Shubhashaya News

ರಾಜ್ಯದಲ್ಲಿ ಮತ್ತೊಂದು `ಹೀನ ಕೃತ್ಯ’ : ಬುದ್ಧಿಮಾಂದ್ಯ ಯುವತಿ ಮೇಲೆ `ಗ್ಯಾಂಗ್ ರೇಪ್’.!

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಹಾಸನದಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.

ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ದುರುಳರು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಸಂತ್ರಸ್ತೆಯ ಸಹೋದರನಿಗೆ ಕಳುಹಿಸಿದ್ದಾರೆ. ಘಟನೆಯ ಸಂಬಂಧ ಸಂತ್ರಸ್ತೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೋ ಕಳುಹಿಸಿದ ನಂತರ ದುರುಳರು ಡಿಲೀಟ್ ಮಾಡಿದ್ದಾರೆ. ಅಬ್ದುಲ್ ಅಫ್ತಾಬ್, ರಜಾಕ್ ಪಾಷಾ, ಉಮ್ರಾನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ನಡೆದ ಸ್ಥಳ ಮತ್ತು ಯಾವಾಗ ನಡೆದಿದೆ ಎನ್ನುವುದರ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.

Don`t copy text!