Shubhashaya News

ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಸಂಶೋಧನೆಯಲ್ಲಿ ಹೊಸತನವನ್ನು ಸಕ್ರಿಯಗೊಳಿಸುತ್ತದೆ”: ಪೆÇ್ರ. ಆರ್ ಆರ್ ಬಿರಾದಾರ್

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ “ಸಮಾಜ ವಿಜ್ಞಾನದಲ್ಲಿ ಯುವ ಅಧ್ಯಾಪಕ ಸದಸ್ಯರಿಗೆ ಸಂಶೋಧನಾ ವಿಧಾನ ಮತ್ತು ಗುಣಮಟ್ಟದ ಪ್ರಕಟಣೆ” ಕುರಿತ ಸಾಮಥ್ರ್ಯವರ್ಧನಾ ಕಾರ್ಯಕ್ರಮ (ಅಃP) ಕುಲಸಚಿವ ಪ್ರೊ ಆರ್.ಆರ್. ಬಿರಾದಾರ ಅವರು ಉದ್ಘಾಟಿಸಿ ಮಾತನಾಡಿದರು.

 

 

ಆಳಂದ: “ಒಂದು ರಾಷ್ಟ್ರ, ಒಂದು ಚಂದಾದಾರಿಕೆ” ನೀತಿ ನಮ್ಮ ದೇಶದ ಸಂಶೋಧಕರಿಗೆ ಹೊಸ ದಾರಿಗಳನ್ನು ತೆರೆಯುತ್ತಿದೆ. ಇದರ ಮೂಲಕ 30,000ಕ್ಕೂ ಹೆಚ್ಚು ಪ್ರಕಾಶಕರ ಕಾರ್ಯಗಳಿಗೆ ಮತ್ತು ಸುಮಾರು 130,000 ಉನ್ನತ ಮಟ್ಟದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಜರ್ನಲ್‍ಗಳಿಗೆ ಉಚಿತ ಪ್ರವೇಶ ಸಿಕ್ಕಿದೆ. ಇದು ಯುವ ಅಧ್ಯಾಪಕರಲ್ಲಿ ಗುಣಮಟ್ಟದ ಸಂಶೋಧನೆಗೆ ಪ್ರೇರಣೆ ನೀಡುವ ಮಹತ್ವದ ಹೆಜ್ಜೆ” ಎಂದು ಸಿಯುಕೆ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಹೇಳಿದರು.

ತಾಲೂಕಿನ ಕಡಗಂಚಿಯ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ನಡೆದ “ಸಮಾಜ ವಿಜ್ಞಾನದಲ್ಲಿ ಯುವ ಅಧ್ಯಾಪಕ ಸದಸ್ಯರಿಗೆ ಸಂಶೋಧನಾ ವಿಧಾನ ಮತ್ತು ಗುಣಮಟ್ಟದ ಪ್ರಕಟಣೆ” ಕುರಿತ ಸಾಮಥ್ರ್ಯವರ್ಧನಾ ಕಾರ್ಯಕ್ರಮ (ಅಃP) ಉದ್ಘಾಟಿಸಿ ಅವರು ಮಾತನಾಡಿದರು.

ಅವರು ಮುಂದಾಗಿ ಹೇಳಿದರು: “ವೈಜ್ಞಾನಿಕ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತ ಈಗಾಗಲೇ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಉಲ್ಲೇಖಗಳ ಸಂಖ್ಯೆಯಲ್ಲಿ ಮಾತ್ರ ಒಂಬತ್ತನೇ ಸ್ಥಾನದಲ್ಲಿದೆ. ಇದರಿಂದ ಸ್ಪಷ್ಟವಾಗುವಂತೆ, ನಾವು ಕೇವಲ ಸಂಶೋಧನೆ ಮಾಡುವμÉ್ಟೀ ಅಲ್ಲದೆ ಅದರ ಗುಣಮಟ್ಟದತ್ತ ಹೆಚ್ಚು ಗಮನ ಹರಿಸಬೇಕು. ನಮ್ಮ ಪ್ರಕಟಣೆಗಳು ನೈತಿಕ, ನವೀನ ಮತ್ತು ಸಮಾಜಕ್ಕೆ ಸಂಬಂಧ ಹೊಂದಿದ್ದಾಗ ಮಾತ್ರ ಅದಕ್ಕೆ ಜಾಗತಿಕ ಒಪ್ಪಿಗೆಯೂ ದೊರೆಯುತ್ತದೆ. ಎಂದರು.

