Shubhashaya News

ರಾಜ್ಯದಲ್ಲಿ ನಿಲ್ಲದ ವಸೂಲಿ ದಂಧೆ : ಕಲಬುರ್ಗಿಯಲ್ಲಿ MRP ದರಕ್ಕಿಂತಲೂ ದುಪ್ಪಟ್ಟು ಹಣಕ್ಕೆ ಗೊಬ್ಬರ ಮಾರಾಟ!

 ಕಳೆದ ಕೆಲವು ದಿನಗಳ ಹಿಂದೆ ಕೊಪ್ಪಳದಲ್ಲಿ ಗೊಬ್ಬರ ಸಿಗದೇ ರೈತನೊಬ್ಬ ಮಣ್ಣು ತಿಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಈ ಘಟನೆ ಬಳಿಕ ರೈತನ ಮನೆಗೆ ಬಿಜೆಪಿ ನಡಿತು ಆದರೂ ಸಹ ರಾಜ್ಯದಲ್ಲಿ ಗೊಬ್ಬರ ಮಾರಾಟದಲ್ಲಿ ವಸೂಲಿ ದಂಧೆ ಮುಂದುವರೆದಿದ್ದು, ಇದೀಗ ಎಂಆರ್‌ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಡಿಎಪಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ.

ಕಲ್ಬುರ್ಗಿಯಲ್ಲಿ ಕೃತಕ ಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ದರ ಕಡಿಮೆ ಮಾಡಿ ಅಂದರೆ ಮಾಲೀಕ ಡಿಎಪಿ ಗೊಬ್ಬರ ಸ್ಟಾಕ್ ಇಲ್ಲ ಅಂತ ಹೇಳುತ್ತಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ದುಪ್ಪಟ್ಟು ಬೆಲೆಗೆ ಡಿಎಪಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರಿಂದ ಹೆಚ್ಚಿನ ಹಣವನ್ನು ಗೊಬ್ಬರ ಕೇಂದ್ರಗಳು ವಸೂಲಿ ಮಾಡುತ್ತಿವೆ. 1,250 ಮೂಲದ ಡಿಎಪಿ ಗೊಬ್ಬರವನ್ನು 1500 ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟರು ಸಹ ವಸೂಲಿತಿದ್ದೆ ನಿಲ್ಲುತ್ತಿಲ್ಲ ರೈತರ ಬಳಿ ಸುಲಿಗೆ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾಲೀಕರು ಎಂ ಆರ್ ಪಿ ದರಕ್ಕೆ ಕೇಳಿದರೆ ನೋ ಸ್ಟಾಕ್ ಅಂತ ಹೇಳುತ್ತಿದ್ದಾರೆ ದುಪ್ಪಟ್ಟು ದರ ಕೊಟ್ಟರೆ ನಿಮಗೆ ಬೇಕಾದಷ್ಟು ಕೊಡುತ್ತೇವೆ ಅಂತಿದ್ದಾರೆ. ರಾಜರೋಶವಾಗಿ ವಸೂಲಿ ಮಾಡುತ್ತಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಜೇವರ್ಗಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಇದೀಗ ಆಕ್ರೋಶ ಹೊರಹಾಕಿದ್ದಾರೆ.

Comments are closed.

Don`t copy text!