Shubhashaya News

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ : ಇಂದಿನ ತೀರ್ಪು ಆ.1ಕ್ಕೆ ಮುಂದೂಡಿದ ಕೋರ್ಟ್

ಹೊಳೆನರಸೀಪುರದ ಫಾರ್ಮ್ ಹೌಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಪ್ರಕರಣದ ಕುರಿತು ಕೆಲವು ಸ್ಪಷ್ಟೀಕರಣ ಇಲ್ಲದ ಹಿನ್ನೆಲೆಯಲ್ಲಿ ಜಡ್ಜ್ ಸಂತೋಷ ಗಜಾನನ ಭಟ್ ಇಂದು ತೀರ್ಪು ಪ್ರಕಟಿಸಲ್ಲ ಎಂದು ತಿಳಿಸಿ ಆ.1ಕ್ಕೆ ತೀರ್ಪು ಮುಂದೂಡಿದರು.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಕೋರ್ಟ್ ಎರಡು ಕಡೆಯ ವಕೀಲದಿಂದ ಕೆಲವು ಸ್ಪಷ್ಟೀಕರಣ ಕೇಳಿತು. ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ? ಸ್ಯಾಮ್ಸಂಗ್ ಜೆ ಫೋರ್ ಮೊಬೈಲ್ ಸೀಜ್ ಮಾಡಿರುವ ಬಗ್ಗೆ ಕೋರ್ಟ್ ವಕೀಲರಿಗೆ ವಿವರಣೆ ಕೇಳಿತು. ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಕೆಲಕಾಲ ಮುಂದೂಡಿತು.ಇದೆ ವೇಳೆ ಕೋರ್ಟ್ ಮುಂದೆ ಪ್ರಜ್ವಲ್ ರೇವಣ್ಣ ಹಾಜರಾಗಿದ್ದರು. ಪದೇ ಪದೇ ಕಣ್ಣು ಮುಚ್ಚಿ ಪ್ರಜ್ವಲ್ ರೇವಣ್ಣ ಮಂತ್ರ ಪಠಿಸುತ್ತಿದ್ದರು.

ಹೊಳೆನರಸೀಪುರದ ಫಾರ್ಮ ಹೌಸ್ ಸ್ಥಳ ತೋರಿಸಲು ಗೂಗಲ್ ಮ್ಯಾಪ್ ಆಧರಿಸಿ ಎರಡು ಕಡೆ ವಕೀಲರು ವಾದಿಸಿದ್ದರು. ಗೂಗಲ್ ಸಂಸ್ಥೆಯಿಂದ ಅಧಿಕೃತ ಮಾಹಿತಿ ಇಲ್ಲದ ದಾಖಲೆ ಪರಿಗಣಿಸಬಹುದೇ ಎಂದು ಜಡ್ಜ್ ಸಂತೋಷ ಗಜಾನನ ಭಟ್ ಈ ಬಗ್ಗೆ ಪ್ರಶ್ನಿಸಿದರು.ಈ ವೇಳೆ ಎರಡು ಕಡೆಯ ವಕೀಲರು ಯಾವುದೇ ಹಿನ್ನೆಲೆ ಜಡ್ಜ್ ಇಂದು ತೀರ್ಪು ಪ್ರಕಟಿಸಲ್ಲ ಎಂದು ತಿಳಿಸಿದರು.

Comments are closed.

Don`t copy text!