ಯುವ ಅಧ್ಯಾಪಕರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಂಶೋಧನಾ ವಿಷಯಗಳನ್ನು ಆಯ್ಕೆ ಮಾಡಬೇಕು ಮತ್ತು ತಮ್ಮ ಕಾರ್ಯದಲ್ಲಿ ನೈತಿಕತೆ ಮತ್ತು ಪ್ರಸ್ತುತತೆಯನ್ನು ಕಾಪಾಡಬೇಕು ಎಂದು ಅವರು ಸಲಹೆ ನೀಡಿದರು.

ಭಾರತ ಇಂದು ಪ್ರಕಟಣೆಗಳ ಸಂಖ್ಯೆಯಲ್ಲಿ ವಿಶ್ವದ ನಾಲ್ಕನೇ ಸ್ಥಾನದಲ್ಲಿ ಇದೆ. ಆದರೆ ಗಮನಾರ್ಹ ಅಂಶವೆಂದರೆ ಉಲ್ಲೇಖಗಳ ಸಂಖ್ಯೆಯಲ್ಲಿ ಮಾತ್ರ ಒಂಬತ್ತನೇ ಸ್ಥಾನದಲ್ಲಿದೆ. ಇದರಿಂದ ಒಂದು ಸಂದೇಶ ಸ್ಪಷ್ಟವಾಗಿದೆ — ನಾವು ಮಾಡುವ ಶೋಧ ಕಾರ್ಯಗಳಿಗೆ ಗಂಭೀರವಾದ ಪರಿಣಾಮವು ಸಮಾಜದ ಮೇಲೆ ಬರುವಂತಾಗಬೇಕು. ಶೋಧಗಳು ಕೇವಲ ತಾಂತ್ರಿಕ ಪರಿಕಲ್ಪನೆಗಳಲ್ಲದೆ ನೈತಿಕತೆಯಿಂದ ಕೂಡಿರುವಂತೆ, ಸಮಾಜಕ್ಕೆ ಸಹಾಯವಾಗುವಂತೆ ಹಾಗೂ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹವಾಗಿರಬೇಕು. ಇಲ್ಲದೆ ಇದ್ದರೆ ಶೋಧ ಕೇವಲ ಅಂಕಿ-ಅಂಶಗಳ ಮೆಟ್ಟಿಲುಗಳಲ್ಲಿ ಸೆರೆಯಾಗಿಬಿಡುತ್ತದೆ” ಎಂದು ಹೇಳಿದರು.

ಈ ಸಂದರ್ಭಧಲ್ಲಿ ಶಿಕ್ಷಣ ಮತ್ತು ತರಬೇತಿ ಶಾಲೆಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ನಿರ್ದೇಶಕರಾದ ಐಸಿಎಸ್‍ಎಸ್‍ಆರ್-ಸಿಬಿಪಿಯ ಪೆÇ್ರ. ಈ. ಆರ್. ಅಂಗಡಿ ಅವರುಮಾತನಾಡಿ, “ಸಂಶೋಧನೆಯ ಗುಣಮಟ್ಟವು ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಕಾರ್ಯಕ್ರಮವು ಸಂಶೋಧನೆ ಮತ್ತು ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಸಂಪರ್ಕಿಸುತ್ತದೆ” ಎಂದು ಹೇಳಿದರು.

ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ (ಸಿಎಂಡಿಆರ್), ನಿರ್ದೇಶಕ ಪೆÇ್ರ. ಬಸವಪ್ರಭು ಜಿರ್ಲಿ, “ರಾಷ್ಟ್ರ ನಿರ್ಮಾಣದಲ್ಲಿ ಸಂಶೋಧನೆ ಮತ್ತು ಯುವ ಅಧ್ಯಾಪಕರು ಜ್ಞಾನಕ್ಕೆ ಕೊಡುಗೆ ನೀಡುವಂತೆ ಪೆÇ್ರೀತ್ಸಾಹಿಸುವುದು ಇಂದಿನ ಅಗತ್ಯವಾಗಿದೆ ಮತ್ತು ಇದು ಕಠಿಣ ಸಂಶೋಧನಾ ಅಭ್ಯಾಸಗಳನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.

ಈ ಕಾರ್ಯಕ್ರಮವು ಜುಲೈ 7 ರಿಂದ ಜುಲೈ 18, 2025 ರವರೆಗೆ ನಿಗದಿಯಾಗಿದ್ದು, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಸಾಮಥ್ರ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ವಿವಿಧ ರಾಜ್ಯಗಳ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಭಾಗವಹಿಸುವವರು   ಸಂಶೋಧನಾ ವಿದ್ವಾಂಸರು ಸರಸ್ವತಿ ವಂದಿಸಿದರು.. ಸಿಬಿಪಿಯ ಸಂಯೋಜಕ ಡಾ. ಕೆ. ತಿಯಾಗು ವಂದಿಸಿದರು.

Comments are closed.

Don`t copy text!