಆ ಪ್ರಕಾರ ನೋಡಿಕೊಳ್ಳಬೇಕು. ಯುವಕರಿಗೆ 18ನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು ನಮ್ಮ ಕಾಂಗ್ರೆಸ್. ಹೀಗಿರುವಾಗ ನಾವು ಯುವಕರಿಗೆ ಹೇಗೆ ಡಿಜೆ ಬಳಕೆಗೆ ನಿಷೇಧ ಹೇರಲು ಸಾಧ್ಯವೇ ಎಂದು ಹೇಳಿದ್ದಾರೆ.

Leave A Reply

Your email address will not be published.