ಅಖಿಲ ಕರ್ನಾಟಕ ದಲಿತ ಸೇನೆ ರಾಜಾಧ್ಯಕ್ಷ ದತ್ತಾತ್ರೇಯ ಕುಡಕಿ ಎಚ್ಚರಿಕೆ
ಆಳಂದ ವಾರ್ಡ್‍ಗಳಲ್ಲಿ ಮೂಲಸೌಲಭ್ಯ ನಿರ್ಲಕ್ಷ್ಯ ಖಂಡಿಸಿ ಧರಣಿ
ಆಳಂದ: ಬೇಡಿಕೆಗೆ ಒತ್ತಾಯಿಸಿ ಪುರಸಭೆ ಆವರಣದಲ್ಲಿ ಎಕೆಡಿಎಸ್ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ ನೇತೃತ್ವದಲ್ಲಿ ಕಾರ್ಯಕರ್ತರು, ವಾರ್ಡ್ ಮಹಿಳೆಯರು ಸೇರಿ ಧರಣಿ ಸತ್ಯಾಗ್ರಹ ನಡೆಸಿದರು.
ಆಳಂದ: ಪಟ್ಟಣದ ಪುರಸಭೆ ವಾರ್ಡ್ ಸಂಖ್ಯೆ 25 ಹಾಗೂ 26ರಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಸಾರ್ವಜನಿಕರು, ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಅಖಿಲ ಕರ್ನಾಟಕ ದಲಿತ ಸೇನೆ ತಾಲೂಕು ಸಮಿತಿಯ ಕಾರ್ಯಕರ್ತರು ರಾಜಾಧ್ಯಕ್ಷ ದತ್ತಾತ್ರೇಯ ಕುಡಕಿನೇತೃತ್ವದಲ್ಲಿ ಪುರಸಭೆ ಆವರಣದಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡು ಆಡಳಿತಕ್ಕೆ ಎಚ್ಚರಿಸಿದರು.
ಧರಣಿಯಲ್ಲಿ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಅವರು ಮಾತನಾಡಿ, ವಾರ್ಡ್‍ಗಳಲ್ಲಿ ಬರುವ ಆಶ್ರಯ ಕಾಲೋನಿ, ಶಕ್ತಿನಗರ, ಲಕ್ಷ್ಮೀನಗರ, ಸಿದ್ದನಗರ, ವೆಂಕಟೇಶನಗರ, ಮರಗಮ್ಮ ದೇವಿನಗರ ಸೇರಿದಂತೆ ಈ ವಾರ್ಡ್‍ಗಳಲ್ಲಿನ ಹಲವು ಪ್ರದೇಶಗಳಲ್ಲಿ ಸಿಸಿ ರಸ್ತೆ, ಒಳಚರಂಡಿ, ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರು, ಒಳಚರಂಡಿಗಳ ಮೇಲೆ ಸ್ಲಾಬ್, ಮತ್ತು ರಸ್ತೆಯ ಕೆಸರು ತೆರವುಗೊಳಿಸಿ ಮುರುಮ್ ಹಾಕುವಂತಹ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಬಡಾವಣೆಯ ನಿವಾಸಿಗಳು ಪುರಸಭೆ ಆಡಳಿತ ಗಮನಕ್ಕೆ ತಂದರು ಯಾವುದೇ ಕ್ರಮಕೈಗೊಂಡಿಲ್ಲ ಪರಿಸ್ಥಿತಿ ಹೀಗೆ ಮುಂದುವರೆದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಆಶ್ರಯ ಕಾಲೋನಿಯ ಸರ್ಕಾರಿ ರಸ್ತೆಯಲ್ಲಿ ಅತಿಕ್ರಮಣದಿಂದಾಗಿ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗಿದೆ. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಗಳು ಜನರ ಓಡಾಟಕ್ಕೆ ಸಂಕಷ್ಟ ತಂದಿವೆ. ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಆಶ್ರಯ ಕಾಲೋನಿಯಲ್ಲಿ ಅತಿಕ್ರಮಣ ತೆರವುಗೊಳಿಸುವುದು. ಲಕ್ಷ್ಮೀನಗರದ ಸರ್ಕಾರಿ ರಸ್ತೆಯಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣಕೈಗೊಳ್ಳಬೇಕು. ಶಕ್ತಿನಗರ, ಸಿದ್ದಗೌಡ, ಸಿದ್ದನಗರದಲ್ಲಿ ಕಚ್ಚಾ ರಸ್ತೆಗಳಿಗೆ ಮುರುಮ್ ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಿ, ಪ್ರತಿ 10-12 ದಿನಗಳಿಗೊಮ್ಮೆ ಬಿಡುಗಡೆಯಾಗುವ ಕುಡಿಯುವ ನೀರನ್ನು ದಿನನಿತ್ಯ ಒದಗಿಸಬೇಕು. ಬಡಾವಣೆಯ 30 ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸುವುದು. ಒಳಚರಂಡಿಗಳ ಮೇಲೆ ಸಂಚಾರಕ್ಕೆ ಸ್ಲಾಬ್‍ಗಳನ್ನು ಅಳವಡಿಸಬೇಕು ಅಲ್ಲದೆ, ಮಹಿಳಾ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿಕಟಪೂರ್ವ ಅಧ್ಯಕ್ಷ ಬಾಬುರಾವ್ ಅರುಣೋದಯ, ಗೌರವ ಅಧ್ಯಕ್ಷ ಆನಂದರಾಯ ಗಾಯಕವಾಡ, ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ, ತಾಲೂಕು ಅಧ್ಯಕ್ಷ ಭೋಜರಾಜ ಜುಭ್ರೆ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಶಿವಪುತ್ರ ಆರ್ಯ, ಅಮರ ಜಿಡಗಾ, ಲೋಕೇಶ ಜಿಂಗೆ, ಸುಧೀಪ ಮೋರೆ, ಸಂತೋಷ ಸಿಂಗೆ, ಪಪ್ಪು ಕೋರೆ ಸೇರಿದಂತೆ ಬಡಾವಣೆಯ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದ್ದರು.
ಧರಣಿ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಬೇಡಿಕೆಯ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿ ಬೇಡಿಕೆ ಈಡೇರಿಕೆಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆಯಲಾಯಿತು.
Comments are closed.